

ಲಂಡನ್: ಟಾಟಾ ಸ್ಟೀಲ್ನೊಂದಿಗೆ 1.25 ಶತಕೋಟಿ ಪೌಂಡ್ಗಳ (ಅಂದಾಜು 12,901 ಕೋಟಿ ರೂಪಾಯಿ) ಮೌಲ್ಯದ ಜಂಟಿ ಹೂಡಿಕೆಯ ಪ್ಯಾಕೇಜ್ ಅನ್ನು ಬ್ರಿಟನ್ ಪ್ರಕಟಿಸಿದೆ.
ಇದರಲ್ಲಿ 500 ಮಿಲಿಯನ್ ಪೌಂಡ್ಗಳ ಸರ್ಕಾರದ ಅನುದಾನವೂ ಸೇರಿದೆ. ವೇಲ್ಸ್ನಲ್ಲಿ ದೇಶದ ಅತಿದೊಡ್ಡ ಉಕ್ಕಿನ ಘಟಕ ಸ್ಥಾಪಿಸಲು ಈ ಅನುದಾನ ಒದಗಿಸಲಾಗುತ್ತಿದೆ. ಇದರಿಂದ ಬ್ರಿಟನ್ನಲ್ಲಿ ಉದ್ಯೋಗಾವಕಾಶಗಳ ಸೃಷ್ಟಿ, ಆರ್ಥಿಕತೆ ವರ್ಧನೆ ಹೆಚ್ಚಳ ನಿರೀಕ್ಷಿಸಲಾಗಿದೆ.
ಈ ಅನುದಾನವು ಬ್ರಿಟನ್ ಇತಿಹಾಸದಲ್ಲಿಯೇ ಸರ್ಕಾರ ನೀಡಿರುವ ಅತಿದೊಡ್ಡ ಬೆಂಬಲದ ಪ್ಯಾಕೇಜ್ ಆಗಿದೆ ಎನ್ನಲಾಗಿದೆ. ಬ್ರಿಟನ್ ಉಕ್ಕಿನ ಉದ್ಯಮಕ್ಕೆ ನಿರ್ಣಾಯಕ ಣ ಎಂದು ಪರಿಗಣಿಸಲಾಗಿದೆ. ಈ ಒಪ್ಪಂದದ ಭಾಗವಾಗಿ, ಭಾರತೀಯ ಉಕ್ಕು ದೈತ್ಯ ಕಂಪನಿಯು 1.25 ಶತಕೋಟಿ ಪೌಂಡ್ ಹೂಡಿಕೆ ಮಾಡುವ ನಿರೀಕ್ಷೆಯಿದೆ.