ಟಾಯ್ಲೆಟ್​ನಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಕೆ: ಕಾಲೇಜು ಆಡಳಿತ ಮಂಡಳಿ ಕೊಟ್ಟ ಕಾರಣ ಹೀಗಿದೆ…

College CCTV Camera
Published on

ಲಖನೌ: ಕಾಲೇಜಿನ ಟಾಯ್ಲೆಟ್​ನಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಿದ ವಿಚಿತ್ರ ಘಟನೆ ಉತ್ತರ ಪ್ರದೇಶದ ಅಸಾಮಗಢದ ಡಿಎವಿ ಪಿಜಿ ಕಾಲೇಜಿನಲ್ಲಿ ನಡೆದಿದ್ದು, ವಿದ್ಯಾರ್ಥಿಗಳ ಆಕ್ರೋಶ ಬಳಿಕ ಸಿಸಿಟಿವಿ ಕ್ಯಾಮೆರಾವನ್ನು ತೆರವುಗೊಳಿಸಲಾಗಿದೆ.

ನಮ್ಮ ಖಾಸಗಿತನಕ್ಕೆ ಧಕ್ಕೆ ಉಂಟು ಮಾಡುವ ಯತ್ನ ಎಂದು ಆರೋಪಿಸಿ ವಿದ್ಯಾರ್ಥಿಗಳು ಪ್ರಾಂಶುಪಾಲರ ಕಚೇರಿ ಎದುರು ಪ್ರತಿಭಟನೆ ನಡೆಸಿದ ಬಳಿಕ ಸಿಸಿಟಿವಿ ಕ್ಯಾಮೆರಾ ತೆರವುಗೊಳಿಸಲಾಯಿತು.

ಕಾಲೇಜು ಆವರಣದಲ್ಲಿ ನೀರಿನ ಟ್ಯಾಪ್‌ಗಳು ನಿಯಮಿತವಾಗಿ ಕಾಣೆಯಾಗುತ್ತಿರುವ ಹಿನ್ನೆಲೆಯಲ್ಲಿ ಕಾಲೇಜುಗಳ ವಿವಿಧೆಡೆ ಕ್ಯಾಮೆರಾಗಳನ್ನು ಅಳವಡಿಸಲಾಗಿತ್ತು. ಇದರ ಭಾಗವಾಗಿ ಶೌಚಾಲಯದ ಒಳಗೂ ಕ್ಯಾಮೆರಾ ಹಾಕಲಾಗಿತ್ತು. ಇದನ್ನು ಕಂಡ ವಿದ್ಯಾರ್ಥಿಗಳು ಕಾಲೇಜು ಮಂಡಳಿ ವಿರುದ್ಧ ಕಿಡಿಕಾರಿದ್ದರು.

ಪ್ರಾಂಶುಪಾಲರ ಕಚೇರಿ ಮುಂದೆ ಧರಣಿ ಕುಳಿತ ಬಳಿಕ ಶೌಚಾಲಯದಲ್ಲಿ ತಪ್ಪಾಗಿ ಕ್ಯಾಮೆರಾ ಅಳವಡಿಸಲಾಗಿದ್ದು, ಅದನ್ನು ತಕ್ಷಣವೇ ತೆಗೆದುಹಾಕಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲಿಗೆ ವಿವಾದ ಸುಖಾಂತ್ಯ ಕಂಡಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net