8 ಮೊಬೈಲ್​, 20 ಸಿಮ್​, 6 ನಕಲಿ ಹೆಸರು! 1,600 ಕಿ.ಮೀ ಬೆನ್ನಟ್ಟಿ ಕೊಲೆ ಆರೋಪಿ ಸೆರೆಹಿಡಿದ ಖಾಕಿ ಪಡೆ | Murder Case

murder case

ನವದೆಹಲಿ: ವೈದ್ಯರನ್ನು ಕೊಲೆಗೈದು ಪೊಲೀಸರ ಕಣ್ಣಿಗೆ ಮಣ್ಣೆರಚಿ, ನಾನಾ ರೀತಿಯಲ್ಲಿ ಸಾಕ್ಷ್ಯ ನಾಶ ಮಾಡಿ, ತನ್ನ ಗುರುತು ಸಿಗದಂತೆ ದೇಶ ಬಿಟ್ಟು ಪರಾರಿಯಾಗಲು ಮುಂದಾಗಿದ್ದ ಆರೋಪಿಯನ್ನು 1,600 ಕಿ.ಮೀ ದೂರ ಚೇಸ್​ ಮಾಡಿ, ಸೆರೆಹಿಡಿಯುವಲ್ಲಿ ಇದೀಗ ದೆಹಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ವೈದ್ಯರೊಬ್ಬರನ್ನು ಹತ್ಯೆಗೈದಿದ್ದ (Murder Case) ಆರೋಪದಡಿ ತಲೆಮರಿಸಿಕೊಂಡಿದ್ದ ಆರೋಪಿ ವಿಷ್ಣು ಸ್ವರೂಪ್​ ಶಾಹಿ ಸದ್ಯ ಜೈಲಿನಲ್ಲಿ ಕಂಬಿ ಎಣಿಸುತ್ತಿದ್ದಾನೆ.

ಇದನ್ನೂ ಓದಿ: ಆತ​ ನಮ್ಮ ಮೊದಲ ಆಯ್ಕೆಯಾಗಿದ್ದ ಆದ್ರೆ… ಶ್ರೇಯಸ್​ ಅಯ್ಯರ್​ರನ್ನು ತಂಡದಿಂದ ಕೈಬಿಟ್ಟ ಕುರಿತು KKR CEO ಕೊಟ್ಟ ಸ್ಪಷ್ಟನೆ ಹೀಗಿದೆ

20 ಸಿಮ್‌ ಕಾರ್ಡ್‌

ಈ ವರ್ಷದ ಮೇ ತಿಂಗಳಲ್ಲಿ ದಕ್ಷಿಣ ದೆಹಲಿಯ ಜಂಗ್‌ಪುರದಲ್ಲಿ ನಡೆದ ಹೆಸರಾಂತ ವೈದ್ಯರೊಬ್ಬರ ಕೊಲೆ ಪ್ರಕರಣದ ಮಾಸ್ಟರ್‌ಮೈಂಡ್‌ ಪೊಲೀಸರಿಂದ ಪರಾರಿಯಾಗುವ ಮುನ್ನ ಕನಿಷ್ಠ ಎಂಟು ಮೊಬೈಲ್‌ ಫೋನ್‌ಗಳು ಮತ್ತು 20 ಸಿಮ್‌ ಕಾರ್ಡ್‌ಗಳನ್ನು ಬದಲಾಯಿಸಿದ್ದು, ತನ್ನ ಸುಳಿವು ಸಿಗದಿರಲಿ ಎಂದು 6 ನಕಲಿ ಹೆಸರುಗಳನ್ನು ಬಳಸಿಕೊಂಡಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ ಎಂದು ಪೊಲೀಸರು ಆತನನ್ನು ಬಂಧಿಸಿದ ಬಳಿಕ ಮಾಧ್ಯಮಗಳಿಗೆ ಮಾಹಿತಿ ಹಂಚಿಕೊಂಡಿದ್ದಾರೆ. ಭಾರತ-ನೇಪಾಳ ಗಡಿಯತ್ತ ಹೊರಟ್ಟಿದ್ದ ಆರೋಪಿಯನ್ನು ಬೆನ್ನಟ್ಟಿದ ಪೊಲೀಸರು, 1,600 ಕಿಮೀ ದೂರ ಆತನನ್ನು ಚೇಸ್​ ಮಾಡಿ, ಇದೀಗ ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಹೋದಲ್ಲೆಲ್ಲಾ ನಕಲಿ ಗುರುತಿನ ಚೀಟಿ

ಈ ಪ್ರಕರಣದಲ್ಲಿ ಯಾವ ಸುಳಿವು ಸಿಗಬಾರದು, ತನ್ನ ವಿವರ ಸಿಕ್ಕಿದರೆ ಪೊಲೀಸರು ಇಲ್ಲಿಗೆ ಹುಡುಕಿಕೊಂಡು ಬರುತ್ತಾರೆ ಎಂಬ ಭಯದಿಂದ ಆರು ಬಾರಿ ತನ್ನ ಹೆಸರನ್ನು ಬದಲಾಯಿಸಿಕೊಂಡಿದ್ದ ವಿಷ್ಣುಸ್ವರೂಪ್ ಶಾಹಿ, ಹೋದಲ್ಲೆಲ್ಲಾ ನಕಲಿ ಗುರುತಿನ ಚೀಟಿಗಳನ್ನು ಬಳಿಸಿಕೊಂಡು, ತನ್ನ ಕೆಲಸಗಳನ್ನು ಈಡೇರಿಸಿಕೊಂಡಿದ್ದಾನೆ. ವಿಷ್ಣು ಸ್ವರೂಪ್ ಶಾಹಿ, ಶಕ್ತಿ ಸಾಯಿ, ಸತ್ಯ ಸಾಯಿ, ಸೂರ್ಯ ಪ್ರಕಾಶ್ ಶಾಹಿ, ಗಗನ್ ಓಲಿ ಮತ್ತು ಕೃಷ್ಣ ಶಾಹಿ ಎಂಬ ಹೆಸರಿನ ಕಾಗದಗಳು ಪತ್ತೆಯಾಗಿವೆ. ಆರೋಪಿಯನ್ನು ಬಂಧಿಸಿದಾಗ ಆತ ‘ಗಗನ್ ಒಲಿ’ ಎಂಬ ನಕಲಿ ಹೆಸರನ್ನು ಹೊಂದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಹಣ, ಚಿನ್ನಾಭರಣಗಳ ದರೋಡೆ

ಮೃತ ವೈದ್ಯ ಯೋಗೀಶ್ ಚಂದ್ರಪಾಲ್ (63), ತಮ್ಮ ಪತ್ನಿಯೊಂದಿಗೆ ವಾಸಿಸುತ್ತಿದ್ದ ಜಂಗ್ಪುರದ ನಿವಾಸದಲ್ಲಿ ಹತ್ಯೆಗೀಡಾಗಿದ್ದಾರೆ. ಅವರ ದೇಹವು ಅಡುಗೆಮನೆಯಲ್ಲಿ ಕಂಡುಬಂದರೆ, ಮನೆಯ ರೂಮ್​ನಲ್ಲಿ ದರೋಡೆ ಆಗಿರುವ ಸೂಚನೆಗಳು ಸಿಕ್ಕಿವೆ. ಆರೋಪಿಗಳು ವೈದ್ಯರನ್ನು ಕೊಲ್ಲುವ ಮುನ್ನ ಮನೆಯನ್ನು ಲೂಟಿ ಮಾಡಿದ್ದಾರೆ. ಆ ನಂತರ ಅವರನ್ನು ಹತ್ಯೆಗೈದು ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ಅಪರಾಧ ವಿಭಾಗದ ಉಪ ಪೊಲೀಸ್ ಆಯುಕ್ತ ಸಂಜಯ್ ಸೇನ್ ಹೇಳಿದ್ದಾರೆ. ಮನೆಯ ಸುತ್ತ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾಗಳಲ್ಲಿ ಹಲವು ಆರೋಪಿಗಳನ್ನು ಪೊಲೀಸರು ಪತ್ತೆಹಚ್ಚಿದ್ದು, ಒಂದಕ್ಕಿಂತ ಹೆಚ್ಚು ಆರೋಪಿಗಳು ಭಾಗಿಯಾಗಿರುವುದು ಸಾಬೀತಾಗಿದೆ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ.

ಕೊಲೆ ಪ್ರಕರಣದ ಪ್ರಮುಖ ಆರೋಪಿ ವಿಷ್ಣುಸಾಯಿ ಮತ್ತು ಆತನ ನಾಲ್ಕು ಸಹಚರರು ಪರಾರಿಯಾಗಿರುವುದಾಗಿ ಹೇಳಿದ್ದ ಖಾಕಿ ಪಡೆ, ಇದೀಗ ಕಡೆಗೂ ಹತ್ಯೆ ಹಿಂದಿದ್ದ ಮಾಸ್ಟರ್​ಮೈಂಡ್​ ವಿಷ್ಣುಸ್ವರೂಪ್ ಶಾಹಿಯನ್ನು ಭಾರತ-ನೇಪಾಳ ಗಡಿಯಲ್ಲಿ ಅರೆಸ್ಟ್​ ಮಾಡಿದ್ದಾರೆ. ಇದರೊಟ್ಟಿಗೆ ವೈದ್ಯರ ಮನೆಯಲ್ಲಿ ಕೆಲಸ ಮಾಡಿಕೊಂಡಿದ್ದ ಬಸಂತಿ, ಆಕಾಶ್​ ಮತ್ತು ಹಿಮಾಂಶು ಜೋಶಿಯನ್ನು ವಿಚಾರಣೆಯಲ್ಲಿ ಪೊಲೀಸರು ಬಂಧನಕ್ಕೆ ಒಳಪಡಿಸಿದ್ದಾರೆ ಎಂದು ವರದಿಯಾಗಿದೆ,(ಏಜೆನ್ಸೀಸ್).

ಪೆಟ್ರೋಲ್​ ಹಾಕಿಸಿಕೊಳ್ಳುವವರು ಈ ಮಿಸ್ಟೇಕ್ಸ್​ ಎಂದಿಗೂ ಮಾಡ್ಬೇಡಿ! ತಪ್ಪಿದರೆ ಅಪಾಯ ಕಟ್ಟಿಟ್ಟಬುತ್ತಿ

 

Share This Article

ಭಾರತದ ನೋಟಿನಲ್ಲಿರುವ ಮಹಾತ್ಮ ಗಾಂಧಿಜಿ ಅವರ ಫೋಟೋ ಕ್ಲಿಕ್ಕಿಸಿದ್ದು ಯಾವಾಗ & ಎಲ್ಲಿ?; ಇಲ್ಲಿದೆ ಸಂಪೂರ್ಣ ಮಾಹಿತಿ | Information

ಭಾರತದ ನೋಟಿನಲ್ಲಿ ಮಹಾತ್ಮ ಗಾಂಧಿ ಅವರ ಫೋಟೋವನ್ನು ನೀವು ನೋಡಿರಬಹುದು. ಆದರೆ ನೋಟಿನ ಮೇಲೆ ನಗುತ್ತಿರುವ…

ಇಬ್ಬನಿಯಿಂದ ಚಳಿಗಾಲದಲ್ಲಿ ತುಳಸಿ ಗಿಡ ಹಾಳಾಗುತ್ತಿದೆಯೇ?; ಆರೈಕೆಗಾಗಿ ಇಲ್ಲಿದೆ ಸಿಂಪಲ್​ ಟ್ರಿಕ್​​ | Health Tips

ತುಳಸಿಯು ಔಷಧೀಯ ಸಸ್ಯವಾಗಿರುವುದರ ಜತೆಗೆ ಧಾರ್ಮಿಕ ನಂಬಿಕೆಗಳನ್ನೂ ಹೊಂದಿದೆ. ಈ ಸಸ್ಯವನ್ನು ಹಿಂದೂ ಧರ್ಮದಲ್ಲಿ ಅತ್ಯಂತ…

ಬಿಪಿ ಹೆಚ್ಚಾಗಲು ಈ ಆಹಾರ ಪದಾರ್ಥಗಳು ಕಾರಣವೇ; ತಜ್ಞರು ಹೇಳಿದ್ದೇನು? | Health Tips

ನೂಡಲ್ಸ್, ಪಾಪಡ್, ಉಪ್ಪಿನಕಾಯಿ, ಸಾಸ್ ಮತ್ತು ನಮ್ಕೀನ್ ಬಹುತೇಕ ಈ ಎಲ್ಲಾ ಆಹಾರ ಪದಾರ್ಥಗಳು ಪ್ರತಿಯೊಬ್ಬರ…