ಕರೊನಾ ಸೋಂಕಿನಿಂದ ಮೃತನಾದ ವೃದ್ಧನ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದವರ ಮೇಲೆಯೂ ತೀವ್ರ ನಿಗಾ

Coronavirus 16 Feb 20
Published on

ಕಲಬುರಗಿಯಲ್ಲಿ ಕರೊನಾ ಸೋಂಕಿನಿಂದ ಮೃತರಾದ ವೃದ್ಧನ ಅಂತ್ಯಕ್ರಿಯೆಯಲ್ಲಿ ಭಾಗವಹಿಸ್ದಿ 71 ಜನರ ಮೇಲೆ ತೀವ್ರ ನಿಗಾ ವಹಿಸಿದ್ದು, ನಾಲ್ವರಿಗೆ ಐಸೊಲೇಶನ್ ವಾರ್ಡ್​ನಲ್ಲಿ ಚಿಕಿತ್ಸೆ ಮುಂದುವರಿಸಲಾಗಿದ್ದು, ಮೂವರ ಪರೀಕ್ಷಾ ವರದಿ ನೆಗೆಟಿವ್ ಬಂದಿದೆ. ಮತ್ತೊಬ್ಬರ ವರದಿ ಬರಬೇಕಿದೆ. ಉಳಿದ 67 ಜನರನ್ನು ಹೋಮ್ ಐಸೊಲೇಶನ್​ನಲ್ಲಿ ಇಟ್ಟು ನಿಗಾವಹಿಸಲಾಗಿದೆ. ಮೃತ ವೃದ್ಧನಿಗೆ ಚಿಕಿತ್ಸೆ ನೀಡಿದ ನರ್ಸ್​ಗೂ ಐಸೊಲೇಶನ್ ವಾರ್ಡ್​ನಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಮೃತನ ಸಂಬಂಧಿಕರ ಸಂದರ್ಶನ ಮಾಡಿದ ಇಬ್ಬರು ಸುದ್ದಿ ವಾಹಿನಿ ಪತ್ರಕರ್ತರಿಗೆ ಗೃಹ ಐಸೊಲೇಶನ್ ಮಾಡಿ ತಪಾಸಣೆ ನಡೆಸಲಾಗುತ್ತಿದೆ.

  • ದುಬೈನಿಂದ ಯಾದಗಿರಿಯ ಸೈದಾಪುರಕ್ಕೆ ಮರಳಿದ ಇಬ್ಬರು ಚಿನ್ನದ ವ್ಯಾಪಾರಿಗಳನ್ನು ಮನೆಯಲ್ಲೇ ಪ್ರತ್ಯೇಕವಾದ ಕೋಣೆಯಲ್ಲಿಸಿ ನಿಗಾವಹಿಸಲಾಗಿದೆ. ಇಬ್ಬರು 15 ದಿನಗಳ ಹಿಂದೆ ಗೋಲ್ಡ್ ಸ್ಕೀಮ್ಲ್ಲಿ ದುಬೈ ಪ್ರವಾಸಕ್ಕೆ ತೆರಳಿ ಶುಕ್ರವಾರ ವಾಪಸಾಗಿದ್ದಾರೆ. ಇನ್ನು ಸುರಪುರದ ರಂಗಂಪೇಟೆಗೆ ಸೌದಿಯಿಂದ ಬಂದಿದ್ದ ವ್ಯಕ್ತಿಯೊಬ್ಬರನ್ನು ತಪಾಸಣೆಗೆ ಒಳಪಡಿಸಿದ್ದು, ಕೆಲದಿನ ಮನೆಯಲ್ಲಿ ಪ್ರತ್ಯೇಕ ಕೋಣೆಯಲ್ಲಿ ಇರುವಂತೆ ಸೂಚಿಸಲಾಗಿದೆ.
  • ವಿದೇಶದಿಂದ ಬೆಳಗಾವಿ ಜಿಲ್ಲೆಗೆ 17 ಜನ ಆಗಮಿಸಿದ್ದು, ಅವರಲ್ಲಿ 3 ಜನರನ್ನು 28 ದಿನ ನಿಗಾವಹಿಸಲಾಗಿತ್ತು. ಇದೀಗ ಅವರು ಆರೋಗ್ಯವಾಗಿದ್ದಾರೆ. ಉಳಿದ 14 ಜನರ ಆರೋಗದ ಕುರಿತು ಅಧಿಕಾರಿಗಳು ನಿಗಾವಹಿಸಿದ್ದಾರೆ. ಅವರ ಜತೆಯಲ್ಲಿ ಯಾರ್ಯಾರಿದ್ದರೋ ಅವರೆಲ್ಲರನ್ನೂ ತಪಾಸಣೆಗೆ ಒಳಪಡಿಸಲಾಗಿದೆ.
  • ಕರೊನಾಗೆ ಬಲಿಯಾದ ಕಲಬುರಗಿ ವೃದ್ಧನೊಂದಿಗೆ ವಿದೇಶ ಪ್ರವಾಸ ಮಾಡಿದ್ದ ಅರಕಲಗೂಡು ತಾಲೂಕಿನ ಐವರು ಸಂಬಂಧಿಕರ ಆರೋಗ್ಯ ತಪಾಸಣೆ ನಡೆಸಿದ್ದು, ಶನಿವಾರ ಗಂಟಲು ದ್ರವದ ಪ್ರಯೋಗಾಲಯ ವರದಿ ಕೈ ಸೇರಿದೆ. ಯಾರಿಗೂ ಸೋಂಕು ತಗುಲಿಲ್ಲ ಎಂದು ವೈದ್ಯಾಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
  • ಬೇರೆ ಬೇರೆ ದೇಶಗಳಿಂದ ಮಂಡ್ಯಕ್ಕೆ ಆಗಮಿಸಿರುವ 13 ಜನರ ಮೇಲೆ ಜಿಲ್ಲಾ ಆರೋಗ್ಯ ಇಲಾಖೆ ನಿಗಾ ವಹಿಸಿದೆ.
  • ಬೆಲ್ಜಿಯಂನಿಂದ ವಿಜಯಪುರಕ್ಕೆ ಆಗಮಿಸಿದ್ದ ತಾಯಿ-ಮಗು ಸೇರಿ ನಾಲ್ವರ ಗಂಟಲು ದ್ರವದ ಮಾದರಿ ಸಂಗ್ರಹಿಸಿ ಶಿವಮೊಗ್ಗ ವೈರಾಲಜಿ ಪ್ರಯೋಗಾಲಯಕ್ಕೆ ಕಳಿಸಿದ್ದು, ನೆಗೆಟಿವ್ ವರದಿ ಬಂದಿದೆ. ಹಜ್ ಯಾತ್ರಿಕರು, ವಿದೇಶದಿಂದ ಸ್ವದೇಶಕ್ಕೆ ಆಗಮಿಸಿದವರ ಮೇಲೂ ಆರೋಗ್ಯಾಧಿಕಾರಿಗಳು ಕಣ್ಗಾವಲು ಇಟ್ಟಿದ್ದಾರೆ. ಜತೆಗೆ ವಿದೇಶಿ ಪ್ರವಾಸಿಗರ ಮೇಲೂ ಕಣ್ಣಿಡಲಾಗಿದೆ.
  • ವಿದೇಶದಿಂದ ಗದಗಕ್ಕೆ ಮರಳಿರುವ 41 ಜನರ ಮೇಲೆ ನಿಗಾ ಇಡಲಾಗಿದೆ.
  • ಬಾಗಲಕೋಟೆ ಜಿಲ್ಲೆಗೆ ವಿದೇಶದಿಂದ ಬಂದಿರುವ ಮೂವರು ವೈದ್ಯ ದಂಪತಿ ಹಾಗೂ ಇತರ ಐವರನ್ನು ಮನೆಯಲ್ಲಿ 14 ದಿನಗಳ ಕಾಲ ಐಸೋಲೇಷನ್​ಗೆ ಒಳಪಡಿಸಲಾಗಿದೆ.
  • ದುಬೈ ಪ್ರವಾಸಕ್ಕೆ ತೆರಳಿದ್ದ ದಾವಣಗೆರೆ ವಿವಿ ಕುಲಪತಿ ಪ್ರೊ. ಎಸ್.ವಿ. ಹಲಸೆ ಶನಿವಾರ ವಾಪಸಾಗಿದ್ದು, ಮುಂಜಾಗ್ರತಾ ಕ್ರಮವಾಗಿ 14 ದಿನಗಳ ಕಾಲ ಮನೆಯಲ್ಲೇ ಇರುವಂತೆ ಸೂಚಿಸಲಾಗಿದೆ.
  • ವಿವಿಧ ದೇಶಗಳಿಂದ ಹಾವೇರಿ ಜಿಲ್ಲೆಗೆ ಮರಳಿರುವ 10 ಜನರ ಮೇಲೆ ಆರೋಗ್ಯ ಇಲಾಖೆ ತೀವ್ರ ನಿಗಾವಹಿಸಿದೆ.
  • ವಿದೇಶದಿಂದ ಭಟ್ಕಳಕ್ಕೆ ಮರಳಿದ್ದ 11 ಮಂದಿಯ ತಪಾಸಣೆ ನಡೆಸಲಾಗಿದ್ದು, ಸೋಂಕು ತಗುಲಿಲ್ಲ ಎಂಬುದು ದೃಢಪಟ್ಟಿದೆ. ಮೆಕ್ಕಾದಿಂದ ಹಳಿಯಾಳ ಪಟ್ಟಣಕ್ಕೆ ಮರಳಿರುವ 14 ಯಾತ್ರಾರ್ಥಿಗಳು ಹಾಗೂ ಅವರ ಕುಟುಂಬದವರಿಗೆ ಸೋಂಕು ತಗುಲಿಲ್ಲ.
  • ಉಡುಪಿಯಲ್ಲಿ ಆಸ್ಪತ್ರೆಗಳಿಗೆ ದಾಖಲಾಗಿರುವ ಐವರ ಪೈಕಿ ಯಾರಿಗೂ ಕರೊನಾ ಇಲ್ಲವೆಂಬುದನ್ನು ವೈದ್ಯಕೀಯ ವರದಿ ದೃಢ. ಅಮೆರಿಕ, ಮಲೇಷ್ಯಾ, ದುಬೈನಿಂದ ವಾಪಸ್ಸಾಗಿದ್ದ ಮಣಿಪಾಲದ ಮೂವರು ವಿದ್ಯಾರ್ಥಿಗಳು, ಜಪಾನ್​ನಿಂದ ಮರಳಿದ್ದ ಶಿರ್ವದ ಯುವಕ ಹಾಗೂ ಸಾಗರದ ಮಹಿಳೆ ಅನಾರೋಗ್ಯಗೊಂಡ ಹಿನ್ನೆಲೆಯಲ್ಲಿ ಜಿಲ್ಲಾಸ್ಪತ್ರೆ ಹಾಗೂ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
  • ಶಿವಮೊಗ್ಗ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಓರ್ವ ವೃದ್ಧರ ಗಂಟಲು ದ್ರವ ಹಾಗೂ ರಕ್ತದ ಮಾದರಿಯನ್ನು ಮೆಗ್ಗಾನ್ ಆಸ್ಪತ್ರೆ ಪ್ರಯೋಗಾಲಯಕ್ಕೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net