RCB : ಐಪಿಎಲ್ ಫ್ರಾಂಚೈಸಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ( RCB ) ತಂಡಕ್ಕೆ ಒಳ್ಳೆಯ ಸುದ್ದಿಯೊಂದು ಸಿಕ್ಕಿದೆ. ಅದೇನೆಂದರೆ, ಬಿಗ್ ಬ್ಯಾಷ್ ಲೀಗ್ (ಬಿಬಿಎಲ್)ನಲ್ಲಿ ಕಳಪೆ ಪ್ರದರ್ಶನ ನೀಡುತ್ತಿದ್ದ ಜಾಕೋಬ್ ಬೆಥೆಲ್ ಅಂತಿಮವಾಗಿ ಫಾರ್ಮ್ಗೆ ಮರಳಿದ್ದಾರೆ. ನಿನ್ನೆ (ಜನವರಿ 14) ಹೋಬಾರ್ಟ್ ಹರಿಕೇನ್ಸ್ ವಿರುದ್ಧದ ಪಂದ್ಯದಲ್ಲಿ, ಮೆಲ್ಬೋರ್ನ್ ರೆನೆಗೇಡ್ಸ್ ಪರ ಬೆಥೆಲ್ ಮಿಂಚಿನ ಅರ್ಧಶತಕ ಗಳಿಸಿದರು (87 ರನ್, 50 ಎಸೆತ, 8 ಬೌಂಡರಿ, 4 ಸಿಕ್ಸರ್).
ಬೆಥೆಲ್ ಅವರನ್ನು ಹೊರತುಪಡಿಸಿ, ಮೆಲ್ಬೋರ್ನ್ ರೆನೆಗೇಡ್ಸ್ ಇನ್ನಿಂಗ್ಸ್‌ನಲ್ಲಿ ಯಾರೂ ಉತ್ತಮ ಪ್ರದರ್ಶನ ನೀಡಲಿಲ್ಲ. ಟಿಮ್ ಸೀಫರ್ಟ್ (24) ಮತ್ತು ನಾಯಕ ಸದರ್ಲ್ಯಾಂಡ್ (15) ಮಾತ್ರ ಎರಡಂಕಿಯ ರನ್ ಗಳಿಸಿದರು. ಜೋಶ್ ಬ್ರೌನ್ 6, ಮಾರ್ಕಸ್ ಹ್ಯಾರಿಸ್ 1, ಜೇಕ್ ಫ್ರೇಸರ್ ಮೆಕ್‌ಗುರ್ಕ್ 7, ಹ್ಯಾರಿ ಡಿಕ್ಸನ್ 1, ಟಾಮ್ ರೋಜರ್ಸ್ 5 (ಔಟಾಗದೆ), ಫರ್ಗಸ್ ಓ ನೀಲ್ 2 (ಔಟಾಗದೆ) ರನ್ ಗಳಿಸಿದರು. ಹರಿಕೇನ್ಸ್ ಬೌಲರ್‌ಗಳಲ್ಲಿ ರಿಲೇ ಮೆರೆಡಿತ್ ಮೂರು ವಿಕೆಟ್ ಪಡೆದರೆ, ನಾಥನ್ ಇಲ್ಲಿಸ್ ಮತ್ತು ಮಿಚೆಲ್ ಓವನ್ ತಲಾ ಒಂದು ವಿಕೆಟ್ ಪಡೆದರು. ಅಂತಿಮವಾಗಿ ರೆನೆಗೇಡ್ಸ್ ತಂಡ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್‌ಗಳ ನಷ್ಟಕ್ಕೆ 154 ರನ್ ಗಳಿಸಿತು. 155 ರನ್‌ಗಳ ಸಾಮಾನ್ಯ ಗುರಿಯನ್ನು ಬೆನ್ನಟ್ಟಿದ ಹರಿಕೇನ್ಸ್ 19.4 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ ಗುರಿಯನ್ನು ಮುಟ್ಟಿ, ಗೆದ್ದು ಬೀಗಿತು.
JACOB BETHELL – A SPECIAL PLAYER. 🌟
The Highlights of Jacob Bethel’s 87(50) in the BBL and all players combined made 61(70) – Bethel, The Future of RCB. 🔥pic.twitter.com/zIyhli7iOi
— Tanuj Singh (@ImTanujSingh) January 14, 2025
ಇತ್ತೀಚೆಗೆ ಮುಕ್ತಾಯಗೊಂಡ ಐಪಿಎಲ್ ಮೆಗಾ ಹರಾಜಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಜಾಕೋಬ್ ಬೆಥೆಲ್ ಅವರನ್ನು 2.6 ಕೋಟಿಗೆ ಖರೀದಿಸಿದೆ. ಆರ್‌ಸಿಬಿ ತಂಡ ಜಾಕೋಬ್ ಬೆಥೆಲ್ ಮೇಲೆ ಹೆಚ್ಚಿನ ನಿರೀಕ್ಷೆಗಳನ್ನು ಹೊಂದಿದೆ. ಆದಾಗ್ಯೂ, ಬಿಬಿಎಲ್‌ನ ಮೊದಲಾರ್ಧದಲ್ಲಿ ಬೆಥೆಲ್ ಅವರ ಕಳಪೆ ಫಾರ್ಮ್ ಆರ್‌ಸಿಬಿ ಚಿಂತೆಗೆ ಕಾರಣವಾಗಿತ್ತು. ಆದರೆ, ಇದೀಗ ಭರ್ಜರಿಯಾಗಿ ಫಾರ್ಮ್ಗೆ ಮರಳಿದ್ದು, ಆರ್‌ಸಿಬಿ ಪಾಲಿಗೆ ವರವಾಗಲಿದೆ. ಇದೇ ಮಾರ್ಚ್ 23ರಿಂದ ಐಪಿಎಲ್ ಪಂದ್ಯಾವಳಿಗಳು ಶುರುವಾಗಲಿದ್ದು, ಮೇ 21ಕ್ಕೆ ಫೈನಲ್ ನಡೆಯಲಿದೆ.
ಇದನ್ನೂ ಓದಿ: ಈ ಸಮಯದಲ್ಲಿ ಯಾವುದೇ ಕಾರಣಕ್ಕೂ ರೀಲ್ಸ್ ನೋಡ್ಬೇಡಿ… ಗಂಭೀರ ಕಾಯಿಲೆ ಬರುತ್ತೆ ಎಚ್ಚರ! Reels
ಬಿಬಿಎಲ್-2025ರಲ್ಲಿ ಬೆಥೆಲ್ ಗಳಿಸಿದ ರನ್ಗಳು
87 (50) vs ಹೋಬಾರ್ಟ್ ಹರಿಕೇನ್ಸ್
1(8) vs ಮೆಲ್ಬೋರ್ನ್ ಸ್ಟಾರ್ಸ್
2(9) vs ಪರ್ತ್ ಸ್ಕಾರ್ಚರ್ಸ್
49(36) vs ಮೆಲ್ಬೋರ್ನ್ ಸ್ಟಾರ್ಸ್
21(21) vs ಅಡಿಲೇಡ್ ಸ್ಟ್ರೈಕರ್ಸ್
2(4) vs ಸಿಡ್ನಿ ಥಂಡರ್
30(22) vs ಪರ್ತ್ ಸ್ಕಾರ್ಚರ್ಸ್
3(6) vs ಹೋಬಾರ್ಟ್ ಹರಿಕೇನ್ಸ್
ನೀವು ಆಗಾಗ ಪಾನಿಪುರಿ ತಿಂತಿದ್ದೀರಾ? ಹಾಗಾದರೆ ಇಲ್ಲಿದೆ ನಿಮಗೊಂದು ಗುಡ್ನ್ಯೂಸ್! Panipuri