More

    ಬ್ರಿಕ್ಸ್ ಶೃಂಗ 2020- ಪಾಕ್​ಗೆ ಪರೋಕ್ಷ ಎಚ್ಚರಿಕೆ ಸಂದೇಶ ರವಾನಿಸಿದ ಪ್ರಧಾನಿ ಮೋದಿ

    ನವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಇಂದು ಬ್ರಿಕ್ಸ್ ಶೃಂಗ 2020ರಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಭಾಗವಹಿಸಿದ್ದು,ಪಾಕಿಸ್ತಾನಕ್ಕೆ ಪರೋಕ್ಷ ಎಚ್ಚರಿಕೆ ಸಂದೇಶ ರವಾನಿಸಿದ್ಧಾರೆ. ಅಲ್ಲದೆ, ವಿಶ್ವಸಂಸ್ಥೆಯ ಭದ್ರತಾ ಸಮಿತಿಯಲ್ಲಿ ಸುಧಾರಣೆಗಳಾಗಬೇಕಾಗಿದೆ ಎಂದು ಪ್ರತಿಪಾದಿಸಿದ್ದಾರೆ.ವರ್ಚುವಲ್ ಶೃಂಗದಲ್ಲಿ ಬ್ರೆಜಿಲ್​, ರಷ್ಯಾ, ಚೀನಾ ಮತ್ತು ದಕ್ಷಿಣಾಆಫ್ರಿಕಾದ ನಾಯಕರು ಭಾಗಿಯಾಗಿದ್ದಾರೆ.

    ಭಯೋತ್ಪಾದನೆಯು ಜಗತ್ತು ಎದುರಿಸುತ್ತಿರುವ ಬಹುದೊಡ್ಡ ಸವಾಲು.ಉಗ್ರ ಸಂಘಟನೆಗಳನ್ನು ಬೆಂಬಲಿಸುವ ಅವುಗಳಿಗೆ ನೆರವು ಒದಗಿಸುವ ರಾಷ್ಟ್ರಗಳನ್ನು ಹೊಣೆಗಾರರನ್ನಾಗಿಸುವ ಅವಶ್ಯಕತೆ ಇದೆ.ಉಗ್ರರನ್ನು ನಾವು ಯಾವ ರೀತಿ ನೋಡುತ್ತೇವೆಯೋ ಅದೇ ರೀತಿ ಇಂತಹ ರಾಷ್ಟ್ರಗಳನ್ನು ನೋಡಬೇಕು. ಇದಕ್ಕೆ ಬ್ರಿಕ್ಸ್ ರಾಷ್ಟ್ರಗಳು ಒಂದಾಗಿ ಕೆಲಸ ಮಾಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಪರೋಕ್ಷವಾಗಿ ಪಾಕಿಸ್ಥಾನಕ್ಕೆ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.

    ಇದನ್ನೂ ಓದಿ: ಸೋನಿಯಾ ಜಿ, ರಾಹುಲ್​ ಜೀ.. ನೀವು ಗುಪ್ಕರ್ ಗ್ಯಾಂಗ್​ ನ ಬೆನ್ನಿಗಿದ್ದೀರಾ? – ಕೇಂದ್ರ ಗೃಹ ಸಚಿವ ಅಮಿತ್ ಷಾ ಪ್ರಶ್ನೆ

    ಈ ಸಲದ ಬ್ರಿಕ್ಸ್ ಶೃಂಘ ವರ್ಚುವಲ್ ರೂಪದಲ್ಲಿ ನಡೆಯುತ್ತಿದ್ದು, ರಷ್ಯಾ ಆತಿಥೇಯ ರಾಷ್ಟ್ರವಾಗಿದೆ. ಗ್ಲೋಬಲ್ ಸ್ಟೆಬಿಲಿಟಿ, ಶೇರ್ಡ್ ಸೆಕ್ಯೂರಿಟಿ ಆ್ಯಂಡ್ ಇನ್ನೋವೇಟಿವ್ ಗ್ರೋತ್ ಎಂಬುದು ಈ ಸಲದ ಥೀಮ್ ಎಂದು ವಿದೇಶಾಂಗ ಸಚಿವಾಲಯ ದೃಢೀಕರಿಸಿದೆ. ವಿಶ್ವಸಂಸ್ಥೆಯ 75ನೇ ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ ಬ್ರಿಕ್ಸ್​ನ 12ನೇ ಶೃಂಗ ನಡೆಯುತ್ತಿದೆ. ಕೋವಿಡ್ 19 ಸ್ಥಿತಿಗತಿ, ಲಸಿಕೆ ಅಭಿವೃದ್ಧಿ ಮುಂತಾದ ವಿಚಾರಗಳೂ ಈ ಶೃಂಗದಲ್ಲಿ ಚರ್ಚೆಯಾಗಲಿದೆ ಎಂದು ಮೂಲಗಳು ತಿಳಿಸಿವೆ. (ಏಜೆನ್ಸೀಸ್)

    ಬೈತೂಲ್​ನಲ್ಲಿ ನದಿಗೆ ಉರುಳಿದ ಟ್ರಕ್ – ಆರು ಸಾವು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts