ಭಾರತದಲ್ಲಿ ಆ್ಯಪಲ್​ ಉತ್ಪಾದನೆ 5 ಪಟ್ಟು ಹೆಚ್ಚಳ!

Apple
Published on

ನವದೆಹಲಿ: ಮುಂದಿನ ಐದು ವರ್ಷಗಳಲ್ಲಿ ಭಾರತದಲ್ಲಿ ´ಫೋನ್​ ಉತ್ಪಾದನೆಯನ್ನು ಐದು ಪಟ್ಟು ಹೆಚ್ಚಿಸಲು ಐಫೋನ್​ ತಯಾರಕ ಕಂಪನಿ ಆ್ಯಪಲ್​ ಯೋಜನೆ ರೂಪಿಸಿದೆ ಎನ್ನಲಾಗಿದೆ.

ಉತ್ಪಾದನೆಯ ಟಾರ್ಗೆಟ್​ ಮೊತ್ತ 3.32 ಲಕ್ಷ ಕೋಟಿ ರೂಪಾಯಿ (40 ಬಿಲಿಯ ಡಾಲರ್​) ಆಗಿದೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ. ಆ್ಯಪಲ್​ ಕಳೆದ ಹಣಕಾಸು ವರ್ಷದಲ್ಲಿ 700 ಶತಕೋಟಿ ಡಾಲರ್​ ಉತ್ಪಾದನೆ ಗಡಿಯನ್ನು ದಾಟಿದೆ ಎಂದು ಹೆಸರು ಪ್ರಕಟಿಸಲಿಚ್ಛಿಸದ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಆದರೆ, ಮುಂದಿನ ಐದು ವರ್ಷಗಳ ಉತ್ಪಾದನೆ ಹೆಚ್ಚಳ ಕುರಿತಂತೆ ಆ್ಯಪಲ್​ ಯಾವುದೇ ಪ್ರತಿಕ್ರಿಯೆ ವ್ಯಕ್ತಪಡಿಸಿಲ್ಲ. ಭಾರತದಲ್ಲಿ ಐೋನ್​ ತಯಾರಿಸುವ ಆ್ಯಪಲ್​ ಮುಂದಿನ ವರ್ಷದಿಂದ ಏರ್​ಪ್ಯಾಡ್​ ಉತ್ಪಾದಿಸುವ ಯೋಜನೆಯನ್ನು ಹೊಂದಿದೆ. ಆದರೆ, ಭಾರತದಲ್ಲಿ ಐಪ್ಯಾಡ್​ ಅಥವಾ ತನ್ನ ಲ್ಯಾಪ್​ಟಾಪ್​ ತಯಾರಿಸಲು ಆ್ಯಪಲ್​ ತಕ್ಷಣಕ್ಕೆ ಯಾವುದೇ ಯೋಜನೆಯನ್ನು ಹೊಂದಿಲ್ಲ ಎಂದು ಅಧಿಕಾರಿ ಸ್ಪಷ್ಟಪಡಿಸಿದ್ದಾರೆ.

ಸೆಪ್ಟೆಂಬರ್​ 25ರಂದು ಮುಕ್ತಾಯವಾದ ಹಣಕಾಸು ವರ್ಷದಲ್ಲಿ ಆ್ಯಪಲ್​ ಜಾಗತಿಕವಾಗಿ 191 ಶತಕೋಟಿ ಡಾಲರ್​ ಮೌಲ್ಯದ ಐೋನ್​ಗಳನ್ನು ಮಾರಾಟ ಮಾಡಿದೆ. ಗೃಹ ಮತ್ತು ಆಕ್ಸೆಸರಿ ವಿಭಾಗದಲ್ಲಿ 38.36 ಶತಕೋಟಿ ಡಾಲರ್​ ಮೌಲ್ಯದ ಸಾಧನಗಳನ್ನು ಮಾರಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net