ಅಯೋಧ್ಯೆ ರಾಮಮಂದಿರಕ್ಕೆ ಭಾರೀ ಮೊತ್ತದ ದೇಣಿಗೆ ಕೊಟ್ಟ 'ಹನು-ಮಾನ್'! ನೀಡಿದ ಹಣವೆಷ್ಟು? ಇಲ್ಲಿದೆ ಮಾಹಿತಿ

ವಿಜಯವಾಣಿ - 2024-01-21T145900.219
Published on

ಬೆಂಗಳೂರು: ಪ್ಯಾನ್ ಇಂಡಿಯಾ ಚಿತ್ರವಾಗಿ ಹೊರಹೊಮ್ಮಿದ 'ಹನು-ಮಾನ್​’ ಬಾಕ್ಸ್​ ಆಫೀಸ್​ನಲ್ಲಿ ಮಿಂಚಿನ ಓಟದಲ್ಲಿ ಸಾಗುತ್ತಿದೆ. ಆಕರ್ಷಕ ವಿಎಫ್​ಎಕ್ಸ್​ ಕೆಲಸಗಳಿಂದಲೇ ಹೆಚ್ಚು ಗಮನಸೆಳೆಯುತ್ತಿರುವ ಚಿತ್ರವು ಸದ್ಯ ಚಿತ್ರಮಂದಿರ ಮತ್ತು ಮಲ್ಟಿಪ್ಲೆಕ್ಸ್​ಗಳಲ್ಲಿ ಉತ್ತಮ ಪ್ರದರ್ಶನ ಕಾಣುವುದರ ಜತೆಗೆ ಅತ್ಯುತ್ತಮ ಗಳಿಕೆಯನ್ನು ಕಂಡಿದೆ. ಇದೀಗ ಇದೇ ಖುಷಿಯಲ್ಲಿ ಚಿತ್ರತಂಡ ತಮ್ಮ ಸಿನಿಮಾಗೆ ಸಿಕ್ಕ ಲಾಭದಲ್ಲಿ ಅಯೋಧ್ಯೆ ರಾಮಮಂದಿರ ದೇವಾಲಯಕ್ಕೆ ದೇಣಿಗೆ ಕೊಟ್ಟು ಎಲ್ಲರ ಪ್ರೀತಿ-ಮೆಚ್ಚುಗೆಗೆ ಪಾತ್ರವಾಗಿದೆ.

ರಾಮಮಂದಿರಕ್ಕೆ ಭಾರೀ ಮೊತ್ತದ ದೇಣಿಗೆ ಕೊಟ್ಟ ಹನು-ಮಾನ್​ ಚಿತ್ರತಂಡ, ಸಿನಿಮಾ ವೀಕ್ಷಿಸಲು ಪ್ರತಿ ಟಿಕೆಟ್​ಗೆ ನಿಗದಿಪಡಿಸಿರುವ ದರದಲ್ಲಿ 5 ರೂ. ಅನ್ನು ದೇಗುಲದ ದೇಣಿಗೆಗೆ ಎಂದು ನಿರ್ಧರಿಸಿತ್ತು. ಅದರಂತೆಯೇ ಗಲ್ಲಾಪೆಟ್ಟಿಗೆಯಲ್ಲಿ ಅತ್ಯುತ್ತಮ ಪ್ರದರ್ಶನ ಮುಂದುವರೆಸಿ, ಇಲ್ಲಿಯವರೆಗೆ 53,28,211 ಟಿಕೆಟ್‌ಗಳಿಂದ 2,66,41,055 ರೂ. ಅನ್ನು ದೇಣಿಗೆಯಾಗಿ ನೀಡಿದೆ.

ಈ ಹಿಂದೆ ವಿಶೇಷ ಪ್ರೀಮಿಯರ್ ಶೋಗಳಲ್ಲಿ ಮಾರಾಟವಾದ 2,97,162 ಟಿಕೆಟ್‌ಗಳಿಂದ 14,85,810 ರೂ.ಗಳ ಚೆಕ್​ ಅನ್ನು ಚಿತ್ರತಂಡ ದೇಗುಲಕ್ಕೆ ನೀಡಿತ್ತು. ಇದೀಗ 53,28,211 ಟಿಕೆಟ್‌ಗಳಿಂದ 2,66,41,055 ರೂ. ಹಣವನ್ನು ಕೊಡುಗೆಯಾಗಿ ಅರ್ಪಿಸಿದೆ.

ಪ್ರೈಮ್‌ಶೋ ಎಂಟರ್‌ಟೈನ್‌ಮೆಂಟ್‌ನಲ್ಲಿ ನಿರಂಜನ್ ರೆಡ್ಡಿ ನಿರ್ಮಿಸಿದ ಹನು-ಮಾನ್​ ಚಿತ್ರವು ಜಾಗತಿಕವಾಗಿ 150 ಕೋಟಿ ರೂ.ಗಳ ಮೈಲಿಗಲ್ಲು ಸಾಧಿಸಿ, ಬಾಕ್ಸ್​ ಆಫೀಸ್​ನಲ್ಲಿ ಅಬ್ಬರಿಸುತ್ತಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net