'ಮಹಾ' ಪ್ರವಾಹ: 24 ಗಂಟೆಗಳ ಅವಧಿಯಲ್ಲಿ ಖಚಿತವಾಯಿತು ಕೋವಿಡ್19ರ 216 ಕೇಸ್

corona marraigeweb
Published on

ಬೆಂಗಳೂರು: ಕೋವಿಡ್ 19 ಕರೊನಾ ವೈರಸ್ ಸೋಂಕು ಪೀಡಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಕಳೆದ 24 ಗಂಟೆಗಳ ಅವಧಿಯಲ್ಲಿ ಅಂದರೆ ನಿನ್ನೆ ಸಂಜೆ 5 ರಿಂದ ಇಂದು ಸಂಜೆ 5 ಗಂಟೆವರೆಗಿನ ಅವಧಿಯಲ್ಲಿ 216 ಕೇಸ್​ಗಳು ಖಚಿತವಾಗಿದೆ. ಬಹುತೇಕರು ಮಹಾರಾಷ್ಟ್ರದಿಂದ ಆಗಮಿಸಿದವರಾಗಿದ್ದು, ಉಳಿದವರಲ್ಲಿ ಕೆಲವರು ನವದೆಹಲಿಯಿಂದ, ಗುಜರಾತ್​ನಿಂದ ಆಗಮಿಸಿದವರೂ ಇದ್ದಾರೆ. ಇನ್ನುಳಿದಂತೆ ಸ್ಥಳೀಯ ಸೋಂಕುಪೀಡಿತರ ಸಂಪರ್ಕಕ್ಕೆ ಒಳಗಾದವರ ಸಂಖ್ಯೆ ಕಡಿಮೆ ಇದೆ.

ರಾಜ್ಯದಲ್ಲಿ ಶನಿವಾರ ಸಕ್ರಿಯವಾಗಿರುವ ಒಟ್ಟು ಕೇಸ್​ಗಳ ಸಂಖ್ಯೆ 1307. ಇಂದು ಆಸ್ಪತ್ರೆಯಿಂದ ಬಿಡುಗಡೆಹೊಂದಿದವರು 11 ಆಗಿದ್ದು, ಒಟ್ಟು ಬಿಡುಗಡೆಯಾದವರ ಸಂಖ್ಯೆ 608. ಐಸಿಯುನಲ್ಲಿ ಸದ್ಯ 13 ಕೋವಿಡ್​ ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಕೋವಿಡ್​ 19 ಸೋಂಕಿಗೆ ಒಳಗಾದವರ ಪೈಕಿ ಇಂದು ಒಬ್ಬರು ಮೃತಪಟ್ಟಿದ್ದಾರೆ. ಒಟ್ಟು ಮೃತರ ಸಂಖ್ಯೆ 42ಕ್ಕೆ ಏರಿಕೆಯಾಗಿದೆ. ಇದರಲ್ಲಿ ಎರಡು ಪ್ರಕರಣಗಳಲ್ಲಿ ಕೋವಿಡ್ ಸೋಂಕು ಪೀಡಿತರು ಅನ್ಯಕಾರಣಕ್ಕೆ ಮೃತಪಟ್ಟಿದ್ದಾರೆ. ರಾಜ್ಯದಲ್ಲಿ ಇದುವರೆಗೆ ಒಟ್ಟಾರೆ ಪ್ರಕರಣಗಳ ಸಂಖ್ಯೆ 1959ಕ್ಕೆ ಏರಿಕೆಯಾಗಿದೆ.

ಇಂದು ಪತ್ತೆಯಾದ 216 ಹೊಸ ಪ್ರಕರಣಗಳ ಪೈಕಿ ಯಾದಗಿರಿಯಲ್ಲಿ ಗರಿಷ್ಠ 72, ರಾಯಚೂರು 40, ಮಂಡ್ಯ 28, ಚಿಕ್ಕಬಳ್ಳಾಪುರ 26, ಗದಗ 15, ಧಾರವಾಡ 5, ಬೆಂಗಳೂರು ನಗರ, ಹಾಸನಗಳಲ್ಲಿ ತಲಾ 4, ದಾವಣಗೆರೆ, ಬೀದರ್, ದಕ್ಷಿಣ ಕನ್ನಡ, ಉಡುಪಿ, ಬಳ್ಳಾರಿ, ಕೋಲಾರಗಳಲ್ಲಿ ತಲಾ 3, ಉತ್ತರ ಕನ್ನಡ 2, ಕಲಬುರಗಿ, ಬೆಳಗಾವಿಗಳಲ್ಲಿ ತಲಾ ಒಂದು ಪ್ರಕರಣಗಳು ಸೇರಿವೆ. ಉಳಿದ ವಿವರಗಳಿಗೆ ಕೋಷ್ಟಕಗಳಿರುವ ಕೆಳಗಿನ ಗ್ಯಾಲರಿಯನ್ನು ಗಮನಿಸಿ...

COVID 19 Health Bulletin GoK 23 MAY 8
COVID 19 Health Bulletin GoK 23 MAY 9
COVID 19 Health Bulletin GoK 23 MAY 10
COVID 19 Health Bulletin GoK 23 MAY 11
COVID 19 Health Bulletin GoK 23 MAY 12
COVID 19 Health Bulletin GoK 23 MAY 13
COVID 19 Health Bulletin GoK 23 MAY 14
COVID 19 Health Bulletin GoK 23 MAY 15
COVID 19 Health Bulletin GoK 23 MAY 16
COVID 19 Health Bulletin GoK 23 MAY 17
COVID 19 Health Bulletin GoK 23 MAY 18

ಬೆಂಗಳೂರು: ಕೋವಿಡ್ 19 ಕರೊನಾ ವೈರಸ್ ಸೋಂಕು ಪೀಡಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಕಳೆದ 24 ಗಂಟೆಗಳ ಅವಧಿಯಲ್ಲಿ ಅಂದರೆ ನಿನ್ನೆ ಸಂಜೆ 5 ರಿಂದ ಇಂದು ಸಂಜೆ 5 ಗಂಟೆವರೆಗಿನ ಅವಧಿಯಲ್ಲಿ 216 ಕೇಸ್​ಗಳು ಖಚಿತವಾಗಿದೆ. ಬಹುತೇಕರು ಮಹಾರಾಷ್ಟ್ರದಿಂದ ಆಗಮಿಸಿದವರಾಗಿದ್ದು, ಉಳಿದವರಲ್ಲಿ ಕೆಲವರು ನವದೆಹಲಿಯಿಂದ, ಗುಜರಾತ್​ನಿಂದ ಆಗಮಿಸಿದವರೂ ಇದ್ದಾರೆ. ಇನ್ನುಳಿದಂತೆ ಸ್ಥಳೀಯ ಸೋಂಕುಪೀಡಿತರ ಸಂಪರ್ಕಕ್ಕೆ ಒಳಗಾದವರ ಸಂಖ್ಯೆ ಕಡಿಮೆ ಇದೆ.

ರಾಜ್ಯದಲ್ಲಿ ಶನಿವಾರ ಸಕ್ರಿಯವಾಗಿರುವ ಒಟ್ಟು ಕೇಸ್​ಗಳ ಸಂಖ್ಯೆ 1307. ಇಂದು ಆಸ್ಪತ್ರೆಯಿಂದ ಬಿಡುಗಡೆಹೊಂದಿದವರು 11 ಆಗಿದ್ದು, ಒಟ್ಟು ಬಿಡುಗಡೆಯಾದವರ ಸಂಖ್ಯೆ 608. ಐಸಿಯುನಲ್ಲಿ ಸದ್ಯ 13 ಕೋವಿಡ್​ ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಕೋವಿಡ್​ 19 ಸೋಂಕಿಗೆ ಒಳಗಾದವರ ಪೈಕಿ ಇಂದು ಒಬ್ಬರು ಮೃತಪಟ್ಟಿದ್ದಾರೆ. ಒಟ್ಟು ಮೃತರ ಸಂಖ್ಯೆ 42ಕ್ಕೆ ಏರಿಕೆಯಾಗಿದೆ. ಇದರಲ್ಲಿ ಎರಡು ಪ್ರಕರಣಗಳಲ್ಲಿ ಕೋವಿಡ್ ಸೋಂಕು ಪೀಡಿತರು ಅನ್ಯಕಾರಣಕ್ಕೆ ಮೃತಪಟ್ಟಿದ್ದಾರೆ. ರಾಜ್ಯದಲ್ಲಿ ಇದುವರೆಗೆ ಒಟ್ಟಾರೆ ಪ್ರಕರಣಗಳ ಸಂಖ್ಯೆ 1959ಕ್ಕೆ ಏರಿಕೆಯಾಗಿದೆ.

ಇಂದು ಪತ್ತೆಯಾದ 216 ಹೊಸ ಪ್ರಕರಣಗಳ ಪೈಕಿ ಯಾದಗಿರಿಯಲ್ಲಿ ಗರಿಷ್ಠ 72, ರಾಯಚೂರು 40, ಮಂಡ್ಯ 28, ಚಿಕ್ಕಬಳ್ಳಾಪುರ 26, ಗದಗ 15, ಧಾರವಾಡ 5, ಬೆಂಗಳೂರು ನಗರ, ಹಾಸನಗಳಲ್ಲಿ ತಲಾ 4, ದಾವಣಗೆರೆ, ಬೀದರ್, ದಕ್ಷಿಣ ಕನ್ನಡ, ಉಡುಪಿ, ಬಳ್ಳಾರಿ, ಕೋಲಾರಗಳಲ್ಲಿ ತಲಾ 3, ಉತ್ತರ ಕನ್ನಡ 2, ಕಲಬುರಗಿ, ಬೆಳಗಾವಿಗಳಲ್ಲಿ ತಲಾ ಒಂದು ಪ್ರಕರಣಗಳು ಸೇರಿವೆ. ಉಳಿದ ವಿವರಗಳಿಗೆ ಕೋಷ್ಟಕಗಳಿರುವ ಕೆಳಗಿನ ಗ್ಯಾಲರಿಯನ್ನು ಗಮನಿಸಿ...

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net