ಸಚಿವ ಸಂಪುಟ ವಿಸ್ತರಣೆಯೋ ಪುನಾರಚನೆಯೋ?: ಕುತೂಹಲ ಕೆರಳಿಸಿದೆ ಸಿಎಂ ಬಿಎಸ್​ವೈ ದೆಹಲಿ ಭೇಟಿ

BSy 4
Published on

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನಾಳೆ ದೆಹಲಿಗೆ ತೆರಳಲಿದ್ದು, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರನ್ನು ಭೇಟಿ ಮಾಡಲಿದ್ದಾರೆ.ಈ ವಿಚಾರ ಈಗ ಸಚಿವ ಸಂಪುಟ ಕುರಿತ ಚರ್ಚೆಗೆ ಇನ್ನಷ್ಟು ಗ್ರಾಸ ಒದಗಿಸಿದೆ. ಸಚಿವ ಸಂಪುಟ ವಿಸ್ತರಣೆಯಾಗುವುದೋ ಇಲ್ಲಾ ಪುನಾರಚನೆಯೇ ಆಗಲಿದೆಯೋ ಎಂಬ ಮಾತು ಕೇಳತೊಡಗಿದೆ.

ಬಿಎಸ್​ವೈ ಅವರು ನಡ್ಡಾ ಅವರೊಂದಿಗೆ ಸಚಿವ ಸಂಪುಟದ ಖಾತೆ ಹಂಚಿಕೆ ವಿಚಾರ ಚರ್ಚಿಸಲಿದ್ದಾರೆ. ಸಚಿವ ಸಂಪುಟ ವಿಸ್ತರಣೆಯಾದಲ್ಲಿ, ಯಾರನ್ನು ಸೇರಿಸಬೇಕು, ಯಾರನ್ನು ಕೈಬಿಡಬೇಕು ಎಂಬ ಬಗ್ಗೆ ಚರ್ಚೆಯಾಗಲಿದೆ. ಪುನಾರಚನೆಯೇ ಆದರೆ, ಹೊಸ ಸಚಿವ ಸಂಪುಟದಲ್ಲಿ ಯಾರ್ಯಾರು ಇರುತ್ತಾರೆ. ಯಾರು ಇರಲ್ಲ ಎಂಬುದು ಗಮನಾರ್ಹವಾಗುತ್ತದೆ. ಏನಿದ್ದರೂ, ನಾಳೆ ದೆಹಲಿಯಲ್ಲಿಯೇ ರಾಜ್ಯ ಸಚಿವ ಸಂಪುಟ ಕುರಿತ ನಿರ್ಧಾರ ಅಂತಿಮಗೊಳ್ಳಲಿದೆ ಎಂದು ಮೂಲಗಳು ತಿಳಿಸಿವೆ.

ಸಚಿವ ಸಂಪುಟ ವಿಸ್ತರಣೆ ಕುರಿತ ಸುದ್ದಿಗಳು ಉಪಚುನಾವಣೆಗೂ ಮೊದಲೇ ಆರಂಭವಾಗಿತ್ತು. ಚುನಾವಣೆಗೂ ಮೊದಲೇ ಅವರು ದೆಹಲಿಗೆ ಹೋಗಿ ಸಚಿವ ಸಂಪುಟ ವಿಸ್ತರಣೆ ವಿಚಾರ ಮಾತನಾಡಲಿದ್ದಾರೆ ಎಂಬ ಸುದ್ದಿಯೂ ಬಂದಿತ್ತು. ಆದರೆ, ಅದ್ಯಾವುದೂ ನಡೆಯಲಿಲ್ಲ. ಈಗ ಬಿಎಸ್​ವೈ ಅವರು ನಾಳೆ ದೆಹಲಿಗೆ ತೆರಳುತ್ತಿರುವುದು ಆಕಾಂಕ್ಷಿಗಳಲ್ಲಿ ಹೊಸ ಆಸೆ ಚಿಗುರುವಂತೆ ಮಾಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net