ದಾಖಲೆ ಇಲ್ಲದೆ ಸಾಗಿಸುತ್ತಿದ್ದ 9 ಲಕ್ಷ ರೂ….16 ಲಕ್ಷ ರೂ.ಬೆಲೆ ಬಾಳುವ ಸೀರೆಗಳು ವಶಕ್ಕೆ!

crime

ಬೆಳಗಾವಿ: ಚುನಾವಣೆ ಘೋಷಣೆಗೂ ಮುನ್ನವೇ ಅಖಾಡಕ್ಕಿಳಿದ ಪೋಲೀಸರು ದಾಖಲೆ ಇಲ್ಲದೇ ಬೆಳಗಾವಿಯಲ್ಲಿ ಸಾಗಿಸುತ್ತಿದ್ದ ಹಣ ಹಾಗೂ ಸದಲಗಾ ದತವಾಡ ಚೆಕ್ ಪೋಸ್ಟ್‌ನಲ್ಲಿ ಸೀರೆಗಳ ಜಪ್ತಿ ಪಡೆಯಲಾಗಿದೆ.

ಬೆಳಗಾವಿ ನಗರದ ಹೊರ ವಲಯದ ಕಣಬರಗಿ ಚೆಕ್ ಪೋಸ್ಟ್​​ನಲ್ಲಿ ದಾಖಲೆ ಇಲ್ಲದೇ ಸಾಗಿಸುತ್ತಿದ್ದ ಒಂಬತ್ತು ಲಕ್ಷ ರೂ. ನಗದು ವಶಕ್ಕೆ ಪಡೆಯಲಾಗಿದೆ. ಬೆಳಗಾವಿ ನಗರದಿಂದ ಗೋಕಾಕ್ ತಾಲೂಕಿನ‌ ಅಂಕಲಗಿಗೆ ಹೊರಟ್ಟಿದ್ದ ಕಾರು ಇದಾಗಿತ್ತು. ಚೆಕ್ ಪೋಸ್ಟ್​​ನಲ್ಲಿ ಪರಿಶೀಲನೆ ವೇಳೆ ನಗದು ಪತ್ತೆಯಾಗಿದ್ದು, ಓರ್ವವನ ಬಂಧಿಸಿ ಮಾಳಮಾರುತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಇದನ್ನೂ ಓದಿ: ಶಿಕ್ಷಕರ ನೇಮಕಾತಿ ಪ್ರಕ್ರಿಯೆ ಪೂರ್ಣಗೊಳಿಸುವಂತೆ ಆಗ್ರಹ; ಸಿಎಂ ಬೊಮ್ಮಾಯಿಗೆ ಪತ್ರ

ಮತದಾರಿಗೆ ಹಂಚಲು ಕೊಂಡೊಯ್ಯುತ್ತಿದ್ದ ಸೀರೆಗಳ ಜಪ್ತಿ: ಚಿಕ್ಕೋಡಿಯ ಸದಲಗಾ ದತವಾಡ ಚೆಕ್ ಪೋಸ್ಟ್​​ನಲ್ಲಿ ಸೀರೆಗಳನ್ನು ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ. ಸುಮಾರು 16 ಲಕ್ಷ ಬೆಲೆ ಬಾಳುವ ಸೀರೆಗಳನ್ನು ವಶಕ್ಕೆ ಪಡೆಯಲಾಗಿದೆ. ರಾಯಬಾಗ ಮತಕ್ಷೇತ್ರದಲ್ಲಿ ಹಂಚಿಕೆ ಮಾಡಲು ಕೊಂಡೊಯ್ಯುತ್ತಿದ್ದ ಸೀರೆಗಳು ಎನ್ನಲಾಗಿದೆ. ವಾಹನ ಚಾಲಕ ಹಾಗೂ ಕ್ಲೀನರ್ ವಾಹನವನ್ನೂ ವಶಕ್ಕೆ ಪಡೆದ ಪೊಲೀಸರು. ಸದಲಗಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ಇನ್ಮುಂದೆ ಬಿಸಿಯೂಟದೊಂದಿಗೆ ಸಿಗಲಿದೆ ರಾಗಿ ಮಾಲ್ಟ್

Share This Article

ಬಸ್ಸು ಅಥವಾ ಕಾರಿನಲ್ಲಿ ಪ್ರಯಾಣಿಸುವಾಗ ವಾಂತಿ ಬರೊದೇಕೆ ಗೊತ್ತೆ!; ತಡೆಗಟ್ಟೊದೇಗೆ? ಇಲ್ಲಿದೆ ಉಪಯುಕ್ತ ಮಾಹಿತಿ | Vomit

Vomit : ಕೆಲವರಿಗೆ ಬಸ್​ ಮತ್ತು ಕಾರಿನಲ್ಲಿ ಪ್ರಯಾಣ ಮಾಬೇಕಾದರೆ ಸಲ್ಪ ದೂರು ಪ್ರಯಾಣಿಸಿದ ಬಳಿಕ…

ನಕಲಿ vs ಅಸಲಿ ಕಲ್ಲಂಗಡಿ ಹಣ್ಣು: ಪತ್ತೆಹಚ್ಚುವುದು ಹೇಗೆ? ಇಲ್ಲಿದೆ ನೋಡಿ ಉಪಯುಕ್ತ ಮಾಹಿತಿ… Watermelon

Watermelon : ಎಲ್ಲಡೆ ಬೇಸಿಗೆ ಆರಂಭವಾಗಿದ್ದು, ಬಿಸಿಲಿನ ತೀವ್ರತೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಸುಡುವ ಬಿಸಿಲಿನಿಂದಾಗಿ…

ಬೇಸಿಗೆಯಲ್ಲಿ ಬಿರುಕು ಬಿಟ್ಟ ಪಾದಗಳು ಸುಂದರವಾಗಲು ಇಲ್ಲಿದೆ ಅಲ್ಟಿಮೇಟ್ ಟಿಪ್ಸ್! cracked heels

cracked heels: ಬೇಸಿಗೆಯಲ್ಲಿ ಪಾದಗಳಲ್ಲಿ ಬಿರುಕುಗಳು ಸಾಮಾನ್ಯ ಸಮಸ್ಯೆಯಾಗುತ್ತವೆ. ಸರಿಯಾದ ಆರೈಕೆಯ ಕೊರತೆಯು ಒಣ ಚರ್ಮ…