ಪಶ್ಚಿಮ ಬಂಗಾಳ: ಬಂಗಾಳ ಪೊಲೀಸರ ವಿಶೇಷ ಕಾರ್ಯಪಡೆ (ಎಸ್‌ಟಿಎಫ್) ತಂಡವು ಸುಮಾರು 54,000 ಎಸ್ಕುಫ್ ಎಂಬ ಕೆಮ್ಮಿನ ಸಿರಪ್ ಬಾಟಲಿಗಳನ್ನು ಇದೀಗ ತನಿಖೆಯ ಮೂಲಕ ವಶಪಡಿಸಿಕೊಂಡಿದೆ, ಕೆಮ್ಮು ಸಿರಪ್ (cough syrup) ಅನ್ನು ಮಾದಕ ದ್ರವ್ಯವಾಗಿ ಬಳಸಲಾಗುತ್ತಿತ್ತು, ಇದರ ಮೌಲ್ಯ 8 ಕೋಟಿ ರೂಪಾಯಿ ಇದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: 8 ಮೊಬೈಲ್, 20 ಸಿಮ್, 6 ನಕಲಿ ಹೆಸರು! 1,600 ಕಿ.ಮೀ ಬೆನ್ನಟ್ಟಿ ಕೊಲೆ ಆರೋಪಿ ಸೆರೆಹಿಡಿದ ಖಾಕಿ ಪಡೆ | Murder Case
ಅಕ್ಟೋಬರ್ 31 ಮತ್ತು ನವೆಂಬರ್ 1ರ ನಡುವಿನ ಮುಂಜಾನೆ ಸಿಕ್ಕ ಸುಳಿವಿನ ಮೇರೆಗೆ ಎಸ್‌ಟಿಎಫ್‌ನ ಸಿಲಿಗುರಿ ಘಟಕದ ತಂಡವು ಮುರುಳಿಗಚ್ ಫಾರೆಸ್ಟ್ ಚೆಕ್ ಪೋಸ್ಟ್ ಬಳಿ ದಾಳಿ ನಡೆಸಿತು, ಈ ವೇಳೆ ಅಕ್ರಮ ವಸ್ತುಗಳನ್ನು ಸಾಗಿಸಲು ಬಳಸಿದ ಟ್ರಕ್ ಅನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಸರಕುಗಳನ್ನು ಟ್ರಕ್‌ನೊಳಗೆ ಬಚ್ಚಿಟ್ಟು, ಅಕ್ರಮವಾಗಿ ಸಾಗಿಸಲಾಗುತ್ತಿತ್ತು ಎಂದು ವರದಿಯಾಗಿದೆ.
ಇದನ್ನೂ ಓದಿ: ‘Pushpa 2’ ನ್ಯೂಪೋಸ್ಟರ್ ರಿಲೀಸ್; ಸಿನಿಮಾ ಬಿಡುಗಡೆಗೆ ಆ ದಿನವೇ ಫಿಕ್ಸ್ ಎಂದ ಚಿತ್ರತಂಡ
ಅಸ್ಸಾಂನ ಚಿರಾಂಗ್ ನಿವಾಸಿ 36 ವರ್ಷದ ಅಬು ತಾಹೆರ್ ಎಂಬಾತನನ್ನೂ ಸದ್ಯ ಪೊಲೀಸರು ಬಂಧಿಸಿದ್ದಾರೆ. ತಾಹೆರ್ ಜಾರ್ಖಂಡ್‌ನಿಂದ ಅಸ್ಸಾಂಗೆ ಅಕ್ರಮ ಸರಕುಗಳನ್ನು ಸಾಗಿಸುತ್ತಿದ್ದ. ಈತ ಅಂತರ ರಾಜ್ಯ ಮಾದಕವಸ್ತು ಕಳ್ಳಸಾಗಣೆ ಜಾಲದ ಭಾಗವಾಗಿದೆ ಎಂದು ಪ್ರಾಥಮಿಕ ತನಿಖೆಗಳು ಸೂಚಿಸಿವೆ. ವಸ್ತುಗಳನ್ನು ವಶಪಡಿಸಿಕೊಂಡ ಬೆನ್ನಲ್ಲೇ ಅಧಿಕಾರಿಗಳು ನಾರ್ಕೋಟಿಕ್ ಡ್ರಗ್ಸ್ ಮತ್ತು ಸೈಕೋಟ್ರೋಪಿಕ್ ಸಬ್‌ಸ್ಟೆನ್ಸ್ (ಎನ್‌ಡಿಪಿಎಸ್) ಕಾಯ್ದೆಯಡಿ ಈ ಪ್ರಕರಣವನ್ನು ದಾಖಲಿಸಿದ್ದಾರೆ.
ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ
ಈ ವರ್ಷದ ಮೇನಲ್ಲಿ ಪಶ್ಚಿಮ ಬಂಗಾಳದ ಎಸ್‌ಟಿಎಫ್ ಕೋಲ್ಕತ್ತಾದಿಂದ 2.5 ಕೆಜಿ ಹೆರಾಯಿನ್ ವಶಪಡಿಸಿಕೊಂಡಿತ್ತು. ಮತ್ತು ಅಕ್ರಮ ವಸ್ತುಗಳನ್ನು ಸಾಗಿಸಿದ ಆರೋಪದ ಮೇಲೆ ಐವರನ್ನು ಬಂಧಿಸಿತ್ತು. ವಶಪಡಿಸಿಕೊಂಡ ಡ್ರಗ್ಸ್ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ 2 ಕೋಟಿ ರೂ. ಬೆಲೆ ಬಾಳುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಪ್ರಕರಣದ ಆರೋಪಿಗಳನ್ನು ಅಜಯ್ ಪಾಲ್ (39), ಸಬೀರ್ ಅಹಮದ್ (24), ಸುಜೋನ್ ಸೇಖ್ (28), ಗೋಬಿಂದ ಮೊಂಡಲ್ (37) ಮತ್ತು ಸರೋಬ್ ಶೇಖ್ (23) ಎಂದು ಗುರುತಿಸಲಾಗಿದೆ,(ಏಜೆನ್ಸೀಸ್).
ಪೆಟ್ರೋಲ್ ಹಾಕಿಸಿಕೊಳ್ಳುವವರು ಈ ಮಿಸ್ಟೇಕ್ಸ್ ಎಂದಿಗೂ ಮಾಡ್ಬೇಡಿ! ತಪ್ಪಿದರೆ ಅಪಾಯ ಕಟ್ಟಿಟ್ಟಬುತ್ತಿ | Petrol