

ಮುಂಬೈ: ಮಹಾರಾಷ್ಟ್ರದಲ್ಲಿ ಕರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಈ ಮಧ್ಯೆ ರಾಜ್ಯ ಸರ್ಕಾರವು ಕರೊನಾ ಮೃತರ ಸಂಖ್ಯೆಯನ್ನು ಪರಿಷ್ಕರಿಸಿದ್ದು, ಒಂದೇ ದಿದನಲ್ಲಿ ಮೃತರ ಸಂಖ್ಯೆ 3656 ಏರಿಕೆಯಾಗಿದೆ.
ಮಂಗಳವಾರದಂದು ರಾಜ್ಯದ ಕರೊನಾ ಮೃತರ ಸಂಖ್ಯೆಗೆ 3509 ಸಂಖ್ಯೆ ಸೇರಿಸಲಾಗಿದೆ. ಅದರ ಜತೆ 24 ಗಂಟೆಗಳಲ್ಲಿ ಸಾವನ್ನಪ್ಪಿದ 147 ಸೋಂಕಿತರ ಸಂಖ್ಯೆಯೂ ಸೇರಿದ್ದು ಒಟ್ಟಾರೆ ಏರಿಕೆ 3656 ಆದಂತಾಗಿದೆ. ರಾಜ್ಯದಲ್ಲಿ ಈವರೆಗೆ ಕರೊನಾದಿಂದಾಗಿ ಮೃತರಾದವರ ಸಂಖ್ಯೆ 1,30,753ಕ್ಕೆ ಏರಿದೆ. ಇದರಲ್ಲಿ ಅತಿ ಹೆಚ್ಚು ಸಾವು ಸೋಂಕಿನ ಎರಡನೇ ಅಲೆಯಲ್ಲಿ ಸಂಭವಿಸಿರುವುದಾಗಿದೆ.
ಮಹಾರಾಷ್ಟ್ರದಲ್ಲಿ ವರದಿ ಪರಿಷ್ಕರಣೆಯಿಂದಾಗಿ ದೇಶದಲ್ಲಿಯೂ ನಿನ್ನೆ ಸಾವಿನ ಸಂಖ್ಯೆಯಲ್ಲಿ ಹೆಚ್ಚಳ ಕಂಡುಬಂದಿದೆ. ಸಾವಿನ ವರದಿಯಲ್ಲಿ ಒಂದೇ ದಿನ 3,998 ಏರಿಕೆಯಾಗಿದ್ದು, ಒಟ್ಟಾರೆ ಮೃತರ ಸಂಖ್ಯೆ 4.18 ಲಕ್ಷ ದಾಟಿದೆ. (ಏಜೆನ್ಸೀಸ್)