ಬೆಂಗಳೂರು:ಪಾಪಿ ಪಾಕಿಸ್ತಾನದ ಹೆಡೆಮುರಿ ಕಟ್ಟಬಹುದು ಆದರೆ, ದೇಶದ್ರೋಹಿ ಕಾಂಗ್ರೆಸ್ ನಾಯಕರ( Congress Leaders) ಹರಕಲು ಬಾಯಿ ಮುಚ್ಚಿಸಲು ಸಾಧ್ಯವಿಲ್ಲ ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ ಕಿಡಿ ಕಾಡಿದ್ದಾರೆ.

ಪಹಲ್ಗಾಮ್ ಭಯೋತ್ಪಾದಕ ದಾಳಿಯ ಕುರಿತು ಹೇಳಿಕೆ ನೀಡಿರುವ ಕಾಂಗ್ರೆಸ್ ನಾಯಕ ಎಂ.ಲಕ್ಷಣ್ ವಿರುದ್ಧ ಹರಿಹಾಯ್ದದಿದ್ದಾರೆ. ಈ ಕುರಿತು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿರುವ ಅಶೋಕ,” ಐಡಿ ಕಾರ್ಡ್ ನೋಡಿ, ಧರ್ಮದ ಹೆಸರು ಕೇಳಿ, ಕಲ್ಮಾ ಹೇಳಿಸಿ, ಪ್ಯಾಂಟು ಬಿಚ್ಚಿ ಪರೀಕ್ಷಿಸಿ ಮತಾಂಧ ಉಗ್ರರು ತಮ್ಮ ಕಣ್ಣೆದುರಿಗೇ ಪಾಯಿಂಟ್ ಬ್ಲ್ಯಾಂಕ್ ನಲ್ಲಿ ತಲೆಗೆ ಗುಂಡಿಕ್ಕಿ ತಮ್ಮ ಪತಿಯನ್ನು, ತಂದೆಯನ್ನು ಕೊಂದ ಕಣ್ಣೀರಿನ ಕಥೆ ಹೇಳುತ್ತಿರುವ ಸಂತ್ರಸ್ತ ಮಹಿಳೆಯರು, ಮಕ್ಕಳ ಆಕ್ರಂದನ ನಿಮಗೆ ಕೇಳುತ್ತಿಲ್ಲವೇ ಎಂ.ಲಕ್ಷಣ್ ಅವರೇ?” ಎಂದು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ:ಜೂ.15ಕ್ಕೆ ವಿಶ್ವದಾಖಲೆಗಾಗಿ ರವೀಂದ್ರ ಕಲಾಲಕ್ಷೇತ್ರದಲ್ಲಿ ಜನಪದ ಕಲೆಗಳ ಪ್ರದರ್ಶನ
ಇಡೀ ದೇಶವೇ ಕಣ್ಣೀರಿಡುತ್ತಿರುವ ಇಂತಹ ಸಂದರ್ಭದಲ್ಲೂ ನಿಮ್ಮ ಓಲೈಕೆ ರಾಜಕಾರಣ ಮುಂದುವರೆಸುತ್ತಿದ್ದೀರಲ್ಲ ನಿಮ್ಮ ನಾಚಿಕೆಗೇಡುತನಕ್ಕೆ ಏನು ಹೇಳೋಣ. ಗಡಿಯಲ್ಲಿ ಸೇನಾಪಡೆಗಳು ತಮ್ಮ ಪ್ರಾಣವನ್ನೇ ಒತ್ತೆ ಇಟ್ಟು ಪ್ರತೀಕಾರಕ್ಕಾಗಿ ಸಜ್ಜಾಗುತ್ತಿದ್ದರೆ ಇಲ್ಲಿ ಸರ್ಜಿಕಲ್ ಸ್ಟ್ರೈಕ್ ಬಗ್ಗೆ ವ್ಯಂಗ್ಯ ಮಡುತ್ತಿದ್ದೀರಲ್ಲ ನಿಮ್ಮ ಭಂಡ ಬಾಳಿಗೆ ಏನು ಹೇಳೋಣ. ಧರ್ಮದ ಹೆಸರು ಕೇಳಿ ಕೊಲ್ಲುವ ಉಗ್ರರಿಗೂ, ಸೇನಾಪಡೆಗಳ ಕಾರ್ಯಾಚರಣೆಗೆ ಸಾಕ್ಷಿ ಕೇಳುವ ನಿಮಗೂ ಯಾವುದೇ ವ್ಯತ್ಯಾಸವಿಲ್ಲ ಎಂದು ಹರಿಹಾಯ್ದರು.
ಪಾಪಿ ಪಾಕಿಸ್ತಾನದ ಹೆಡೆಮುರಿ ಕಟ್ಟಬಹುದು ಆದರೆ, ದೇಶದ್ರೋಹಿ ಕಾಂಗ್ರೆಸ್ ನಾಯಕರ ಹರಕಲು ಬಾಯಿ ಮುಚ್ಚಿಸಲು ಸಾಧ್ಯವಿಲ್ಲ.
ಐಡಿ ಕಾರ್ಡ್ ನೋಡಿ, ಧರ್ಮದ ಹೆಸರು ಕೇಳಿ, ಕಲ್ಮಾ ಹೇಳಿಸಿ, ಪ್ಯಾಂಟು ಬಿಚ್ಚಿ ಪರೀಕ್ಷಿಸಿ ಮತಾಂಧ ಉಗ್ರರು ತಮ್ಮ ಕಣ್ಣೆದುರಿಗೇ ಪಾಯಿಂಟ್ ಬ್ಲ್ಯಾಂಕ್ ನಲ್ಲಿ ತಲೆಗೆ ಗುಂಡಿಕ್ಕಿ ತಮ್ಮ ಪತಿಯನ್ನು, ತಂದೆಯನ್ನು ಕೊಂದ… pic.twitter.com/7XEKM2yD2b
— R. Ashoka (@RAshokaBJP) April 25, 2025
ಇದನ್ನೂ ಓದಿ:ಜವಾರಿ ‘ಪಪ್ಪಿ’ಗೆ ಧ್ರುವ ಸಾಥ್: ಉತ್ತರ ಕರ್ನಾಟಕ ಬದುಕಿನ ಹಿನ್ನೆಲೆಯ ಸಿನಿಮಾ ಮೇ 1ಕ್ಕೆ ರಿಲೀಸ್
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಕಾಂಗ್ರೆಸ್ ಪಕ್ಷಕ್ಕ ಕಿಂಚಿತ್ತಾದರೂ ದೇಶಭಕ್ತಿ ಇದ್ದರೆ, ಎಳ್ಳಷ್ಟಾದರೂ ರಾಷ್ಟ್ರಪ್ರೇಮ ಇದ್ದರೆ ಈ ಕೊಡಲೇ ಲಕ್ಷಣ್ ಅವರನ್ನ ಪಕ್ಷದಿಂದ ಉಚ್ಚಾಟನೆ ಮಾಡಿ ಎಂದು ಆಗ್ರಹಿಸಿದ್ದಾರೆ.
ಬಿಡದಿ ಟೌನ್ ಶಿಪ್ ಮಾಡಲು ಹೊರಟಿದ್ದೇ ಎಚ್ಡಿಕೆ; ಇದೀಗ ವಿರೋಧ ಏಕೆ?; DK ಶಿವಕುಮಾರ್ ಪ್ರಶ್ನೆ