ಬೆಂಗಳೂರು: 2023ರ ಕೇಂದ್ರ ಬಜೆಟ್ಗೆ ಅನುಗುಣವಾಗಿ ಅಕ್ಟೋಬರ್ 1ರಿಂದ ಜಾರಿಗೆ ಬರುವಂತೆ ಹಣಕಾಸು ಸ್ಥಿತಿಗತಿ ಮೇಲೆ ಪರಿಣಾಮ ಬಿರುವಂತಹ ಹಲವು ಸಮಗತಿಗಳು ನಡೆಯಲಿವೆ ಎಂದು ಹೇಳಲಾಗಿದೆ. ಹೀಗಾಗಿ ಅಕ್ಟೋಬರ್ ಒಂದಕ್ಕೂ ಮೊದಲೇ ನೀವು ಅಪ್ಡೇಟ್ ಮಾಡಿಸುವುದು ಒಳಿತು ಎಮದು ಹೇಳಲಾಗಿದೆ.
ಆಧಾರ್ ಕಾರ್ಡ್ನಲ್ಲಿ ವಿವರ ಬದಲಾವಣೆ, ಮ್ಯೂಚುವಲ್ ಫಂಡ್, ಡಿಮ್ಯಾಟ್ ಅಥವಾ ಟ್ರೇಡಿಂಗ್ ಖಾತೆಗಳಿಗೆ ನಾಮಿನಿಗಳ ನೇಮಕ ಅಥವಾ ಬದಲಾವಣೆ, ಟಿಸಿಎಸ್ ನಿಯಮಗಳು, ಎರಡು ಸಾವಿರ ಮುಖಬೆಲೆಯ ನೋಟುಗಳ ಬದಲಾವಣೆ, ಜನನ-ಮರಣ ಪ್ರಮಾಣಪತ್ರ ಸಲ್ಲಿಕೆ ಮಾಡಬೇಕಾಗಿದೆ.
ಆಧಾರ್ ಜೋಡಣೆ: ಸಾರ್ವಜನಿಕ ಭವಿಷ್ಯ ನಿಧಿ, ಸುಕನ್ಯಾ ಸಮೃದ್ಧಿ ಯೋಜನೆ, ಅಂಚೆ ಕಚೇರಿ ಠೇವಣಿ ಮತ್ತು ಇತರ ಸಣ್ಣ ಉಳಿತಾಯ ಯೋಜನೆಗಳಲ್ಲಿ ಹೂಡಿಕೆ ಮಾಡಿದವರು ಈ ತಿಂಗಳ ಅಂತ್ಯದೊಳಗೆ ತಮ್ಮ ಆಧಾರ್ ಸಂಖ್ಯೆಯನ್ನು ಅಂಚೆ ಕಚೇರಿ ಅಥವಾ ಬ್ಯಾಂಕ್ ಶಾಖೆಗೆ ಸಲ್ಲಿಸಬೇಕು. ಸೆಪ್ಟೆಂಬರ್ 30ರಂದು ಗಡುವು ನೀಡಲಾಗಿದೆ. ಇಲ್ಲದಿದ್ದಲ್ಲಿ ಈ ಹೂಡಿಕೆಗಳನ್ನು ಫ್ರೀಜ್ ಮಾಡುವ ಸಂಭವವಿದೆ.
ಮ್ಯೂಚುಯಲ್ ಫಂಡ್‌ಗಳಿಗೆ ನಾಮಿನಿ: ಅಸ್ತಿತ್ವದಲ್ಲಿರುವ ಎಲ್ಲಾ ಮ್ಯೂಚುಯಲ್ ಫಂಡ್‌ಗಳಿಗೆ ನಾಮಿನಿಯ ಹಜೆಸರನ್ನು ಸೇರಿಸಲು ಸೆಪ್ಟೆಂಬರ್ 30ರಂದು ಕೊನೆಯ ದಿನವಾಗಿದೆ. ಒಂದು ವೇಳೆ ಸೆಪ್ಟೆಂಬರ್ 30ರ ಒಳಗಾಗಿ ನಾಮಿನಿಯನ್ನು ಹೆಸರಿಸಲು ವಿಫಲವಾದಲ್ಲಿ ಮ್ಯೂಚುವಲ್ ಫಂಡ್ಗಳನ್ನು ಡೆಬಿಟ್ಗಳಾಗಿ ಫ್ರೀಜ್ ಮಾಡಲಾಗುತ್ತದೆ.
ಇದನ್ನೂ ಓದಿ: ರಾಜಕೀಯ ಹಿತಾಸಕ್ತಿಗಾಗಿ ಕಾಂಗ್ರೆಸ್ ರಾಜ್ಯದ ಹಿತವನ್ನು ಬಲಿಕೊಟ್ಟಿದೆ: ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಕಿಡಿ
ಟಿಸಿಎಸ್ ನಿಯಮಗಳು: ಕ್ರೆಡಿಟ್ ಕಾರ್ಡ್ ಮೂಲಕ ಸಾಗರೋತ್ತರ ವೆಚ್ಚಗಳು ಏಳು ಲಕ್ಷ ರೂಪಾಯಿಗೂ ಹೆಚ್ಚು ಮೊತ್ತವನ್ನು ಖರ್ಚು ಮಾಡಿದ್ದರೆ ಅಕ್ಟೋಬರ್ 1ರಿಂದ ಜಾರಿಗೆ ಬರುವಂತೆ ಶೇ.20ರಷ್ಟು ಟಿಸಿಎಸ್ಗೆ ನೀವು ಒಳಪಡುತ್ತೀರಿ. ಒಂದು ವೇಳೆ ಕ್ರೆಡಿಟ್ ಕಾರ್ಡ್ಗಳನ್ನು ಶೈಕ್ಷಣಿಗೆ ಹಾಗೂ ವೈದ್ಯಕೀಯ ಉದ್ಧೇಶಗಳಿಗೆ ಬಳಸಿದ್ದರೆ ಶೇ.05ರಷ್ಟು ಟಿಸಿಎಸ್ ವಿಧಿಸಲಾಗುತ್ತದೆ. ಕೇಂದ್ರವು 2023-24ರ ಬಜೆಟ್‌ನಲ್ಲಿ ಸಾಗರೋತ್ತರ ಪ್ರವಾಸ ಪ್ಯಾಕೇಜ್ ಮತ್ತು LRS ಅಡಿಯಲ್ಲಿ ರವಾನೆಯಾಗುವ ಹಣಕ್ಕೆ ಟಿಸಿಎಸ್ ದರಗಳನ್ನು ಪ್ರಸ್ತುತ ಶೇ. 055ರಿಂದ ಶೇಕಡಾ 20ಕ್ಕೆ ಹೆಚ್ಚಿಸಿದೆ.
ಡಿಮ್ಯಾಟ್ ಅಥವಾ ಟ್ರೇಡಿಂಗ್ ಖಾತೆಗಳಿಗೆ ನಾಮಿನಿ: ಅಸ್ತಿತ್ವದಲ್ಲಿರುವ ಟ್ರೇಡಿಂಗ್ ಮತ್ತು ಡಿಮ್ಯಾಟ್ ಖಾತೆದಾರರಿಗೆ ಫಲಾನುಭವಿಗಳನ್ನು ನಾಮನಿರ್ದೇಶನ ಮಾಡುವ ಗಡುವು ಸೆಪ್ಟೆಂಬರ್ 30ರಂದು ಕೊನೆಗೊಳ್ಳುತ್ತದೆ. ಅಕ್ಟೋಬರ್ 1ರ ನಂತರ ವಿವಿಧ ನಿಬಂಧನೆಗಳನ್ನು ವಿಧಿಸಲಾಗುತ್ತದೆ ಎಂದು ಹೇಳಲಾಗಿದೆ.
ನೋಟುಗಳ ವಿನಿಮಯ: ಮೇ 19ರಂದು ಭಾರತೀಯ ರಿಸರ್ವ್ ಬ್ಯಾಂಕ್ ಎರಡು ಸಾವಿರ ಮುಖಬೆಲೆಯ ನೋಟುಗಳ ಚಲಾವಣೆಯನ್ನು ಹಿಂಪಡೆದಿತ್ತು. ನಿಮ್ಮಲ್ಲಿ ಕೆಲವರು ಇನ್ನೂ ರೂ. 2000 ನೋಟುಗಳನ್ನು ಹೊಂದಿದ್ದರೆ, 30 ಸೆಪ್ಟೆಂಬರ್ 2023ರೊಳಗೆ ನೋಟುಗಳನ್ನು ಬದಲಾಯಿಸಲು ಗಡುವು ನಿಗದಿಪಡಿಸಿದೆ.
ಜನನ-ಮರಣ ಪ್ರಮಾಣಪತ್ರ ಸಲ್ಲಿಕೆ: ಹಣದ ವಿಷಯಗಳ ಹೊರತಾಗಿ, ಜನನ ಪ್ರಮಾಣಪತ್ರಗಳು ಮುಂದಿನ ತಿಂಗಳಿನಿಂದ ಆಧಾರ್ ಮತ್ತು ಸರ್ಕಾರಿ ಉದ್ಯೋಗಗಳಿಗೆ ಒಂದೇ ದಾಖಲೆಯಾಗಿ ಮಾರ್ಪಟ್ಟಿವೆ. ಜನನ ಮತ್ತು ಮರಣಗಳ ನೋಂದಣಿ (ತಿದ್ದುಪಡಿ) ಕಾಯಿದೆ, 2023 ಅಕ್ಟೋಬರ್ 1, 2023 ರಿಂದ ದೇಶದಲ್ಲಿ ಜಾರಿಗೆ ಬರಲಿದೆ.