ಸ್ಥಳಿಯ ಉತ್ಪಾದನಾ ಘಟಕಗಳಿಗೆ ಉತ್ತೇಜನ; 4 ವರ್ಷಗಳಲ್ಲಿ ಸ್ಥಳಿಯವಾಗಿ 20 ಶತಕೋಟಿ ಡಾಲರ್​ ಯೋಜನೆ

manufacturing units
Published on

ನವದೆಹಲಿ: ಕೇಂದ್ರ ಸರ್ಕಾರ ಲ್ಯಾಪ್​ಟಾಪ್​ ಮತ್ತು ಸರ್ವರ್​ಗಾಗಿ ಸ್ಥಳಿಯ ಘಟಕಗಳ ಉತ್ಪಾದನಾ ಮೂಲವನ್ನು ಉತ್ತೇಜಿಸುವ ಮತ್ತು ಮುಂದಿನ 4 ವರ್ಷಗಳಲ್ಲಿ ಸ್ಥಳಿಯವಾಗಿ ಸುಮಾರು 20 ಶತಕೋಟಿ ಡಾಲರ್​ ಸಂಪಾದಿಸುವ ಗುರಿ ಹೊಂದಿದೆ. ಪ್ರಸ್ತುತ ಸಂಪಾದಿಸುತ್ತಿರುವ ಒಂದು ಶತಕೋಟಿ ಡಾಲರ್​ಗೆ ಹೋಲಿಸಿದರೆ ಮುಂದಿನ ಗುರಿಯು ಗಣನೀಯ ಹೆಚ್ಚಳವಾಗಿದೆ. ಈ ಕ್ರಮವು ಚೀನಾದ ಆಮದುಗಳ ಮೇಲಿನ ಅವಲಂಬನೆ ಕಡಿಮೆ ಮಾಡಿ ತಂತ್ರಾನ ವಲಯದಲ್ಲಿ ದೇಶೀಯ ಉತ್ಪಾದನೆಯನ್ನು ಉತ್ತೇಜಿಸುವುದಾಗಿದೆ.

ಚೀನಾ ಮತ್ತು ಇತರ ವಿಶ್ವಾಸಾರ್ಹವಲ್ಲದ ಮೂಲಗಳಿಂದ ಹಾರ್ಡ್​ವೇರ್​ ಟಕಗಳ ಆಮದು ಮೇಲೆ ಸರ್ಕಾರ ರ್ನಿಬಂಧ ವಿಧಿಸುವ ನಿರೀಕ್ಷೆಯಿದೆ ಎಂದು ಮೂಲಗಳು ತಿಳಿಸಿವೆ. ಮೇಕ್​ ಇನ್​ ಇಂಡಿಯಾ ಉಪಕ್ರಮದೊಂದಿಗೆ ಹೊಂದಿಕೊಂಡು ಭಾರತದಲ್ಲಿ ಸ್ಥಳಿಯ ಉತ್ಪಾದನೆ ಪೋತ್ಸಾಹಿಸುವುದು ಇದರ ಉದ್ದೇಶವಾಗಿದೆ.

ಸ್ಥಳಿಯ ಉತ್ಪಾದನಾ ಟಕಗಳನ್ನು ಪೋತ್ಸಾಹಿಸುವ ಮೂಲಕ ಆಮದುಗಳ ಮೇಲಿನ ಅವಲಂಬನೆ ಕಡಿಮೆ ಮಾಡುವ, ಉದ್ಯೋಗ ಸೃಷ್ಟಿಸುವ ಮತ್ತು ತಂತ್ರಾನದ ಹಾರ್ಡ್​ವೇರ್​ ಉತ್ಪಾದನೆ ಸೇರಿದಂತೆ ನಿರ್ಣಾಯಕ ಕೈಗಾರಿಕೆಗಳಲ್ಲಿ ಭಾರತದ ಸ್ವಾವಲಂಬನೆ ಬಲಪಡಿಸುವ ಗುರಿ ಹೊಂದಿದೆ.

ಐಟಿ ಹಾರ್ಡ್​ವೇರ್​ಗಾಗಿ 17 ಸಾವಿರ ಕೋಟಿ ರೂಪಾಯಿ ಆರ್ಥಿಕ ಪೋತ್ಸಾಹ ಒದಗಿಸುವ ಪಿಎಲ್​ಐ ಯೋಜನೆ ಅನುಷ್ಠಾನ ಮತ್ತು ನ.1 ರಿಂದ ಪ್ರಾರಂಭಿಸುವ ಆಮದು ನಿರ್ವಹಣಾ ವ್ಯವಸ್ಥೆಯು ಭಾರತದಲ್ಲಿ ಸ್ಪರ್ಧಾತ್ಮಕ ಉತ್ಪಾದನಾ ವಾತಾವರಣ ಸೃಷ್ಟಿಸುವ ಸಂಕಲ್ಪವನ್ನು ಪ್ರತಿಬಿಂಬಿಸುತ್ತದೆ. ಸ್ಮಾರ್ಟ್​ಫೋನ್​ ತಯಾರಿಕೆಯು ಯಶಸ್ವಿ ಮಾದರಿಯಾಗಿದೆ. ಮೂಲಗಳ ಪ್ರಕಾರ ಈ ನಿರ್ಧಾರವು ಚೀನಾದ ಮೇಲಿನ ಅವಲಂಬನೆ ಕಡಿಮೆ ಮಾಡಿ, ಸ್ಥಳಿಯ ಉತ್ಪಾದನೆಗೆ ಪೋತ್ಸಾಹಿಸುವುದರೊಂದಿಗೆ ಮೇಕ್​ ಇನ್​ ಇಂಡಿಯಾ ಉಪಕ್ರಮದೊಂದಿಗೆ ಹೊಂದಿಕೆಯಾಗುವುದಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net