Actor Ajith Kumar : ಕಾಲಿವುಡ್ ಸ್ಟಾರ್ ಹೀರೋ ಅಜಿತ್ ಕುಮಾರ್, ತಮ್ಮ ಅಭಿಮಾನಿಗಳನ್ನು ಗುರಿಯಾಗಿರಿಸಿಕೊಂಡು ನೀಡಿರುವ ಹೇಳಿಕೆಗಳು ಭಾರಿ ಸಂಚಲನ ಮೂಡಿಸುತ್ತಿವೆ. ಇತರರ ವೈಯಕ್ತಿಕ ಜೀವನದಲ್ಲಿ ತಲೆ ಹಾಕುವುದರಲ್ಲಿ ಯಾವುದೇ ಅರ್ಥವಿಲ್ಲ ಎಂದು ಅಭಿಮಾನಿಗಳಿಗೆ ಬುದ್ಧಿಮಾತು ಹೇಳಿದ್ದಾರೆ. ಈ ಮೂಲಕ ಸಾಮಾಜಿಕ ಜಾಲತಾಣದಲ್ಲಿ ನಡೆಯುವ ಫ್ಯಾನ್ಸ್ ವಾರ್ ನಿಲ್ಲಿಸುವಂತೆ ಕರೆ ನೀಡಿದ್ದಾರೆ.
ಯಾರೊಬ್ಬರು ಕೂಡ ಇತರರ ವಿಷಯಗಳಲ್ಲಿ ಹಸ್ತಕ್ಷೇಪ ಮಾಡಬಾರದು. ಮೊದಲು ನಿಮ್ಮ ಸ್ವಂತ ಕೆಲಸದ ಮೇಲೆ ಗಮನಹರಿಸಿ. ಇತರರ ಬಗ್ಗೆ ಯೋಚಿಸಿ ನೀವು ವಿಚಲಿತರಾಗಬೇಡಿ. ಅಂತಹ ವಿಷಯಗಳಿಂದ ನಿಮಗೆ ಯಾವುದೇ ಪ್ರಯೋಜನವಾಗುವುದಿಲ್ಲ. ಮೊದಲು ನಿಮ್ಮ ಜೀವನದ ಬಗ್ಗೆ ಯೋಚಿಸಿ. ನಾನು ನನ್ನ ಅಭಿಮಾನಿಗಳಿಗೂ ಇದನ್ನೇ ಹೇಳುತ್ತೇನೆ. ಸಿನಿಮಾ ನೋಡುವುದೇನೋ ಸರಿ. ಆದರೆ, ನೀವು ಜೈ ಅಜಿತ್.. ಜೈ ವಿಜಯ್ ಎಂದು ಜಪಿಸಿದರೆ ಅದಕ್ಕೆ ಅರ್ಥವಿಲ್ಲ. ನೀವು ತೋರಿಸುತ್ತಿರುವ ಪ್ರೀತಿಗೆ ನಾನು ಸಂತೋಷಪಡುತ್ತೇನೆ. ಆದರೆ, ನಿಮ್ಮ ಜೀವನ ಚೆನ್ನಾಗಿದೆ ಎಂದು ತಿಳಿದ ನಂತರವೇ ನನಗೆ ಸಂತೋಷವಾಗುತ್ತದೆ ಎಂದು ಅಜಿತ್ ಹೇಳಿದರು.
ಮೋಟಾರ್ ಸ್ಪೋರ್ಟ್ಸ್ ನನ್ನ ಜೀವಮಾನದ ಒಂದು ಉತ್ಸಾಹ. ಇಲ್ಲಿ ಅನೇಕ ಅಭಿಮಾನಿಗಳು ಬಂದಿದ್ದಾರೆ. ಅದನ್ನು ನೋಡಿ ನನಗೆ ಸಂತೋಷವಾಯಿತು. ನೀವೆಲ್ಲರೂ (ಅಭಿಮಾನಿಗಳು) ಖುಷಿಯಾಗಿ, ಆರೋಗ್ಯಕರ ಮತ್ತು ಶಾಂತಿಯುತ ಜೀವನವನ್ನು ನಡೆಸಬೇಕೆಂದು ನಾನು ಬಯಸುತ್ತೇನೆ. ನಿಮ್ಮ ಕುಟುಂಬವನ್ನು ನೋಡಿಕೊಳ್ಳಿ. ಇಲ್ಲಸಲ್ಲದ ವಿಚಾರಗಳಿಗೆ ಸಮಯವನ್ನು ವ್ಯರ್ಥ ಮಾಡಬೇಡಿ. ಚೆನ್ನಾಗಿ ಓದಿ, ಕಷ್ಟಪಟ್ಟು ಕೆಲಸ ಮಾಡಿ ಮತ್ತು ಜೀವನವನ್ನು ಆನಂದಿಸಿ. ನೀವು ಇಷ್ಟಪಡುವುದನ್ನು ಮಾಡಿದಾಗ, ಯಶಸ್ವಿಯಾದರೆ ಒಳ್ಳೆಯದು. ಒಂದು ವೇಳೆ ಯಶಸ್ಸನ್ನು ಸಾಧಿಸದಿದ್ದರೆ, ಅಷ್ಟಕ್ಕೆ ಸುಸ್ತಾಗಬೇಡಿ. ಇಲ್ಲಿ ಸ್ಪರ್ಧೆ ಹೆಚ್ಚು ಮುಖ್ಯ. ನಿಮ್ಮ ಇಚ್ಛಾಶಕ್ತಿ ಮತ್ತು ಸಮರ್ಪಣೆಯನ್ನು ಬಿಟ್ಟುಕೊಡಬೇಡಿ ಎಂದಿರುವ ಅಜಿತ್, ನಿಮ್ಮೆಲ್ಲರನ್ನೂ ನಾನು ಪ್ರೀತಿಸುತ್ತೇನೆ ಎಂದರು.
Ak.
My fans
Their commitments. pic.twitter.com/5fW17Gghgu— Suresh Chandra (@SureshChandraa) January 11, 2025
ಅಂದಹಾಗೆ ಇತ್ತೀಚೆಗೆ ದುಬೈನಲ್ಲಿ ನಡೆದ ಕಾರು ರೇಸಿಂಗ್‌ನಲ್ಲಿ ಅಜಿತ್ ತಂಡ ಮೂರನೇ ಸ್ಥಾನ ಗಳಿಸಿತು. ಕಾರು ರೇಸಿಂಗ್‌ನಲ್ಲಿ ಗೆದ್ದಿದ್ದಕ್ಕಾಗಿ ಚಲನಚಿತ್ರ ಗಣ್ಯರು ಅಜಿತ್ ಅವರನ್ನು ಪ್ರಶಂಸಿಸಿದ್ದಾರೆ. ಕಾರ್ ರೇಸ್ನಲ್ಲಿ ಗೆದ್ದ ನಂತರ, ಅಜಿತ್ ಅವರು ರಾಷ್ಟ್ರಧ್ವಜವನ್ನು ಹಿಡಿದು ತಮ್ಮ ಸಂತೋಷವನ್ನು ವ್ಯಕ್ತಪಡಿಸಿದರು.
ಕಾಲಿವುಡ್ ಸ್ಟಾರ್ ಅಜಿತ್ ಕುಮಾರ್ ಪ್ರಸ್ತುತ ‘ವಿದಮುಯರ್ಚಿ’ ಚಿತ್ರದ ಮೂಲಕ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದ್ದಾರೆ. ಈಗಾಗಲೇ ಚಿತ್ರೀಕರಣ ಪೂರ್ಣಗೊಂಡಿದ್ದು, ಅನಿರೀಕ್ಷಿತ ಕಾರಣಗಳಿಂದ ಸಂಕ್ರಾಂತಿಗೆ ಬಿಡುಗಡೆಯಾಗಲಿಲ್ಲ. ಈ ಚಿತ್ರವನ್ನು ಮಗಿಲ್ ತಿರುಮೇನಿ ನಿರ್ದೇಶಿಸಿದ್ದಾರೆ. ಈ ಚಿತ್ರದಲ್ಲಿ ತ್ರಿಶಾ ನಾಯಕಿಯಾಗಿ ನಟಿಸಿದ್ದಾರೆ. ಅರ್ಜನ್ ಸರ್ಜಾ ಕೂಡ ಪ್ರಮುಖ ಪಾತ್ರದಲ್ಲಿದ್ದಾರೆ. ಲೈಕಾ ಪ್ರೊಡಕ್ಷನ್ಸ್ ಭಾರಿ ಬಜೆಟ್‌ನಲ್ಲಿ ಈ ಸಿನಿಮಾವನ್ನು ನಿರ್ಮಿಸಿದೆ.
ಅಜಿತ್ ಕುಮಾರ್ ಅವರು ಟಾಲಿವುಡ್‌ನ ಟಾಪ್ ನಿರ್ಮಾಣ ಸಂಸ್ಥೆ ಮೈತ್ರಿ ಮೂವಿ ಮೇಕರ್ಸ್ ಜೊತೆ ಕೈಜೋಡಿಸಿದ್ದಾರೆ. ಅವರು ನಾಯಕನಾಗಿ ‘ಗುಡ್ ಬ್ಯಾಡ್ ಅಗ್ಲಿ’ ಎಂಬ ಆಕ್ಷನ್ ಥ್ರಿಲ್ಲರ್ ಚಿತ್ರದಲ್ಲಿ ನಟಿಸಲಿದ್ದಾರೆ. ಇದರಲ್ಲಿಯೂ ತ್ರಿಷಾ ನಾಯಕಿಯಾಗಿ ನಟಿಸುತ್ತಿದ್ದಾರೆ. ‘ಮಾರ್ಕ್ ಆಂಟೋನಿ’ ಖ್ಯಾತಿಯ ಅಧಿಕ್ ರವಿಚಂದ್ರನ್ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಏಪ್ರಿಲ್ 10 ರಂದು ಬೇಸಿಗೆಯಲ್ಲಿ ಈ ಚಿತ್ರ ಬಿಡುಗಡೆಯಾಗಲಿದೆ ಎಂದು ನಿರ್ಮಾಪಕರು ಘೋಷಿಸಿದ್ದಾರೆ. (ಏಜೆನ್ಸೀಸ್)
ಮನುಷ್ಯನ ರೀತಿ ನೀರಲ್ಲಿ ಮುಳುಗಿ ಸಾಯುತ್ತಿರುವಂತೆ ನಟಿಸಿದ ಮೊಸಳೆ! ತಜ್ಞರು ಕೊಟ್ರು ಅಚ್ಚರಿ ಉತ್ತರ… Crocodiles
ನೀವು iPhone ಬಳಸ್ತಿದ್ದೀರಾ? ಮೋಸ ಹೋಗ್ತಿದ್ದೀರಿ ಎಚ್ಚರ! ಶಾಕಿಂಗ್ ಸತ್ಯ ಬಿಚ್ಚಿಟ್ಟ ಬೆಂಗಳೂರು ಮಹಿಳೆ