More

    ಶಿಕ್ಷಕರ ನೇಮಕಾತಿ ಪ್ರಕ್ರಿಯೆ ಪೂರ್ಣಗೊಳಿಸುವಂತೆ ಆಗ್ರಹ; ಸಿಎಂ ಬೊಮ್ಮಾಯಿಗೆ ಪತ್ರ

    ಬೆಂಗಳೂರು: ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ಪ್ರಕ್ರಿಯೆಯನ್ನು ಶೀಘ್ರವಾಗಿ ಪೂರ್ಣಗೊಳಿಸುವಂತೆ ಆಗ್ರಹಿಸಿ ಹುದ್ದೆ ಆಕಾಂಕ್ಷಿಗಳು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದಿದ್ದಾರೆ.

    ನೇಮಕಾತಿ ಆದೇಶ ಪ್ರಕ್ರಿಯೆ ಹೊರಡಿಸಿ ಒಂದು ವರ್ಷವಾಗುತ್ತಿದೆ. ಕಳೆದ ಡಿಸೆಂಬರ್‌ನಲ್ಲಿಯೇ ಪ್ರಕ್ರಿಯೆ ಪೂಣಗೊಳ್ಳಬೇಕಿತ್ತು. ಆದರೆ, ಆದಾಯ ಪ್ರಮಾಣಪತ್ರದ ವಿಚಾರವಾಗಿ ಹುದ್ದೆ ಆಕಾಂಕ್ಷಿತ ವಿವಾಹಿತ ಅಭ್ಯರ್ಥಿಗಳು ನ್ಯಾಯಾಲಯದ ಮೊರೆ ಹೋಗಿದ್ದರಿಂದ ವಿಳಂಬವಾಯಿತು. ಬಳಿಕ ಎಲ್ಲವನ್ನು ಬಗೆಹರಿಸಿ ಅಂತಿಮ ಆಯ್ಕೆಪಟ್ಟಿ ಪ್ರಕಟಿಸಿದರು. ಇದೀಗ ಕಲ್ಯಾಣ ಕರ್ನಾಟಕ ಆಕಾಂಕ್ಷಿಗಳು ನ್ಯಾಯಾಲಯದ ಮೊರೆ ಹೋಗಿರುವುದರಿಂದ ಅತಂತ್ರ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ಇದನ್ನೂ ಓದಿ:  5 ನಿಮಿಷದಲ್ಲಿ ಒಂದು ಮೈಲಿ ದೂರ ಓಡಿದ 9 ತಿಂಗಳ ತುಂಬು ಗರ್ಭಿಣಿ!

    ಹುದ್ದೆ ನಿರೀಕ್ಷೆಯಲ್ಲಿರುವುದರಿಂದ ಸದ್ಯ ಕಾರ್ಯನಿರ್ವಹಿಸುತ್ತಿರುವ ಖಾಸಗಿ ಶಾಲೆಗಳಲ್ಲಿಯೂ ಕೆಲಸವನ್ನು ಬಿಟ್ಟಿದ್ದೇವೆ. ಒಂದು ವೇಳೆ ನೇಮಕಾತಿ ಪ್ರಕ್ರಿಯೆ ಪೂರ್ಣಗೊಳಿಸದಿದ್ದರೆ, ನಿರುದ್ಯೋಗಿಗಳಾಗಬೇಕಾಗುತ್ತದೆ. ಚುನಾವಣೆ ನೀತಿ ಸಂಹಿತೆ ಸಮೀಪದಲ್ಲಿಯೇ ಇರುವುದರಿಂದ ಆಯ್ಕೆ ಪ್ರಕ್ರಿಯೆ ವಿಚಾರವು ಆತಂಕ ಮೂಡಿಸಿದೆ ಎಂದು ತಿಳಿಸಿದ್ದಾರೆ.

    ಆಂಬ್ಯುಲೆನ್ಸ್‌ನಲ್ಲಿ ಮಲಗಿಕೊಂಡೇ ಎಕ್ಸಾಂ ಬರೆದ SSLC ವಿದ್ಯಾರ್ಥಿನಿ; ಈ ಸ್ಟೋರಿ ಓದಿ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts