blank

ಕನ್ನಡ ಚಿತ್ರರಂಗದ ಹಿರಿಯ ಹಾಸ್ಯನಟ ಸರಿಗಮ ವಿಜಿ ಇನ್ನಿಲ್ಲ | Sarigama Viji

Sarigama Viji

Sarigama Viji : ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಕನ್ನಡ ಚಿತ್ರರಂಗದ ಹಿರಿಯ ಹಾಸ್ಯನಟ ಸರಿಗಮ ವಿಜಿ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಇಂದು (ಜನವರಿ 15) ಬೆಳಗ್ಗೆ ನಿಧನರಾಗಿದ್ದಾರೆ.

ಸರಿಗಮ ವಿಜಿ ಅವರಿಗೆ 76 ವರ್ಷ ವಯಸ್ಸಾಗಿತ್ತು. ಶ್ವಾಸಕೋಶ ಸಮಸ್ಯೆಯಿಂದ ಬಳಲುತ್ತಿದ್ದ ವಿಜಿ ಅವರನ್ನು ಯಶವಂತಪುರದ ಖಾಸಗಿ ಆಸ್ಪತ್ರೆಯೊಂದಕ್ಕೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಇಂದು ಕೊನೆಯುಸಿರೆಳೆದಿದ್ದಾರೆ. ನಾಳೆ (ಜ.16) ಬೆಳಗ್ಗೆ ಚಾಮರಾಜಪೇಟೆಯ ಟಿ ಆರ್ ಮಿಲ್ ಬಳಿ ಬರುವ ಚಿತಾಗಾರದಲ್ಲಿ ಅಂತಿಮ ಕ್ರಿಯೆ ನೆರವೇರಲಿದೆ ಎಂದು ಕುಟುಂಬದ ಮೂಲಗಳು ಮಾಹಿತಿ ನೀಡಿವೆ.

ಸರಿಗಮ ವಿಜಿ ಅವರ ಮೂಲ ಹೆಸರು ಆರ್​. ವಿಜಯ್​ ಕುಮಾರ್​. ಸರಿಗಮ ವಿಜಿ ಎಂಬ ತಮ್ಮ ರಂಗನಾಮದಿಂದಲೇ ಪ್ರಸಿದ್ಧಿ ಪಡೆದಿದ್ದರು. ಸಿನಿಮಾ ಮತ್ತು ರಂಗಭೂಮಿಯಲ್ಲಿ ಸುದೀರ್ಘ ಪಯಣ ಮಾಡಿದ್ದಾರೆ. ‘ಸಂಸಾರದಲ್ಲಿ ಸರಿಗಮ’ ಹೆಸರಿನ ನಾಟಕ ಆ ಕಾಲದಲ್ಲಿ ಬಹಳ ಜನಪ್ರಿಯತೆ ಗಳಿಸಿದ್ದರಿಂದ ಸರಿಗಮ ವಿಜಿ ಎಂಬ ಹೆಸರು ಬಂತು. ವಿಜಿ ಅವರು ಹಾಸ್ಯ ನಟ ಮಾತ್ರವಲ್ಲದೆ, ಬರಹಗಾರ ಕೂಡ ಆಗಿದ್ದರು.

ಕನ್ನಡ ಸಿನಿಮಾ ಬೆಳುವಲದ ಮಡಿಲಲ್ಲಿ (1975) ಮೂಲಕ ವಿಜಿ ಅವರು ಸ್ಯಾಂಡಲ್​​ವುಡ್​ ಪ್ರವೇಶಿಸಿದರು. ವಿಜಿ ಅವರು ಸುಮಾರು 269 ಚಿತ್ರಗಳಲ್ಲಿ ನಟಿಸಿದ್ದಾರೆ. ಅಲ್ಲದೆ, ಸುಮಾರು 80 ಚಿತ್ರಗಳಲ್ಲಿ ಸಹಾಯಕ ನಿರ್ದೇಶಕರಾಗಿಯೂ ಕೆಲಸ ಮಾಡಿದ್ದಾರೆ. ಮದುವೆ ಮಡಿ ನೋಡು, ಕಪ್ಪು ಕೋಲ, ಭೀಮಾ, ಪ್ರತಾಪ್, ಮನ ಮೆಚ್ಚಿದ ಸೊಸೆ, ಕೆಂಪಯ್ಯ ಐಪಿಎಸ್​, ಚಿನ್ನದ ಪದಕ, ಜಗತ್ ಕಿಲಾಡಿ, ಯಮಲೋಕದಲ್ಲಿ ವೀರಪ್ಪನ್, ದುರ್ಗಿ ಹಾಗೂ ಸ್ವಾರ್ಥರತ್ನ ಮುಂತಾದ ಸಿನಿಮಾಗಳಲ್ಲಿ ವಿಜಿ ಅವರು ನಟಿಸಿದ್ದಾರೆ.

ಸಿನಿಮಾ ಮಾತ್ರವಲ್ಲದೆ, ಹಲವು ಟಿವಿ ಧಾರಾವಾಹಿಗಳಲ್ಲಿಯೂ ಸರಿಗಮ ವಿಜಿ ಅವರು ನಟನೆ ಮಾಡಿದ್ದರು. ಅಲ್ಲದೆ, ಕೆಲ ಧಾರಾವಾಹಿಗಳನ್ನು ಅವರೇ ನಿರ್ದೇಶಿಸಿದ್ದರು. ಬಹುಮುಖ ಪ್ರತಿಭೆಯನ್ನು ಕಳೆದುಕೊಂಡ ಕನ್ನಡ ಚಿತ್ರರಂಗ ಶೋಕ ಸಾಗರದಲ್ಲಿ ಮುಳುಗಿದೆ. ಚಿತ್ರರಂಗದ ಗಣ್ಯರು ವಿಜಿ ಅವರ ಸಾವಿಗೆ ಸಂತಾಪ ಸೂಚಿಸುತ್ತಿದ್ದಾರೆ.

ಈ ಸಮಯದಲ್ಲಿ ಯಾವುದೇ ಕಾರಣಕ್ಕೂ ರೀಲ್ಸ್​ ನೋಡ್ಬೇಡಿ… ಗಂಭೀರ ಕಾಯಿಲೆ ಬರುತ್ತೆ ಎಚ್ಚರ! Reels

Share This Article

ಬಿಳಿ vs ಕೆಂಪು, ಸಣ್ಣ ಅಥವಾ ದಪ್ಪ ಈರುಳ್ಳಿಯಲ್ಲಿ ಆರೋಗ್ಯಕ್ಕೆ ಯಾವುದು ಉತ್ತಮ? ಇಲ್ಲಿದೆ ಉಪಯುಕ್ತ ಮಾಹಿತಿ… White and Red Onion

White and Red Onion : ಆಹಾರದಲ್ಲಿ ಪ್ರಧಾನ ವಸ್ತುವಾದ ಈರುಳ್ಳಿ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು…

ಚುಮು ಚುಮು ಚಳಿಗೆ ಮನೆಯಲ್ಲೇ ಮಾಡಿ Ragi ಪಕೋಡ; ನಾಲಿಗೆಗೂ ರುಚಿಕರ ಆರೋಗ್ಯಕ್ಕೂ ಒಳ್ಳೆಯದು

ಬೆಂಗಳೂರು: ಪ್ರಸ್ತುತ ಜೀವನಶೈಲಿಯನ್ನು ನೋಡುವುದಾದರೆ ಜನರು ತಾವು ಸೇವಿಸುವ ಆಹಾರದಿಂದಲೇ ಅನಾರೋಗ್ಯಕ್ಕೀಡಾಗುತ್ತಿರುವುದು ನಿಜಕ್ಕೂ ಕಳವಳಕಾರಿಯಾಗಿದೆ. ಇಂತಹ…

valentines day: ಪ್ರೇಮಿಗಳ ದಿನದಂದು ನಿಮ್ಮ ಮುಖ ಲಕ-ಲಕ ಹೊಳೆಯಲು ಒಮ್ಮೆ ಟ್ರೈ ಮಾಡಿ..

valentines day : ಪ್ರೇಮಿಗಳ ದಿನದಂದು, ಬಹುತೇಕ ಎಲ್ಲಾ ಹುಡುಗಿಯರು ತಮ್ಮ ಸಂಗಾತಿಯ ಮುಂದೆ ಅತ್ಯಂತ…