'ಮೇಡ್ ಇನ್ ಇಂಡಿಯಾ' ಸ್ಮಾರ್ಟ್‌ಫೋನ್‌ಗಳನ್ನು ಆಮದು ಮಾಡಿಕೊಳ್ಳುತ್ತಿರುವ ದೇಶಗಳಿವು!

ವಿಜಯವಾಣಿ - 2024-01-21T153938.206
Published on

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ನಮಗೆಲ್ಲಾ ತಿಳಿದಿರುವ ಪ್ರಕಾರ ಅತ್ಯಂತ ವೇಗವಾಗಿ ಚಲಿಸುತ್ತಿರುವ ಟೆಕ್ನಾಲಜಿ ಹೊಚ್ಚ ಹೊಸ ಆವಿಷ್ಕಾರಗಳನ್ನು ಪರಿಚಯಿಸುವಲ್ಲಿ ಮುಂಚೂಣಿಯಲ್ಲಿದೆ. ನೂತನ ಎಲೆಕ್ಟ್ರಾನಿಕ್​ ಗ್ಯಾಡೆಜ್ಟ್​​ಗಳು ಗ್ರಾಹಕರನ್ನು ಹೆಚ್ಚು ಆರ್ಕಷಿಸುತ್ತಿದ್ದು, ಮಾರುಕಟ್ಟೆಗೆ ಬಂದ ತಕ್ಷಣ ಅದನ್ನು ಖರೀದಿ ಮಾಡುವ ಮೂಲಕ ಆಯಾ ದೇಶದ ಕಂಪೆನಿಗಳನ್ನು ಅಭಿವೃದ್ಧಿ ಪಡಿಸುವಲ್ಲಿ ಗ್ರಾಹಕರಾದ ನಾವು ಸಹಾಯ ಮಾಡುತ್ತಿದ್ದೇವೆ.

ಇದೀಗ ಭಾರತವು ಅಧುನಿಕ ಟೆಕ್ನಾಲಜಿ ಬಳಸಿ ಹೊಚ್ಚ ಹೊಸ ಸ್ಮಾರ್ಟ್​ಫೋನ್​ಗಳನ್ನು 'ಮೇಡ್​ ಇನ್​ ಇಂಡಿಯಾ' ಅಡಿ ತಯಾರಿಸಿ, ಮಾರುಕಟ್ಟೆಗೆ ಬಿಡುತ್ತಿದ್ದು, ಈ ಮೂಲಕ ಕೇವಲ ಭಾರತೀಯ ಗ್ರಾಹಕರನ್ನು ಮಾತ್ರ ಸೆಳೆಯದೆ, ಇತರೆ ದೇಶಗಳು ಹೆಚ್ಚಿನ ಸಂಖ್ಯೆಯಲ್ಲಿ ಆಮದು ಮಾಡಿಕೊಳ್ಳುವಂತೆ  ಮಾಡಿದೆ.

ಅತ್ಯಾಧುನಿಕ ಫೀಚರ್ಸ್​​ಗಳೊಂದಿಗೆ ಮಾರುಕಟ್ಟೆ ಪ್ರವೇಶಿಸುತ್ತಿರುವ ಮೇಕ್ ಇನ್ ಇಂಡಿಯಾದ ಸ್ಮಾರ್ಟ್​ಫೋನ್​ಗಳನ್ನು ಆಮದು ಮಾಡಿಕೊಂಡ ದೇಶಗಳಲ್ಲಿ ಯಾವ ದೇಶ, ಯಾವ ಸ್ಥಾನದಲ್ಲಿದೆ ಎಂಬುದರ ಪಟ್ಟಿ ಈ ಕೆಳಕಂಡಂತಿದೆ..

'ಮೇಡ್ ಇನ್ ಇಂಡಿಯಾ' ಸ್ಮಾರ್ಟ್‌ಫೋನ್‌ಗಳನ್ನು ಆಮದು ಮಾಡಿಕೊಳ್ಳುತ್ತಿರುವ ದೇಶಗಳು (2022-23):

ಯುಎಇ: 23.40%

ಅಮೆರಿಕಾ: 19.70%

ನೆದರ್ಲ್ಯಾಂಡ್: 9.73%

ಯುಕೆ: 7.77%

ಇಟಲಿ: 6.54%

ಆಸ್ಟ್ರಿಯಾ: 6.43%

ಜೆಕ್ ರಿಪಬ್ಲಿಕ್: 5.97%

ಜರ್ಮನಿ: 4.18%

ಸೌದಿ ಅರೇಬಿಯಾ: 2.73%

ಫ್ರಾನ್ಸ್: 2.26%

ಇತರೆ: 14.99%​ ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net