

ಲಖನೌ: ಸರ್ಕಾರಗಳು ಎಷ್ಟೇ ಕಠಿಣ ಕಾನೂನನ್ನು ಜಾರಿಗೆ ತಂದರು ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು (Harassment Cases) ದಿನ ಕಳೆದಂತೆ ಹೆಚ್ಚಾಗುತ್ತಿವೆ. ಇದೀಗ ಕಾಂಗ್ರೆಸ್ ಜಿಲ್ಲಾಧ್ಯಕ್ಷನೋರ್ವ (Congress Leader) ಮಹಿಳೆಯೊಬ್ಬರ ಮೇಲೆ ದೌರ್ಜನ್ಯ ಎಸಗಿದ್ದು, ಆಘಾತಕಾರಿ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಬಾಗ್ಪತ್ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ (Congress Leader) ಯೂಸೂಫ್ ಚೌಧರಿ (Yusuf CHaudhary) ಈ ಕೃತ್ಯ ಎಸಗಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇದಲ್ಲದೆ ಈತ ಮಹಿಳೆ ಎಷ್ಟೇ ಗೋಗರೆದರು ಆಕೆಯ ಮೇಲೆ ದೌರ್ಜನ್ಯ ಎಸಗಿದ್ದಾನೆ. ಕಾಂಗ್ರೆಸ್ ನಾಯಕನ ಈ ಕರಾಳ ಕೃತ್ಯವನ್ನು ಸಂತ್ರಸ್ತ (Victim) ಮಹಿಳೆ ಮೊಬೈಲ್ನಲ್ಲಿ ಸೆರೆ ಹಿಡಿದಿದ್ದು, ಆರೋಪಿ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸುವಂತೆ ನೆಟ್ಟಿಗರು ಆಗ್ರಹಿಸುತ್ತಿದ್ದಾರೆ.
ವೈರಲ್ ಆಗಿರುವ ವಿಡಿಯೋ ನೋಡುವುದಾದರೆ ಜಿಲ್ಲಾ ಕಾಂಗ್ರೆಸ್ ಘಟಕದ ಅಧ್ಯಕ್ಷ (Congress Leader) ಯೂಸೂಫ್ ಚೌಧರಿ ತನ್ನ ಖಾಸಗಿ ಅಂಗವನ್ನು ತೋರಿಸುತ್ತ ಮಹಿಳೆಯತ್ತಿರ ಬರುತ್ತಿರುವುದನ್ನು ನೋಡಬಹುದಾಗಿದೆ. ಬಳಿಕ ಮಹಿಳೆಯನ್ನು ಜೋರಾಗಿ ತಬ್ಬಿ ಹಿಡಿಯುವ ಆರೋಪಿಯು ಬಳಿಕ ನನ್ನ ತಾಯಿ ಬರುತ್ತಾರೆ ಬಿಟ್ಟುಬಿಡಿ ಎಂದು ಮಹಿಳೆ ಗೋಗರೆದರೆ ಆಕೆಯನ್ನು ಮತ್ತಷ್ಟು ಜೋರಾಗಿ ಹಿಡಿದಿಟ್ಟುಕೊಂಡು ದೌರ್ಜನ್ಯ ಎಸಗುತ್ತಾನೆ. ಈ ವಿಡಿಯೋವನ್ನು ಸಂತ್ರಸ್ತೆ ಮೊಬೈಲ್ನಲ್ಲಿ ಸೆರೆ ಹಿಡಿದಿದ್ದು, ವ್ಯಾಪಕ ಆಕ್ರೋಶಕ್ಕೆ ಗುರಿಯಾಗಿದೆ.
nbsp;
ಈ ಕುರಿತು ಮಾತನಾಡಿರುವ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಯೂಸೂಫ್ ಚೌಧರಿ (Yusuf Chaudhary), ಆ ವಿಡಿಯೋದಲ್ಲಿ ಇರುವುದು ನಾನಲ್ಲ. ನನ್ನ ವಿರುದ್ಧ ರಾಜಕೀಯ ಷಡ್ಯಂತ್ರ ರೂಪಿಸಲಾಗಿದ್ದು, ನನ್ನ ಮಾನವನ್ನು ಹಾಳು ಮಾಡಲು ರಾಜಕೀಯ ವಿರೋಧಿಗಳು ಹೆಣೆದಿರುವ ಪಿತೂರಿ ಎಂದು ಯೂಸೂಫ್ ಆರೋಪಿಸಿದ್ದಾರೆ. ಆದರೆ, ಕಾನೂನು ಕ್ರಮ ಅಥವಾ ಪೊಲಿಸರಿಗೆ ದೂರು ನೀಡುವ ಬಗ್ಗೆ ಯೂಸೂಫ್ ಎಲ್ಲಿಯೂ ಹೇಳಿಲ್ಲ.
ವಿಡಿಯೋ ಕುರಿತು ಮಾತನಾಡಿರುವ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು, ಘಟನೆ ಸಂಬಂಧ ಈವರೆಗೆ ಯಾವುದೇ ದೂರು ದಾಖಲಾಗಿಲ್ಲ. ದೂರು ದಾಖಲಾದರೆ ನಾವು ತಕ್ಷಣ ಕ್ರಮ ಕೈಗೊಳ್ಳುತ್ತೇವೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.