Cock Fighting : ವರ್ಷದ ಮೊದಲ ಹಬ್ಬ ಸಂಕ್ರಾಂತಿ ಮುಗಿದಿದೆ. ಎರಡೂ ತೆಲುಗು ರಾಜ್ಯಗಳ ಜನರು ಸಂಭ್ರಮದಲ್ಲಿ ಮಿಂದ್ದೆದಿದ್ದಾರೆ. ವಿಶೇಷವಾಗಿ ಆಂಧ್ರಪ್ರದೇಶದ ಜನರು ಕೋಳಿ ಕಾಳಗ ಅಥವಾ ಕೋಳಿ ಅಂಕ ಸ್ಪರ್ಧೆಯನ್ನು ಆನಂದಿಸುತ್ತಾರೆ. ಈ ಬಾರಿ ಕರಾವಳಿ ಆಂಧ್ರದಲ್ಲಿ ಮಾತ್ರವಲ್ಲ ರಾಯಲಸೀಮಾದಲ್ಲಿಯೂ ಕೋಳಿ ಕಾಳಗ ನಡೆದಿದೆ.
ಪಶ್ಚಿಮ ಗೋದಾವರಿ ಜಿಲ್ಲೆಯ ತಡೆಪಲ್ಲಿಗುಡೆಮ್‌ನಲ್ಲಿ ನಡೆದ ಒಂದು ಕೋಟಿ ರೂಪಾಯಿ ಬಹುಮಾನ ಮೊತ್ತದ ಕೋಳಿ ಅಂಕ ಸ್ಪರ್ಧೆ ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯ ವಿಷಯವಾಗಿದೆ. ಇತ್ತೀಚೆಗೆ, ನಡೆದ ಮತ್ತೊಂದು ಕೋಳಿ ಕಾಳಗಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಕೋಳಿಯಿಂದು ಸುಮ್ಮನೇ ಮೌನವಾಗಿ ನಿಲ್ಲುವ ಮೂಲಕ 1.25 ಕೋಟಿ ರೂ. ಬಹುಮಾನ ಗೆದ್ದಿದೆ. ಕೇಳಲು ಇದು ನಿಮಗೆ ಅಚ್ಚರಿ ಎನಿಸಿದರೂ ಇದೇ ಸತ್ಯ.
ಪಶ್ಚಿಮ ಗೋದಾವರಿ ಜಿಲ್ಲೆಯ ಭೀಮಾವರಂನಲ್ಲಿ ಐದು ಕೋಳಿಗಳ ನಡುವೆ ಕಾಳಗವನ್ನ ನಡೆಸಲಾಯಿತು. ಒಂದು ವೃತ್ತ ಎಳೆದು ಐದು ಕೋಳಿಗಳನ್ನು ಅದರೊಳಗೆ ಬಿಟ್ಟರು. ಇದರಲ್ಲಿ ನಾಲ್ಕು ಕೋಳಿಗಳು ಪರಸ್ಪರ ಮುಖಾಮುಖಿಯಾಗಿ ಹೋರಾಡಲು ನಿಂತವು. ಆದರೆ, ಒಂದು ಕೋಳಿ ಮಾತ್ರ ಮೌನವಾಗಿ ನಿಂತುಕೊಂಡಿತ್ತು. ಇತರೆ ಕೋಳಿಗಳು ತೀವ್ರ ಕಾಳಗವನ್ನು ನಡೆಸುತ್ತಿದ್ದರೆ, ಆ ಒಂದು ಕೋಳಿ ಮಾತ್ರ ತುಟಿಕ್ ಪಿಟಿಕ್ ಅನ್ನದೆ ಸುಮ್ಮನೇ ನಿಂತಿತ್ತು. ಮೊದಲು ಎರಡು ಕೋಳಿಗಳು ಕೆಳಗೆ ಬಿದ್ದವು. ಇದಾದ ನಂತರ ಇನ್ನೊಂದು ಕೆಳಗೆ ಬಿದ್ದಿತು. ಚೆನ್ನಾಗಿ ಹೋರಾಡುತ್ತಿದ್ದ ನಾಲ್ಕನೇ ಕೋಳಿ ಸಹ ಇದ್ದಕ್ಕಿದ್ದಂತೆ ನೆಲಕ್ಕೆ ಬಿದ್ದಿತು. ನಾಲ್ಕು ಕೋಳಿಗಳು ಹೋರಾಡಿ ಸತ್ತವು. ಆದರೆ, ಕೊನೆಯಲ್ಲಿ, ಮೌನವಾಗಿ ನಿಂತಿದ್ದ ಕೋಳಿ ವಿಜಯಶಾಲಿಯಾಗಿ ಹೊರಹೊಮ್ಮಿತು. ಇದರಿಂದ ಆ ಕೋಳಿಯ ಖುಷಿಗೆ ಪಾರವೇ ಇಲ್ಲದಂತಾಗಿ ಕುಣಿದು ಕುಪ್ಪಳಿಸಿದರು.
ಏನೂ ಮಾಡದೆ ಪಂದ್ಯವನ್ನು ಗೆದ್ದ ಕೋಳಿಗೆ 1.25 ಕೋಟಿ ರೂಪಾಯಿ ಬಹುಮಾನ ನೀಡಲಾಯಿತು. ಕೋಳಿಯ ಮಾಲೀಕರು ತನ್ನ ಕೋಳಿಯನ್ನು ಹಿಡಿದುಕೊಂಡು ಇಡೀ ಪ್ರದೇಶದಾದ್ಯಂತ ಓಡಿದರು. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವಿಡಿಯೋ ನೋಡಿದ ನೆಟ್ಟಿಗರು ಹುಬ್ಬೇರಿಸಿದ್ದಾರೆ. ಒಂದು ಕಾಲು ಕೂಡ ಅಲುಗಾಡಿಸದೇ ಪಂದ್ಯವನ್ನು ಗೆದ್ದ ಕೋಳಿ ನಿಜಕ್ಕೂ ಗ್ರೇಟ್. ಜಗಳವಾದಾಗ ಮೌನವಾಗಿರುವುದಕ್ಕಿಂತ ಉತ್ತಮ ಮಾರ್ಗ ಬೇರೊಂದಿಲ್ಲ ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ. (ಏಜೆನ್ಸೀಸ್)
ಪಾಕಿಸ್ತಾನಕ್ಕೆ ಹೋಗಲಿದ್ದಾರೆ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮ! ಕಾರಣ ಹೀಗಿದೆ… Rohit Sharma
ಊಟದಲ್ಲಿ ಟೊಮ್ಯಾಟೋ, ಸೌತೇಕಾಯಿಗಿಲ್ಲ ಜಾಗ: ಇದೇ ನೋಡಿ ನಟಿ ರಶ್ಮಿಕಾ ಬ್ಯೂಟಿ ಹಿಂದಿನ ರಹಸ್ಯ! Rashmika Mandanna
ಯುವಕನ ಇನ್ಸ್ಟಾಗ್ರಾಂ ಖಾತೆ ನೋಡಿ ದಂಗಾದ ಪೊಲೀಸರು! ಪರಿಚಿತ ಮಹಿಳೆಯರಿಗೆ ಶುರುವಾಯ್ತು ನಡುಕ | Cyber Crime