

ನವದೆಹಲಿ: ಕೇಂದ್ರೀಯ ನೇರ ತೆರಿಗೆ ಮಂಡಳಿ (ಸಿಬಿಡಿಟಿ) ಆದಾಯ ತೆರಿಗೆ ರಿಟರ್ನ್ಸ್ಗೆ ಸಂಬಂಧಿಸಿದ 1ರಿಂದ 7 ರ ತನಕದ ಅರ್ಜಿಗಳನ್ನು ಬಿಡುಗಡೆ ಮಾಡಿರುವುದಾಗಿ ಶನಿವಾರ ಪ್ರಕಟಿಸಿದೆ. ಪರಿಷ್ಕೃತ 2020ರ ಆದಾಯ ತೆರಿಗೆ ನಿಯಮಗಳ ಪ್ರಕಾರ ಈ ನೋಟಿಫಿಕೇಷನನ್ನು ಅದು ಪ್ರಕಟಿಸಿದೆ.
ಈ ಐಟಿಆರ್ ಅರ್ಜಿಗಳು "Sahaj (ITR-1), Form ITR-2, Form ITR-3, Form ITR-4 (Sugam), Form ITR-5, Form ITR-6, Form ITR-7 and Form ITR-V" ಈ ರೀತಿ ಇದ್ದು, ತೆರಿಗೆದಾರರು ಅವರಿಗೆ ಸಂಬಂಧಿಸಿದ ಅರ್ಜಿಯನ್ನು ತೆಗೆದುಕೊಂಡು ಭರ್ತಿ ಮಾಡಿ ಸಲ್ಲಿಸಬಹುದಾಗಿದೆ.
ಈ ತಿಂಗಳ ಆರಂಭದಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಐಟಿಆರ್ ಸಲ್ಲಿಸುವ ಅಂತಿಮ ದಿನಾಂಕವನ್ನು ಜುಲೈ 31ರಿಂದ ನವೆಂಬರ್ 30ಕ್ಕೆ ವಿಸ್ತರಿಸಿರುವುದಾಗಿ ಘೋಷಿಸಿದ್ದರು. ಅಲ್ಲದೆ, ಫಾರ್ಮ್ 16 ಪಡೆಯುವ ದಿನಾಂಕವನ್ನೂ 2020ರ ಜೂನ್ 20ರಿಂದ ಜೂನ್ 30ರ ತನಕ ವಿಸ್ತರಿಸಿ ಸರ್ಕಾರ ಆದೇಶ ಹೊರಡಿಸಿತ್ತು. ತೆರಿಗೆ ಆಡಿಟ್ ಕೆಲಸ ಸೆಪ್ಟೆಂಬರ್ 30 ರಿಂದ ಅಕ್ಟೋಬರ್ 31ರ ನಡುವೆ ನಡೆಯಲಿದೆ ಎಂದೂ ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದರು. (ಏಜೆನ್ಸೀಸ್)