ಆತ​ ನಮ್ಮ ಮೊದಲ ಆಯ್ಕೆಯಾಗಿದ್ದ ಆದ್ರೆ… ಶ್ರೇಯಸ್​ ಅಯ್ಯರ್​ರನ್ನು ತಂಡದಿಂದ ಕೈಬಿಟ್ಟ ಕುರಿತು KKR CEO ಕೊಟ್ಟ ಸ್ಪಷ್ಟನೆ ಹೀಗಿದೆ

Shreyas Iyer

ಕಲ್ಕತ್ತಾ: 2025ರಲ್ಲಿ ನಡೆಯಲಿರುವ 18ನೇ ಆವೃತ್ತಿಯ ಐಪಿಎಲ್​ಗೆ ಸಂಬಂಧಿಸಿದಂತೆ ಈಗಾಗಲೇ ರಿಟೇನ್​ ಪಟ್ಟಿಯನ್ನು (Retain List) ಫ್ರಾಂಚೈಸಿಗಳು ಬಿಡುಗಡೆ ಮಾಡಿದ್ದು, ಈ ವಿಚಾರ ಕ್ರೀಡಾ ವಲಯದಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ. ರಿಟೇನ್​ (Retain) ವಿಚಾರಕ್ಕೆ ಬರುವುದಾದರೆ ಬಾಲಿವುಡ್​ ನಟ ಶಾರುಖ್​ ಖಾನ್​ ಸಹ ಮಾಲೀಕತ್ವದ ಕಲ್ಕತ್ತಾ ನೈಟ್​ರೈಡರ್ಸ್ (KKR)​ ಫ್ರಾಂಚೈಸಿಯು ಕೂಡ ಎಲ್ಲರ ಗಮನ ಸೆಳೆಯುತ್ತಿದೆ. ನಾಯಕ ಶ್ರೇಯಸ್​ ಅಯ್ಯರ್​ರನ್ನು (Shreyas Iyer) ತಂಡದಿಂದ ಕೈಬಿಡುವ ಮೂಲಕ ಅಚ್ಚರಿ ಮೂಡಿಸಿದ್ದು, ಈ ಬಗ್ಗೆ ಕ್ರೀಡಾವಲಯದಲ್ಲಿ ಬಗೆಬಗೆಯ ಆರೋಪಗಳು ಕೇಳಿಬರುತ್ತಿವೆ.

2022ರಲ್ಲಿ ನಡೆದ ಹರಾಜು ಪ್ರಕ್ರಿಯೆಯಲ್ಲಿ ಕಲ್ಕತ್ತಾ ನೈಟ್​ರೈಡರ್ಸ್​ (KKR) ಪಾಲಾಗಿದ್ದ ಶ್ರೇಯಸ್​ ಅಯ್ಯರ್​, 2023ರಲ್ಲಿ ಗಾಯದ ಸಮಸ್ಯೆಯಿಂದ ಕಣಕ್ಕಿಳಿದಿರಲಿಲ್ಲ. 2024ರಲ್ಲಿ ನಾಯಕನಾಗಿ ಮತ್ತೊಮ್ಮೆ ಎಂಟ್ರಿ ಕೊಟ್ಟ ಶ್ರೇಯಸ್​ (Shreyas Iyer) ಕೆಕೆಆರ್ (KKR) ತಂಡದ 10 ವರ್ಷಗಳ ಟ್ರೋಫಿ ಬರವನ್ನು ನೀಗಿಸಿದ್ದರು. ಆದರೆ ಶ್ರೇಯಸ್ (Shreyas Iyer) ಹೊರತುಪಡಿಸಿ, ಫ್ರಾಂಚೈಸಿ ರಿಟೇನ್​ (Retain)  ಪಟ್ಟಿಯಲ್ಲಿ ಇತರ ಆರು ಆಟಗಾರರನ್ನು ಉಳಿಸಿಕೊಂಡಿದೆ. ಹೀಗಾಗಿ ಚಾಂಪಿಯನ್‌ ನಾಯಕನನ್ನು ಕೈಬಿಟ್ಟಿದ್ದ ಬಗ್ಗೆ ಸಾಕಷ್ಟು ಊಹಾಪೋಹಗಳು ಎದ್ದಿದ್ದವು. ಈ ಬಗ್ಗೆ ಕಲ್ಕತ್ತಾ ನೈಟ್​ರೈಡರ್ಸ್​ (KKR) ತಂಡದ ಸಿಇಒ ವೆಂಕಿ ಮೈಸೂರು (Venky Mysore)  ಮಾತನಾಡಿದ್ದು, ಎದ್ದಿರುವ ಊಹಾಪೋಹಗಳಿಗೆ ತೆರೆ ಎಳೆಯುವ ಕೆಲಸ ಮಾಡಿದ್ಧಾರೆ.

ಖಾಸಗಿ ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಈ ಬಗ್ಗೆ ಮಾತನಾಡಿರುವ ವೆಂಕಿ ಮೈಸೂರು (Venky Mysore), ನಮ್ಮ ರಿಟೇನ್​ ಪಟ್ಟಿಯ ಮೊದಲ ಆಯ್ಕೆಯಾಗಿ ಶ್ರೇಯಸ್ ಅಯ್ಯರ್ (Shreyas Iyer) ಹೆಸರಿತ್ತು. ಅವರು ನಮ್ಮ ತಂಡದ ನಾಯಕ ಮತ್ತು ನಾವು ನಾಯಕನ ಸುತ್ತ ಇಡೀ ತಂಡವನ್ನು ಕಟ್ಟಬೇಕು. ಅವರು ಉತ್ತಮ ನಾಯಕನಾಗಿರುವ ಕಾರಣದಿಂದಲೇ ನಾವು ಅವರನ್ನು 2022 ರಲ್ಲಿ ತಂಡಕ್ಕೆ ಆಯ್ಕೆ ಮಾಡಿದ್ದೆವು. ಇನ್ನೂ ರಿಟೇನ್​ (Retain) ಪ್ರಕ್ರಿಯೆಗೆ ಸಂಬಂಧಿಸಿದಂತೆ ಪರಸ್ಪರ ಒಪ್ಪಿಗೆ ಅಗತ್ಯವಿದ್ದು, ಶ್ರೇಯಸ್ ಅಯ್ಯರ್ (Shreyas Iyer) ಕಡೆಯಿಂದ ಆ ಒಪ್ಪಿಗೆ ಸಿಗಲಿಲ್ಲ. ಹೀಗಾಗಿ ಫ್ರಾಂಚೈಸ್​ನಿಂದಲೂ ಏನನ್ನು ಮಾಡಲು ಸಾಧ್ಯವಾಗಲಿಲ್ಲ.

ಈ ಒಪ್ಪಂದದ ನಡುವೆ ಹಣದಂತಹ ಕೆಲವು ಅಂಶಗಳು ಬಂದಾಗ ಮತ್ತು ಯಾರಾದರೂ ಒಬ್ಬ ಆಟಗಾರ ತನ್ನ ಮಾರುಕಟ್ಟೆ ಮೌಲ್ಯವನ್ನು (Market Value) ಪರೀಕ್ಷಿಸಲು ಬಯಸಿದಾಗ ನಮ್ಮಿಂದ ಏನನ್ನು ಮಾಡಲು ಸಾಧ್ಯವಾಗುವುದಿಲ್ಲ. ಅಯ್ಯರ್ (Shreyas Iyer) ಕೂಡ ಹರಾಜಿನಲ್ಲಿ ತನ್ನ ಮೌಲ್ಯವನ್ನು ನೋಡಲು ಬಯಸಿದರು ಹೀಗಾಗಿ ಅವರನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಆದಾಗ್ಯೂ ಶ್ರೇಯಸ್ ಹಾಗೂ ನಮ್ಮ (KKR) ನಡುವಿನ ಸಂಬಂಧ ಉತ್ತಮವಾಗಿದೆ. ಒಬ್ಬ ಆಟಗಾರ ಹರಾಜಿನಲ್ಲಿ ತನ್ನ ಮೌಲ್ಯವನ್ನು ಪರೀಕ್ಷಿಸುವ ನಿರ್ಧಾರವನ್ನು ನಾವು ಯಾವಾಗಲೂ ಬೆಂಬಲಿಸುತ್ತೇವೆ ಎಂದು ಕೆಕೆಆರ್​ (KKR) ತಂಡದ ಸಿಇಒ ವೆಂಕಿ ಮೈಸೂರು (Venky Mysore) ಸ್ಪಷ್ಟಪಡಿಸಿದ್ದಾರೆ.

ಅಶ್ವಿನ್​-ಜಡ್ಡು ದಾಳಿಗೆ ಕುಸಿದ ಕಿವೀಸ್​ ಪಡೆ; ಮುಂಬೈ ಟೆಸ್ಟ್​ ಗೆಲುವಿನತ್ತ Team India

ಅಂಗಲಾಚಿದರು ಬಿಡದೆ ಲೈಂಗಿಕ ದೌರ್ಜನ್ಯ ಎಸಗಿದ Congress Leader

Share This Article

ಋತುಸ್ರಾವದ ಸಮಯದಲ್ಲಿ ಮೊಸರು ಸೇವಸಬಹುದೇ.. ಬೇಡವೇ; ಗೊಂದಲಕ್ಕೆ ಇಲ್ಲಿದೆ ಪರಿಹಾರ | Health Tips

ಮೊಸರು ಅಥವಾ ಉಪ್ಪಿನಕಾಯಿ ತಿನ್ನುವುದರಿಂದ ಋತುಸ್ರಾವದ ಸಮಯದಲ್ಲಿ ಸಮಸ್ಯೆಯಾಗುತ್ತದೆ ಎಂಬ ನಂಬಿಕೆಯಿದೆ. ಆದರೆ ಯಾವುದೇ ಆಹಾರವು…

ಉಸಿರಾಟದ ವ್ಯಾಯಾಮ ಗೊರಕೆ ಸಮಸ್ಯೆಗೆ ಪರಿಹಾರ; ಇದು ಸುಳ್ಳೋ-ಸತ್ಯವೋ.. ವೈದ್ಯರು ಹೇಳೋದೇನು? | Health Tips

ನಿದ್ರಿಸುವಾಗ ಗೊರಕೆ ಹೊಡೆಯುವ ವ್ಯಕ್ತಿಗೆ ಮಾತ್ರವಲ್ಲದೆ ಸುತ್ತಮುತ್ತಲಿನವರಿಗೂ ತೊಂದರೆಯ ಅನುಭವವಾಗುತ್ತದೆ. ಸಾಮಾನ್ಯವಾಗಿ ಇದನ್ನು ಲಘುವಾಗಿ ತೆಗೆದುಕೊಳ್ಳಲಾಗುತ್ತದೆ.…

Vastu Tips : ರಾತ್ರಿ ಮಲಗುವ ಮುನ್ನ ಈ ತಪ್ಪುಗಳನ್ನು ಮಾಡಬೇಡಿ!ಸಾಲದ ಸುಳಿಗೆ ಸಿಲುಕುತ್ತೀರಿ..!

Vastu Tips: ದೃಷ್ಟ ಚೆನ್ನಾಗಿದ್ದರೆ ಕೆಲವರು ರಾತ್ರೋರಾತ್ರಿ ಲಕ್ಷಾಧಿಪತಿಗಳಾಗುತ್ತಾರೆ. ಕೆಲವರು  ಐಷಾರಾಮಿ ಜೀವನ ನಡೆಸಲು ಕಷ್ಟಪಡುತ್ತಾರೆ. ಅವರು…