ಬೀಜಿಂಗ್: ಕುಂಭಕರ್ಣನಂತೆ ನಿದ್ರಿಸುತ್ತಾರೆ ಎಂಬ ಮಾತನ್ನು ನಾವು ಕೇಳಿರುತ್ತೇವೆ. ಸುತ್ತಮುತ್ತಲು ನಡೆಯುತ್ತಿರುವ ವಿಚಾರದ ಬಗ್ಗೆ ಅರಿವೇ ಇಲ್ಲದೆ ಗಾಢವಾಗಿ ನಿದ್ರಿಸುವವರನ್ನು ಕಂಡು ಈ ಮಾತನ್ನು ಹೇಳುತ್ತಾರೆ. ಈ ವಿಚಾರ ಹೇಳಲು ಕಾರಣವಿದೆ. ಗಾಢನಿದ್ರೆಯಲ್ಲಿ ವ್ಯಕ್ತಿಯೊಬ್ಬರ ಮೂಗಿಗೆ ಮೂಲಕ ಜಿರಳೆಯು ದೇಹಕ್ಕೆ ತಲುಪಿರುವ ಘಟನೆಯೂ ಚೀನಾದಲ್ಲಿ ನಡೆದಿದೆ. .
ಇದನ್ನು ಓದಿ: ಕ್ಲಬ್ಗೆ ಎಂಟ್ರಿ ಸಿಗದ್ದಕ್ಕೆ ಫೈರಿಂಗ್ ಮಾಡಿದ ದುಷ್ಕರ್ಮಿಗಳು; ಮುಂದೆನಾಯ್ತು ನೀವೆ ನೋಡಿ..
ಮೂಗಿನ ಮೂಲಕ ಜಿರಳೆ ದೇಹವನ್ನು ಪ್ರವೇಶಿಸಿದರು ಆ ವ್ಯಕ್ತಿ ನಿದ್ರೆಯಿಂದ ಎಚ್ಚರಗೊಳ್ಳಲಿಲ್ಲ. ಸ್ವಲ್ಪ ಸಮಯದ ನಂತರ ಜಿರಳೆ ಆತನ ಮೂಗಿನಲ್ಲಿ ಹರಿದಾಡಿದ್ದರಿಂದ ಸಮಸ್ಯೆ ಕಾಣಿಸಿಕೊಂಡಿದೆ. ಅವರು ಎಷ್ಟು ಗಾಢನಿದ್ದೆಯಲ್ಲಿದ್ದರೂ ಎಂದರೆ ದೇಹದೊಳಗೆ ಜಿರಳೆ ಚಲನವಲನ ಕೂಡ ಅವರನ್ನು ಎಚ್ಚರಗೊಳ್ಳುವಂತೆ ಮಾಡಲಿಲ್ಲ. ಆ ವ್ಯಕ್ತಿಗೆ 58 ವರ್ಷ ವಯಸ್ಸಾಗಿದ್ದು, ಆತನ ಹೆಸರನ್ನು ಹೈಕೊ ಎಂದು ಹೇಳಲಾಗಿದೆ. ಅವರು ಚೀನಾದ ಹೆನಾನ್ ಪ್ರಾಂತ್ಯದ ನಿವಾಸಿಯಾಗಿದ್ದಾರೆ.
ಬೆಳಗ್ಗೆ ಎದ್ದಾಗ ಜಿರಳೆ ದೇಹವನ್ನು ಪ್ರವೇಶಿಸಿರುವ ವಿಚಾರವೆ ಅವರಿಗೆ ಗೊತ್ತಿಲ್ಲ. ಕೆಲವು ಸಮಯದ ನಂತರ ಉಸಿರಾಡುವಾಗ ಕೆಲವೊಮ್ಮೆ ಕೆಟ್ಟವಾಸನೆ ಬರಲು ಪ್ರಾರಂಭಿಸಿದೆ. ನಂತರ ಆತನ ಸ್ಥಿತಿಯು ಹದಗೆಡಲು ಪ್ರಾರಂಭಿಸಿದೆ. ನಂತರ ಬಾಯಿಯ ದುರ್ವಾಸನೆಯ ಜತೆಗೆ ಹಳದಿ ಬಣ್ಣದ ಲೋಳೆಯೂ ಬರಲಾರಂಭಿಸಿತು ಎಂದು ಹೇಳಲಾಗಿದೆ. ಕೆಮ್ಮಿನಿಂದ ಉಸಿರಾಟದ ತೊಂದರೆಯೂ ಶುರುವಾಗಿದೆ. ಇದಾದ ನಂತರ ಹೈಕೊ ಬಲವಂತವಾಗಿ ವೈದ್ಯರ ಬಳಿ ಹೋಗಿದ್ದಾರೆ.
ಆಸ್ಪತ್ರೆಯಲ್ಲಿ ಹೈಕೋವನ್ನು ವೈದ್ಯರು ಪರೀಕ್ಷಿಸಿದ ಬಳಿಕ ಶ್ವಾಸನಾಳದಲ್ಲಿ ಜಿರಳೆ ಇರುವುದು ಪತ್ತೆಯಾಗಿದೆ. ಒಂದು ಗಂಟೆಯ ಸರ್ಜರಿ ಬಳಿಕ ಜಿರಳೆಯನ್ನು ಹೊರ ತೆಗೆಯುವಲ್ಲಿ ವೈದ್ಯರ ತಂಡ ಯಶಸ್ವಿಯಾಗಿದೆ. ದೇಹಕ್ಕೆ ಪ್ರವೇಶಿಸಿದ್ದ ಜಿರಳೆ ಕೊಳೆಯಲಾರಂಭಿಸಿದೆ ಎಂದು ವೈದ್ಯರು ಹೇಳಿದ್ದಾರೆ. ಆ ವ್ಯಕ್ತಿಯನ್ನು ಒಂದು ದಿನದ ನಂತರ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದ್ದು, ಈಗ ಹೈಕೊ ಆರೋಗ್ಯವಾಗಿದ್ದಾರೆ ಎಂದು ಹೇಳಲಾಗಿದೆ. ಗಾಢವಾಗಿ ನಿದ್ರಿಸುವವರಿಗಾಗಿ ಇದೊಂದು ಮಾಹಿತಿ. (ಏಜೆನ್ಸೀಸ್)
ರಸ್ತೆಯಲ್ಲಿ ಹೋಗುತ್ತಿದ್ದ ಯುವಕನ ಹೃದಯಕ್ಕೆ ಇರಿದ ಹಂತಕರು; ಘಟನೆ ಬಗ್ಗೆ ಪೊಲೀಸರು ಹೇಳಿದಿಷ್ಟು..