Rashmika Mandanna : ಸ್ಯಾಂಡಲ್ವುಡ್, ಟಾಲಿವುಡ್, ಕಾಲಿವುಡ್ ಹಾಗೂ ಬಾಲಿವುಡ್ ಹೀಗೆ ಹಂತ ಹಂತವಾಗಿ ಬೆಳೆಯುತ್ತಾ ನಾಯಕಿಯಾಗಿ ಅಗ್ರ ಸ್ಥಾನಕ್ಕೇರಿದ್ದಾರೆ ನಟಿ ರಶ್ಮಿಕಾ ಮಂದಣ್ಣ. ಸಿನಿಮಾ ಇಂಡಸ್ಟ್ರಿಯಲ್ಲಿ ಅದೃಷ್ಟ ಎಂದರೆ ಹೇಗಿರಬೇಕು ಅಂದರೆ, ರಶ್ಮಿಕಾ ರೀತಿ ಇರಬೇಕು. ಏಕೆಂದರೆ, ನಟಿಸಿದ ಮೊದಲ ಚಿತ್ರ ಕಿರಿಕ್ ಪಾರ್ಟಿ ಸೂಪರ್ ಡೂಪರ್ ಹಿಟ್ ಆಯಿತು. ಅಲ್ಲದೆ, ಈ ಚಿತ್ರದಿಂದಲೇ ತೆಲುಗು ಚಿತ್ರದಿಂದ ಹೊಸ ಹೊಸ ಆಫರ್ಗಳು ಬರಲು ಶುರುವಾಯಿತು. ಟಾಲಿವುಡ್ನಲ್ಲೂ ಸ್ಟಾರ್ ಹೀರೋಯಿನ್ ಮಾಡಿತು. ಆದರೆ, ಕಾಲಿವುಡ್‌ನಲ್ಲಿ ಎರಡು ಚಿತ್ರಗಳನ್ನು ಮಾಡಿದರೂ ರಶ್ಮಿಕಾಗೆ ಹೆಚ್ಚು ಖ್ಯಾತಿಯನ್ನು ತಂದುಕೊಟ್ಟಿಲ್ಲ. ಇದಾದ ಬಳಿಕ ಬಾಲಿವುಡ್ಗೆ ಪದಾರ್ಪಣೆ ಮಾಡಿದ ಸೌತ್ ಬ್ಯೂಟಿ, ಅಲ್ಲಿಯೂ ಕ್ರೇಜಿ ಹೀರೋಯಿನ್ ಆಗಿದ್ದಾರೆ. ಬಾಲಿವುಡ್ನಲ್ಲಿ ಸಾಲು ಸಾಲು ಆಫರ್ಗಳು ಬರುತ್ತಿದೆ.
ಕಡಿಮೆ ಸಮಯದಲ್ಲಿ ಸ್ಟಾರ್ ಹೀರೋಯಿನ್ ಪಟ್ಟ ಪಡೆದಿರುವ ರಶ್ಮಿಕಾ, ಸಾಮಾಜಿಕ ಜಾಲತಾಣದಲ್ಲಿಯೂ ಸಕ್ರಿಯರಾಗಿದ್ದಾರೆ. ಇನ್ಸ್ಟಾಗ್ರಾಂನಲ್ಲಿ 44 ಮಿಲಿಯನ್‌ಗಿಂತಲೂ ಅಧಿಕ ಫಾಲೋವರ್‌ಗಳನ್ನು ಹೊಂದಿದ್ದಾರೆ. ಆಗಾಗ ಹಾಟ್ ಫೋಟೋಗಳನ್ನು ಹರಿಬಿಡುತ್ತಲೇ ಇರುತ್ತಾರೆ. ಅಲ್ಲದೆ, ವರ್ಕೌಟ್ ವಿಡಿಯೋಗಳನ್ನು ಸಹ ಹಂಚಿಕೊಳ್ಳುತ್ತಿರುತ್ತಾರೆ. ತೆರೆಯ ಮೇಲೆ ಬಹಳ ಸುಂದರವಾಗಿ ಕಾಣುವ ರಶ್ಮಿಕಾ, ತಮ್ಮ ಸೌಂದರ್ಯವನ್ನು ಕಾಪಾಡಿಕೊಳ್ಳಲು ಭಾರಿ ಕಸರತ್ತು ನಡೆಸುವುದಲ್ಲದೆ, ಕಟ್ಟುನಿಟ್ಟಿನ ಆಹಾರ ಕ್ರಮವನ್ನು ಅನುಸರಿಸುತ್ತಾರೆ.
ಇತ್ತೀಚೆಗಷ್ಟೇ ಕೆಲವು ಮಾಧ್ಯಮಗಳು ರಶ್ಮಿಕಾರ ಸೌಂದರ್ಯ ರಹಸ್ಯಗಳು ಮತ್ತು ಆಹಾರ ಪದ್ಧತಿಯ ಬಗ್ಗೆ ವರದಿ ಮಾಡಿವೆ. ಈ ಹಿಂದೆ ಮಾಧ್ಯಮವೊಂದಕ್ಕೆ ನೀಡಿದ ಹೇಳಿಕೆಯಲ್ಲಿ, ತಮ್ಮ ಆರೋಗ್ಯದ ಹಿಂದೆ ಸರಿಯಾದ ಆಹಾರ ಪದ್ಧತಿ ಇದೆ ಎಂದು ರಶ್ಮಿಕಾ ಹೇಳಿದ್ದರು. ರಶ್ಮಿಕಾ ಅವರು ಹೆಚ್ಚಾಗಿ ಸಸ್ಯಾಹಾರಿ ಆಹಾರವನ್ನು ಮಾತ್ರ ಸೇವಿಸುತ್ತಾರೆ. ಯಾವುದೇ ಕಾರಣಕ್ಕೂ ಜಂಕ್ ಫುಡ್ಗಳನ್ನು ಮಾತ್ರ ತಿನ್ನುವುದಿಲ್ಲ ಎಂದು ಹೇಳಿದ್ದಾರೆ.
ಶೂಟಿಂಗ್ ಸ್ಥಳಗಳಲ್ಲಿರುವಾಗಲೂ, ರಶ್ಮಿಕಾ ಮನೆಯಲ್ಲಿ ತಯಾರಿಸಿದ ಆಹಾರವನ್ನು ಮಾತ್ರ ತಿನ್ನುತ್ತಾರೆ. ಕೆಲಸದಲ್ಲಿ ಎಷ್ಟೇ ಬಿಜಿಯಾಗಿರಲಿ ಅಥವಾ ಯಾವುದೇ ಪ್ರದೇಶದಲ್ಲಿರಲಿ ವ್ಯಾಯಾಮ ಮಾಡುವುದನ್ನು ಮಾತ್ರ ರಶ್ಮಿಕಾ ಮರೆಯುವುದಿಲ್ಲ. ಕಿಕ್ ಬಾಕ್ಸಿಂಗ್, ಸ್ಕಿಪ್ಪಿಂಗ್, ನೃತ್ಯ, ಈಜು, ಯೋಗ ಮತ್ತು ನಡಿಗೆ ರಶ್ಮಿಕಾರ ನೆಚ್ಚಿನ ವ್ಯಾಯಾಮಗಳಾಗಿವೆ. ತಮ್ಮ ಸ್ನಾಯುಗಳ ಬಲವನ್ನು ಹೆಚ್ಚಿಸಿಕೊಳ್ಳಲು ರಶ್ಮಿಕಾ ಅವರು ಎಲ್ಲ ರೀತಿಯ ವ್ಯಾಯಾಮಗಳನ್ನು ಸಹ ಮಾಡುತ್ತಾರೆ.
ಇನ್ನು ರಶ್ಮಿಕಾ ಅವರು ತನ್ನ ದೇಹಕ್ಕೆ ಅಗತ್ಯವಿರುವಷ್ಟು ನೀರು ಕುಡಿಯುವುದನ್ನು ಸಹ ಮರೆಯುವುದಿಲ್ಲ. ಬೆಳಗಿನ ಉಪಾಹಾರಕ್ಕಾಗಿ ಆರೋಗ್ಯಕರ ಕೊಬ್ಬುಗಳಿಂದ ತುಂಬಿರುವ ಆವಕಾಡೊ ಟೋಸ್ಟ್ ರಶ್ಮಿಕಾ ಸೇವಿಸುತ್ತಾರೆ. ದಾಲ್ಚಿನ್ನಿ ಜೊತೆ ಸಿಹಿ ಗೆಣಸು ರಶ್ಮಿಕಾರ ನೆಚ್ಚಿನ ಭಕ್ಷ್ಯಗಳಾಗಿವೆ. ಆದಾಗ್ಯೂ, ಅಲರ್ಜಿ ಸಮಸ್ಯೆಗಳಿಂದಾಗಿ, ರಶ್ಮಿಕಾ ಅವರು ಟೊಮ್ಯಾಟೋ, ಆಲೂಗಡ್ಡೆ, ಕ್ಯಾಪ್ಸಿಕಂ ಮತ್ತು ಸೌತೆಕಾಯಿಗಳನ್ನು ಒಳಗೊಂಡಿರುವ ಆಹಾರಗಳನ್ನು ಸಂಪೂರ್ಣವಾಗಿ ತ್ಯಜಿಸಿದ್ದಾರೆ. (ಏಜೆನ್ಸೀಸ್)
ಕನ್ನಡ ಚಿತ್ರರಂಗದ ಹಿರಿಯ ಹಾಸ್ಯನಟ ಸರಿಗಮ ವಿಜಿ ಇನ್ನಿಲ್ಲ | Sarigama Viji
ಆರ್ಸಿಬಿಗೆ ಗುಡ್ ನ್ಯೂಸ್: 50 ಎಸೆತದಲ್ಲಿ 80 ರನ್, ಫಾರ್ಮ್ಗೆ ಮರಳಿದ ಸ್ಟಾರ್ ಆಟಗಾರ! RCB