

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಶೂ, ಕಳ್ಳರ ಹಾವಳಿ ಹೆಚ್ಚಾಗಿದೆ. ಕಳ್ಳನೊಬ್ಬ ಮಧ್ಯರಾತ್ರಿ ಅಪಾರ್ಟ್ಮೆಂಟ್ಗಳಿಗೆ ನುಗ್ಗಿ ಕೃತ್ಯ ಎಸಗಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಹೆಚ್ಎಸ್ಆರ್ ಲೇಔಟ್ನ ಅಪಾರ್ಟ್ಮೆಂಟ್ನಲ್ಲಿ ಶೂ ಕದ್ದುಕೊಂಡು ಹೋಗಿರುವುದು ಬೆಳಕಿಗೆ ಬಂದಿದೆ. ಮನೆ ಬಾಗಿಲವರೆಗೂ ಬಂದು ಕಳ್ಳತನ ನಡೆಸಿದ್ದು, ಯಾವಾಗ ಮನೆಗೆ ನುಗ್ಗಿ ಕನ್ನ ಹಾಕ್ತಾರೋ ಅಂತ ಜನರು ಭಯಭೀತರಾಗಿದ್ದಾರೆ.
ದುಬಾರಿ ಬೆಲೆ ಹಾಗೂ ಬಗೆಬಗೆಯ ಶೂಗಳು ಒಂದೇ ಕಡೆ ಸಿಗುತ್ತವೆ ಎಂದು ಕಳ್ಳರು ಅಪಾರ್ಟ್ಮೆಂಟ್ಗಳನ್ನು ಗುರಿಯಾಗಿಸಿಕೊಂಡಿದ್ದಾರೆ. ದುಬಾರಿ ಶೂಗಳನ್ನೇ ಕದಿಯುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.