

ಅಮರಾವತಿ: ಟಾಲಿವುಡ್ ಪವರ್ಸ್ಟಾರ್ ಪವನ್ ಕಲ್ಯಾಣ(Pawan Kalyan) ರಾಜಕೀಯಕ್ಕೆ ಎಂಟ್ರಿ ಕೊಟ್ಟಿದ್ದರು ಸಹ ಅವರಿಗಿರುವ ಕ್ರೇಜ್ ಕಡಿಮೆ ಆಗಿಲ್ಲ. ಇಂದಿಗೂ ಅವರ ಸಿನಿಮಾ ಬಿಡುಗಡೆಯಾದರೆ ಬಾಕ್ಸ್ಆಫೀಸ್ ಹಿಟ್ ಆಗುವುದರಲ್ಲಿ ಯಾವುದೇ ಸಂದೇಹವಿಲ್ಲ. 2024ರ ಚುನಾವಣೆಯಲ್ಲಿ ಗೆದ್ದ ನಂತರ ಅವರು ರಾಜಕೀಯ ಪ್ರವೇಶಿಸಿ ಆಂಧ್ರಪ್ರದೇಶದ ಶಾಸಕ/ಉಪ ಮುಖ್ಯಮಂತ್ರಿಯಾಗಿರುವುದು ಗೊತ್ತೆ ಇದೆ. ರಾಜಕೀಯ ಜೀವನದಲ್ಲಿ ಕಾರ್ಯನಿರತವಾಗಿದ್ದರೂ ಸಹ ಚಲನಚಿತ್ರಗಳಿಂದ ನಿವೃತ್ತಿ ಹೊಂದುವುದಿಲ್ಲ ಎಂದು ಸ್ವತಃ ಪವನ್ ಕಲ್ಯಾಣ್ ಅವರೆ ತಿಳಿಸಿದ್ದಾರೆ.
ರಾಜಕೀಯದಲ್ಲಿ ಪವನ್ ಕಲ್ಯಾಣ್ ಬ್ಯುಸಿಯಾಗುತ್ತಿದ್ದಂತೆ ಉದ್ಯಮದ ಜನರು, ಅಭಿಮಾನಿಗಳು ಮತ್ತು ಪ್ರೇಕ್ಷಕರು ಸಹ ಪವರ್ ಸ್ಟಾರ್ ಇನ್ಮುಂದೆ ಯಾವುದೇ ಸಿನಿಮಾಗಳಿಗೆ ಸಹಿ ಹಾಕುವುದಿಲ್ಲ ಮತ್ತು ಅವರು ಕಮಿಟ್ ಆಗಿರುವ ಸಿನಿಮಾಗಳನ್ನು ಪೂರ್ಣಗೊಳಿಸುತ್ತಾರೆ ಎಂದು ಹೇಳುತ್ತಿದ್ದರು. ಆದರೀಗೆ ಪವರ್ ತನ್ನ ಅಭಿಮಾನಿಗಳಿಗೆ ಖುಷಿ ವಿಚಾರವನ್ನು ತಿಳಿಸಿದ್ದಾರೆ.
ಇತ್ತೀಚಿನ ಸಂದರ್ಶನವೊಂದರಲ್ಲಿ ಪವನ್ ಕಲ್ಯಾಣ್, ತಾವು ಯಾವಾಗಲೂ ಜನರಿಗಾಗಿ ಕೆಲಸ ಮಾಡಲು ಬಯಸುತ್ತಿದ್ದೆವು ಆದ್ದರಿಂದ ರಾಜಕೀಯ ಜೀವನವನ್ನು ಮುಂದುವರಿಸುತ್ತೇವೆ. ಅದರ ಜತೆಗೆ ಹಣ ಬೇಕಾಗುವವರೆಗೆ ಸಿನಿಮಾ ಮಾಡುವುದನ್ನು ಮುಂದುವರಿಸುತ್ತೇನೆ ಎಂದು ಹೇಳಿದ್ದಾರೆ. ಹಣದ ಅಗತ್ಯವಿರುವವರೆಗೂ ಸಿನಿಮಾ ಮಾಡುವುದನ್ನು ಮುಂದುವರಿಸುತ್ತೆನೆ. ಆದರೆ ರಾಜಕೀಯ ಕೆಲಸಗಳು ಮತ್ತು ಆಡಳಿತ ಕೆಲಸಗಳಲ್ಲಿ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಈ ಹೇಳಿಕೆಯ ಪ್ರಕಾರ, ಪವನ್ ಕಲ್ಯಾಣ್ ಸಿನಿಮಾ ಮಾಡಲು ಆಸಕ್ತಿ ಹೊಂದಿದ್ದಾರೆ ಆದರೆ ನಿಯಮಿತವಾಗಿ ಅಲ್ಲ ಎಂಬುದು ಇದರ ಅರ್ಥವಾಗಿದೆ.
ಅವರು ಬಹುಶಃ ವರ್ಷಕ್ಕೆ ಕೆಲವು ದಿನಗಳಂತೆ ಸಿನಿಮಾದಲ್ಲಿ ಆಗಾಗ್ಗೆ ಕೆಲಸ ಮಾಡುತ್ತಾರೆ. ಪವನ್ ಕಲ್ಯಾಣ್ ತಮ್ಮ ರಾಜಕೀಯ ಜೀವನ ಕಾರ್ಯನಿರತವಾಗಿದ್ದರೂ ಚಲನಚಿತ್ರಗಳಿಂದ ನಿವೃತ್ತಿ ಹೊಂದುವುದಿಲ್ಲ ಎಂದು ತಿಳಿದಾಗ ಅವರ ಅಭಿಮಾನಿಗಳು ಸಿನಿಮಾ ನೋಡುವ ಉತ್ಸುಕತೆಯನ್ನು ವ್ಯಕ್ತಪಡಿಸುತ್ತಿದ್ದಾರೆ.
ಪವನ್ ಕಲ್ಯಾಣ್ ಕೊನೆಯ ಬಾರಿಗೆ 2023ರಲ್ಲಿ ತಮ್ಮ ಸೋದರಳಿಯ ಸಾಯಿ ದುರ್ಘಾ ತೇಜ್ ಜತೆ ‘ಬ್ರೋ’ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಮುಂದೆ 'ಹರಿ ಹರ ವೀರ ಮಲ್ಲು' ಚಿತ್ರದ ಚಿತ್ರೀಕರಣವನ್ನು ಕಟ್ಟುನಿಟ್ಟಿನ ಆಹಾರಕ್ರಮ ಅನುಸರಿಸಿ ಪೂರ್ಣಗೊಳಿಸಬೇಕಾಗಿದೆ. ಈ ಬೇಸಿಗೆಯಲ್ಲಿ ಎರಡೂ ಚಿತ್ರಗಳ ಚಿತ್ರೀಕರಣವನ್ನು ಪೂರ್ಣಗೊಳಿಸಲು ಪವನ್ ಕಲ್ಯಾಣ್ ಸಜ್ಜಾಗಿದ್ದಾರೆ. 'ಹರಿ ಹರ ವೀರ ಮಲ್ಲು' ಚಿತ್ರವು ಮೇ 9ರಂದು ಬಿಡುಗಡೆಯಾಗಲಿದೆ ಎಂದು ಈಗಾಗಲೇ ಘೋಷಿಸಲಾಗಿದ್ದು, 'ದೆ ಕಾಲ್ ಹಿಮ್ ಓಜಿ' ಸೆಪ್ಟೆಂಬರ್ನಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ.(ಏಜೆನ್ಸೀಸ್)