More

    ನಟಿಗೆ ಖಾಸಗಿ ಅಂಗ ಪ್ರದರ್ಶಿಸಿದ ಆರೋಪ: ಯುವಕನ ಪರ ನಿಂತ ಪುರುಷರ ಸಂಘ, ಕಳಚಿಬಿತ್ತಾ ನಟಿಯ ಮುಖವಾಡ?

    ತಿರುವನಂತಪುರ: ಕೆಲ ದಿನಗಳ ಹಿಂದೆ ಕೇರಳದ ಕೆಎಸ್​ಆರ್​ಟಿಸಿ ಬಸ್​ನಲ್ಲಿ ಮಲಯಾಳಂ ನಟಿ ಹಾಗೂ ಮಾಡೆಲ್​ಗೆ ಖಾಸಗಿ ಅಂಗ ಪ್ರದರ್ಶಿಸಿದ ಆರೋಪದ ಮೇಲೆ 27 ವರ್ಷದ ಯುವಕನನ್ನು ಕೇರಳ ಪೊಲೀಸರು ಬಂಧಿಸಿದ್ದರು. ಇದೀಗ ಅಖಿಲ ಕೇರಳ ಪುರುಷರ ಸಂಘ ಆರೋಪಿ ಯುವಕನ ಪರ ನಿಂತಿದ್ದು, ನಟಿಯ ವಿರುದ್ಧ ದೂರುಗಳ ಸುರಿಮಳೆಗೈದಿದೆ.

    ಸ್ವಾಗತ ಕೋರಲಾಗುವುದು

    ಬಂಧಿತ ಯುವಕನನ್ನು ಸಾವದ್​ ಎಂದು ಗುರುತಿಸಲಾಗಿದೆ. ಈತ ಕೋಯಿಕ್ಕೊಡ್​ನ ಕಯಾಕೋಡಿ ನಿವಾಸಿ. ಕೇರಳ ಪುರುಷರ ಸಂಘದ ಮುಖ್ಯಸ್ಥ ಅಜಿತ್​ ಕುಮಾರ್ ಅವರು ಮಾಧ್ಯಮ ಸಂದರ್ಶನದಲ್ಲಿ ಸಾವದ್​ ಪರ ಧ್ವನಿ ಎತ್ತಿದ್ದಾರೆ. ಜಾಮೀನಿನ ಮೇಲೆ ಬಿಡುಗಡೆಯಾದ ಬಳಿಕ ಸವಾದ್ ಅವರಿಗೆ ಸ್ವಾಗತ ಕೋರಲಾಗುವುದು ಎಂದು ಅಜಿತ್ ಹೇಳಿದ್ದಾರೆ. ಅಲ್ಲದೆ, ಇನ್​ಸ್ಟಾಗ್ರಾಂನಲ್ಲಿ ಫಾಲೋವರ್ಸ್​ ಸಂಖ್ಯೆ ಹೆಚ್ಚಿಸಿಕೊಳ್ಳಲು ದುರುದ್ದೇಶದಿಂದ ನಕಲಿ ದೂರು ದಾಖಲಿಸಿದ್ದಾರೆ ಎಂದು ನಟಿಯ ವಿರುದ್ಧ ಅಜಿತ್​ ಆರೋಪ ಮಾಡಿದ್ದಾರೆ. ಆಕೆಯ ವಿರುದ್ಧ ಡಿಜಿಪಿಗೆ ದೂರು ನೀಡಿದ್ದೇವೆ ಎಂದು ತಿಳಿಸಿದ್ದಾರೆ.

    ಇದನ್ನೂ ಓದಿ: ಒಡಿಶಾ ರೈಲು ದುರಂತ: ಭಾರತ ಇತಿಹಾಸದಲ್ಲಿ ಸಂಭವಿಸಿರುವ ಭೀಕರ ರೈಲು ಅಪಘಾತಗಳ ಚಿತ್ರಣ ಇಲ್ಲಿದೆ…

    ಆತ್ಮಹತ್ಯೆ ಮಾಡಿಕೊಳ್ಳುವ ಹಂತಕ್ಕೆ ಹೋಗಿದ್ದ

    ಸಾವದ್​ಗೆ ಇನ್ನು ಜಾಮೀನು ಮಂಜೂರು ಆಗಿಲ್ಲ. ಮ್ಯಾಜಿಸ್ಟ್ರೇಟ್​ ರಜೆ ಇರುವುದರಿಂದ ನಾಳೆ ಜಾಮೀನು ಸಿಗಬಹುದು. ಆತ ಬಿಡುಗಡೆಯಾದಾಗ ಸ್ವಾಗತ ಕೋರುತ್ತೇವೆ. ಈ ಆಪಾದನೆಯಿಂದ ಆತ ಆತ್ಮಹತ್ಯೆ ಮಾಡಿಕೊಳ್ಳುವ ಹಂತಕ್ಕೆ ಹೋಗಿದ್ದ. ಮನೆಯಿಂದ ಹೊರಬರಲಾಗದ ಪರಿಸ್ಥಿತಿಯಲ್ಲಿದ್ದಾನೆ. ಅವರ ಕುಟುಂಬ ಊರನ್ನೇ ಬಿಟ್ಟಿದೆ. ಸಾವದ್​ ಒಳ್ಳೆಯ ಕುಟುಂಬದಿಂದ ಬಂದವನು. ಈ ಘಟನೆಯಿಂದ ಸಂಪೂರ್ಣ ಕುಗ್ಗಿ ಹೋಗಿದ್ದಾನೆ. ಊಟವನ್ನೂ ಸಹ ಮಾಡುತ್ತಿಲ್ಲ. ಜೈಲಿನಿಂದ ಬಂದ ಬಳಿಕ ಆತ ಏನು ಮಾಡಬೇಕು? ಆತನ ಮಾನಸಿಕ ಸ್ಥಿತಿಯೇ ಬದಲಾಗಿದೆ. ಸಾವದ್​ ಸ್ವಾಗತ ಸಮಾರಂಭದಲ್ಲಿ ಸಂಘದ ಸದಸ್ಯರು ಆಗಮಿಸಲಿದ್ದು, ಅವರಿಗೆ ಹೊಸ ಬದುಕು ಕಟ್ಟಿಕೊಡುವ ಕೆಲಸ ಮಾಡುತ್ತೇವೆ ಎಂದು ಅಜಿತ್​ ಭರವಸೆ ನೀಡಿದ್ದಾರೆ.

    ಆರಂಭದಲ್ಲಿ ನಟಿ ಮಾಡಿದ ಆರೋಪವನ್ನು ನಾನೂ ಕೂಡ ನಂಬಿದ್ದೆ. ಆದರೆ, ಘಟನೆ ನಡೆದ ಎರಡು ದಿನಗಳ ಬಳಿಕ ನಟಿ ತಮ್ಮ ಇನ್‌ಸ್ಟಾಗ್ರಾಂ ಐಡಿ ಬಗ್ಗೆ ಹೇಳಿದ ನಂತರ ಆಕೆಯ ಉದ್ದೇಶ ನನಗೆ ಅರ್ಥವಾಯಿತು. ಇನ್​ಸ್ಟಾಗ್ರಾಂನಲ್ಲಿ ಹೆಚ್ಚಿನ ಫಾಲೋವರ್ಸ್​ ಪಡೆಯುವುದು ಆಕೆಯ ತಂತ್ರ ಎಂದು ಗೊತ್ತಾಯಿತು. ಆಕೆ ತನ್ನ ಇನ್​ಸ್ಟಾಗ್ರಾಂನಲ್ಲಿ ಒಳಉಡುಪು ಧರಿಸಿರುವ ಚಿತ್ರಗಳು ಮತ್ತು ವಿಡಿಯೋಗಳನ್ನು ಹೆಚ್ಚಾಗಿ ಹಂಚಿಕೊಳ್ಳುತ್ತಿರುವುದು ಸಾರ್ವಜನಿಕ ಗಮನವನ್ನು ಸೆಳೆಯಲು ಎಂದು ಸಂಘದ ಇನ್ನೊಬ್ಬ ಸದಸ್ಯರು ಹೇಳಿದರು. ಇಂತಹ ಘಟನೆಯ ಬಳಿಕ ಯಾವುದೇ ಹುಡುಗಿಯಾಗಲಿ ಅಷ್ಟೊಂದು ಕೂಲ್ ಆಗಿ ಮಾತನಾಡಲು ಸಾಧ್ಯವಾಗುವುದಿಲ್ಲ ಎಂದು ಅಜಿತ್​ ಕುಮಾರ್​ ಹೇಳಿದರು. ಡಿಜಿಪಿಗೆ ದೂರು ನೀಡಿದ ಬಳಿಕ ಆಕೆ ಹೊರಗೆ ಕಾಣುತ್ತಿಲ್ಲ ಎಂದು ತಿಳಿಸಿದರು.

    ಇದನ್ನೂ ಓದಿ: 233 ಮಂದಿಯನ್ನು ಬಲಿಪಡೆದ ಒಡಿಶಾ ರೈಲು ದುರಂತ ಹೇಗಾಯ್ತು? ಘಟನೆಗೆ ಕಾರಣ ಏನು? ಇಲ್ಲಿದೆ ಮಾಹಿತಿ…

    ಘಟನೆ ಹಿನ್ನೆಲೆ ಏನು?

    ಈ ಘಟನೆ ಮೇ 16ರ ಮಂಗಳವಾರ ನಡೆದಿತ್ತು. ನಟಿ ನಂದಿತಾ ಶಂಕರ ಅವರು ಇನ್​ಸ್ಟಾಗ್ರಾಂನಲ್ಲಿ ಘಟನೆಯನ್ನು ವಿವರಿಸಿದ್ದರು. ಅವರು ಹೇಳುವ ಪ್ರಕಾರ ಸಿನಿಮಾ ಶೂಟಿಂಗ್​ಗಾಗಿ ಎರ್ನಾಕುಲಂಗೆ ತೆರಳುತ್ತಿದ್ದರಂತೆ. ಈ ವೇಳೆ ಅಂಗಮಾಲಿ ಬಳಿ ಆರೋಪಿ ಸಾವದ್​ ಬಸ್ಸನ್ನು ಏರಿದ್ದ. ಬಳಿಕ ಇಬ್ಬರು ಮಹಿಳೆಯರು ಮಧ್ಯೆ ಬಂದು ಕುಳಿತುಕೊಂಡನಂತೆ. ಆ ಇಬ್ಬರು ಮಹಿಳೆಯರಲ್ಲಿ ನಂದಿತಾ ಕೂಡ ಒಬ್ಬರು. ಬಸ್​ ಹೊರಡಲು ಆರಂಭಿಸಿದಾಗ ನಂದಿತಾ ಅವರನ್ನು ಸ್ಪರ್ಶಿಸಲು ಆರಂಭಿಸಿದ್ದಾನಂತೆ. ನಾನು ಕಿಟಕಿ ಪಕ್ಕದಲ್ಲಿ ಕುಳಿತಿದ್ದೆ. ಎಲ್ಲಿಗೆ ಹೋಗುತ್ತಿದ್ದೀರಾ ಎಂದು ಕೇಳಿದ. ಆತ ಕೇಳಿದ ಎಲ್ಲದಕ್ಕೂ ನಾನು ಉತ್ತರಿಸಿದೆ. ನೋಡಲು ಆತ ಒಳ್ಳೆಯವನಂತೆ ಕಾಣುತ್ತಿದ್ದ. ಬಸ್​ ಕೆಲ ದೂರ ಸಾಗಿದ ಕೂಡಲೇ ಆತನ ಕೈ ನನ್ನ ದೇಹವನ್ನು ಸ್ಪರ್ಶಿಸುತ್ತಿರುವಂತೆ ಭಾಸವಾಯಿತು. ನಾನು ಆತನ ಕಡೆ ನೋಡಿದಾಗ ಆತನ ಒಂದು ಕೈ ಆತನ ಖಾಸಗಿ ಅಂಗದ ಮೇಲಿರುವುದನ್ನು ಗಮನಿಸಿದೆ. ಇದರಿಂದ ನನಗೆ ತೀವ್ರ ಮುಜುಗರವಾಯಿತು. ಬಳಿಕ ಬಸ್​ನ ಕಿಟಕಿ ಗಾಜನ್ನು ಮೇಲಕ್ಕೇರಿಸಿ ಆತನಿಂದ ಅಂತರ ಕಾಯ್ದುಕೊಂಡೆ. ಆದರೂ ತನ್ನ ದುಷ್ಕೃತ್ಯ ಮುಂದುವರಿಸಿದ್ದ. ಮತ್ತೆ ನೋಡುವಷ್ಟರಲ್ಲಿ ತನ್ನ ಪ್ಯಾಂಟ್​ ಜಿಪ್​ ತೆರೆದು ಹಸ್ತಮೈಥುನ ಮಾಡಿಕೊಳ್ಳುತ್ತಿದ್ದ. ಈ ಕ್ಷಣದಲ್ಲಿ ಏನು ಮಾಡಬೇಕೆಂದು ತೋಚಲಿಲ್ಲ. ಬಳಿಕ ಮೊಬೈಲ್​ನಲ್ಲಿ ವಿಡಿಯೋ ರೆಕಾರ್ಡ್​ ಮಾಡಿಕೊಂಡು ಏನು ನಿನ್ನ ಸಮಸ್ಯೆ ಎಂದು ಆತನನ್ನು ಪ್ರಶ್ನೆ ಮಾಡಿದೆ. ಪ್ರಶ್ನೆ ಕೇಳುತ್ತಿದ್ದಂತೆಯೇ ಆತ ತಕ್ಷಣ ತನ್ನ ಪ್ಯಾಂಟ್​ ಜಿಪ್​ ಅನ್ನು ಹಾಕಿಕೊಂಡನು. ನಾನು ನನ್ನ ಧ್ವನಿಯನ್ನು ಜೋರು ಮಾಡಿದೆ. ಈ ವೇಳೆ ಬಸ್​ ಸಿಬ್ಬಂದಿ ಬಳಿ ಬಂದರು. ನಡೆದ ಘಟನೆಯನ್ನು ಅವರ ಮುಂದೆ ವಿವರಿಸಿದೆ. ದೂರು ನೀಡುತ್ತೀರಾ ಎಂದು ಬಸ್​ ಕಂಡಕ್ಟರ್​ ಪ್ರಶ್ನಿಸಿದರು. ನಾನು ಹೌದು ಎಂದೆ. ಈ ವೇಳೆ ಆರೋಪಿ ತನ್ನ ಪ್ಯಾಂಟ್​ ಜಿಪ್​ ಓಪನ್​ ಆಗಿಲ್ಲ ಎಂದು ವಾದಿಸಿದನು. ಬಸ್​, ವಿಮಾನ ನಿಲ್ದಾಣದ ಹತ್ತಿರ ನಿಲ್ಲುತ್ತಿದ್ದಂತೆ ಹಾಗೂ ಬಸ್​ನ ಬಾಗಿಲು ತೆರೆಯುತ್ತಿದ್ದಂತೆ ಆತ ಓಡಿ ಹೋದ. ಬಳಿಕ ಕಂಡಕ್ಟರ್​ ಮತ್ತು ಡ್ರೈವರ್ ಸ್ಥಳೀಯರ ನೆರವಿನಿಂದ​ ಚೇಸ್​ ಮಾಡಿ ಹಿಡಿದರು ಎಂದು ನಂದಿತಾ ವಿಡಿಯೋದಲ್ಲಿ ವಿವರಿಸಿದ್ದರು (ಏಜೆನ್ಸೀಸ್​)

    ಬಸ್ಸಿನಲ್ಲಿ ಮಹಿಳೆಯರಿಬ್ಬರ ಮಧ್ಯೆ ಕುಳಿತು ಕಾಮಚೇಷ್ಟೆ: ವಿಡಿಯೋ ಹರಿಬಿಟ್ಟು ಘಟನೆ ವಿವರಿಸಿದ ನಟಿ

    ಮತ್ತೊಂದು ನೀಚ ಕೃತ್ಯ: KSRTC ಬಸ್​ ಏರಿದ ಯುವ ವೈದ್ಯೆಯ ಮುಂದೆಯೇ ವಿಕೃತಿ ಮೆರೆದ ಯುವಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts