More

    ‘ಸ್ಟಡಿ ಫ್ರಂ ಹೋಂ’ ಜಮಾನಾ ಶುರು: ಸುಳಿವು ನೀಡಿದ್ರು ಶಿಕ್ಷಣ ಸಚಿವ ಸುರೇಶ್ ಕುಮಾರ್

    ತುಮಕೂರು: ವರ್ಕ್ ಫ್ರಂ‌ ಹೋಂ ‌ರೀತಿಯಲ್ಲಿ ಮುಂದಿನ ದಿನಗಳಲ್ಲಿ “ಸ್ಟಡಿ ಫ್ರಂ ಹೋಂ” ಆಗಲಿದೆ ಎಂದು ಪ್ರಾಥಮಿಕ, ಪ್ರೌಢಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಹೇಳಿದರು. ಎಸ್ಸೆಸ್ಸೆಲ್ಸಿ ಪರೀಕ್ಷಾ ಪೂರ್ವ ಸಿದ್ಧತೆ ಪ್ರಗತಿ ಪರಿಶೀಲನಾ ಸಭೆಯಲ್ಲಿ, ‘ಕೇಂದ್ರ ಸರ್ಕಾರದ ಹೊಸ ಮಾರ್ಗ ಸೂಚಿಗಳ ಅನ್ವಯ ಇನ್ನೂ 100 ಶೈಕ್ಷಣಿಕ ದಿನಗಳ ಸಿಗಲಿವೆ. ಅದಕ್ಕೆ ಪೂರಕವಾಗಿ ವಿದ್ಯಾರ್ಥಿಗಳಿಗೆ ಹೊರೆಯಾಗದಂತೆ ಪಠ್ಯವನ್ನು ರೂಪಿಸಬೇಕಿದೆ. ಇನ್ನೂ ಹೆಚ್ಚು ಮನೆಗಳಲ್ಲೇ ಮಕ್ಕಳಿಗೆ ಪಾಠ ಹೇಳುವ ದಿನಗಳು ಬರಲಿವೆ. ಅದಕ್ಕೆ ನಾವು ಸಿದ್ಧರಾಗಬೇಕಿದೆ’ ಎಂದು ಅವರು ಹೇಳಿದರು.

    ಇದನ್ನೂ ಓದಿ: ಜಿ7 ಔಟ್​ಡೇಟೆಡ್​!: ಹೊಸತನ್ನು ಕಟ್ಟೋಣ, ಭಾರತವನ್ನೂ ಸೇರಿಸೋಣ ಎಂದ್ರು ಅಧ್ಯಕ್ಷ ಟ್ರಂಪ್​

    ಮತ್ತೆ ಪುನರ್ಮನನ ತರಗತಿಗಳು
    ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಜೂನ್ 10 ರಿಂದ ಮತ್ತೆ ಚಂದನ ವಾಹಿನಿಯಲ್ಲಿ ಪುನರ್ಮನನ ತರಗತಿಗಳು ನಡೆಸಲಾಗುವುದು. ಇದನ್ನು ವಿದ್ಯಾರ್ಥಿಗಳು ಸದ್ಭಳಕೆ ಮಾಡಿಕೊಂಡು ಪರೀಕ್ಷೆಗೆ ಸಿದ್ಧರಾಗಬೇಕು.‌ ಪರೀಕ್ಷೆಗಳು ನಿಗದಿಯಂತೆ ನಡೆಯಲಿ ಎಂದು ಸುರೇಶ್ ಕುಮಾರ್ ಪುನರುಚ್ಚರಿಸಿದರು.

    ಪಾಳಿಯದಲ್ಲಿ ಅಥವಾ ದಿನ ಬಿಟ್ಟು ದಿನ ಶಾಲೆಗಳನ್ನು ನಡೆಸುವ ಚಿಂತನೆ ಒಂದು ಕಡೆ ನಡೆಯುತ್ತಿದೆ. ಮತ್ತೊಂದೆಡೆ ವಾಹಿನಿಗಳನ್ನು ಬಳಸಿಕೊಂಡು ಮಕ್ಕಳಿಗೆ ಪಾಠ ಹೇಳುವ ಸಿದ್ಧತೆಗಳು ನಡೆದಿವೆ. ಎಸ್ಸೆಸ್ಸೆಲ್ಸಿ ಪರೀಕ್ಷೆ ಹಿನ್ನೆಲೆಯಲ್ಲಿ ನಮ್ಮ ರಾಜ್ಯದಲ್ಲಿ ಪುನರ್ಮನನ ತರಗತಿಗಳನ್ನು ಚಂದನ ವಾಹಿನಿ ಬಳಸಿಕೊಂಡಯ ಯಶಸ್ವಿಯಾಗಿ ಮಾಡಲಾಗಿದ್ದು ಮುಂದಿನ ದಿನಗಳಲ್ಲಿ ಇದು ಹೆಚ್ಚು ಬಳಸಿಕೊಂಡು ಶಿಕ್ಷಣ ಬೋಧನೆ ಮಾಡುವ ಚಿಂತನೆ ಇದೆ. ಇನ್ನೂ ಮೂರು ಚಾನಲ್ ನೀಡುವಂತೆ ಪ್ರಸಾರಭಾರತಿಗೆ ಮನವಿ ಮಾಡಲಾಗಿದೆ ಎಂದರು.

    ಇದನ್ನೂ ಓದಿ:1962 ಅಲ್ಲ ಈಗ ನಡೀತಿರೋದು- ಚೀನಾಕ್ಕೆ ಪಂಜಾಬ್ ಸಿಎಂ ವಾರ್ನಿಂಗ್​!

    ಮಕ್ಕಳ ಸುರಕ್ಷತೆ, ಮಕ್ಕಳಲ್ಲಿ ಆತ್ಮವಿಶ್ವಾಸ !: ಕರೊನಾ ಹಿನ್ನೆಲೆಯಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಯುವ ಅನುಮಾನಗಳನ್ನು ವ್ಯಾಟ್ಸ್ ಆ್ಯಪ್ ಗಳಲ್ಲಿ ಹುಟ್ಟುಹಾಕಲಾಗುತ್ತಿದೆ. ಆದರೆ ಪರೀಕ್ಷೆ ನಡೆದೇ ತೀರುತ್ತದೆ ಎಂಬುದನ್ನು ಮಕ್ಕಳಲ್ಲಿ ಮನವರಿಕೆ ಮಾಡಿಕೊಡಬೇಕಿದೆ. ಈ ಬಾರಿಯ ಎಸ್ಸೆಸ್ಸೆಲ್ಸಿ ಪರೀಕ್ಷೆ ಟ್ಯಾಗ್ ಲೈನ್ ” ಮಕ್ಕಳ ಸುರಕ್ಷತೆ, ಮಕ್ಕಳಲ್ಲಿ ಆತ್ಮವಿಶ್ವಾಸ ” ಆಗಿದೆ. ಸುರಕ್ಷತೆ ಜತೆಗೆ ಆತ್ಮವಿಶ್ವಾಸ ದಿಂದ ಪರೀಕ್ಷೆ ಎದುರಿಸುವ ನಿಟ್ಟಿನಲ್ಲಿ ವಿದ್ಯಾರ್ಥಿಗಳನ್ನು ಪರೀಕ್ಷೆಗೆ ಅಣಿಗೊಳಿಸಬೇಕು ಎಂದು ಸಚಿವ ಸುರೇಶ್ ಕುಮಾರ್ ಹೇಳಿದರು.

    ನಿಮ್ಮ ಮೊಬೈಲ್​ನಲ್ಲಿ ಚೀನಾದ ಆ್ಯಪ್​ ಇದೆಯೆ- ಪತ್ತೆ ಹಚ್ಚೋದು ಹೇಗೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts