More

    ಇಂದು ಸಚಿವರ ಜತೆ ಸಿಎಂ ಮಹತ್ವದ ಸಭೆ; ಸಂಪುಟ ವಿಸ್ತರಣೆಗೂ ಮುನ್ನುಡಿ

    ಬೆಂಗಳೂರು: ಮಳೆಗಾಲದ ಅಧಿವೇಶನದಲ್ಲಿ ಸರ್ಕಾರದ ಚಳಿ ಬಿಡಿಸಲು ಹತ್ತಾರು ಅಸ್ತ್ರಗಳೊಂದಿಗೆ ಪ್ರತಿಪಕ್ಷ ಸರ್ವಸನ್ನದ್ಧ ಅಗಿರುವಾಗಲೇ, ಅದನ್ನೆದುರಿಸಲು ಸರ್ಕಾರದ ಕಡೆಯಿಂದಲೂ ಪ್ರಯತ್ನ ಆರಂಭವಾಗಿದೆ. ಸೋಮವಾರ ಸಂಜೆ ಸಿಎಂ ಬಿ.ಎಸ್. ಯಡಿಯೂರಪ್ಪ ಸಂಪುಟ ಸಹೋದ್ಯೋಗಿಗಳ ವಿಶೇಷ ಸಭೆ ಕರೆದಿದ್ದಾರೆ. ಅಲ್ಲಿ ಮುಂದೆ ಸರ್ಕಾರ ಎದುರಿಸುವ ಸವಾಲುಗಳ ಬಗ್ಗೆ ಮನವರಿಕೆ ಮಾಡಿಕೊಡುವ ಜತೆಗೆ ಸಂಪುಟ ಸಹೋದ್ಯೋಗಿಗಳಲ್ಲಿನ ಸಣ್ಣ-ಪುಟ್ಟ ಬೇಸರ ತಣಿಸಿ ಮೂಲಕ ವಿಶ್ವಾಸಕ್ಕೆ ತೆಗೆದುಕೊಳ್ಳ ಬಯಸಿದ್ದಾರೆ.

    ಸೆ.21ರಂದು ವಿಧಾನಮಂಡಲ ಅಧಿವೇಶನ ಆರಂಭ ಆಗುತ್ತಿದ್ದು, ಮಹತ್ವದ ಸುಗ್ರಿವಾಜ್ಞೆಗಳಿಗೆ ಸರ್ಕಾರ ಒಪ್ಪಿಗೆ ಪಡೆಯಬೇಕಿದೆ. ಆದರೆ ಆರೋಗ್ಯ ಇಲಾಖೆಯಿಂದ ನಡೆದ ಖರೀದಿ, ಡಿಜೆ ಹಳ್ಳಿ ಪ್ರಕರಣ, ಜಿಎಸ್​ಟಿ ಕೊರತೆ, ಭೂಸುಧಾರಣೆ ಕಾಯ್ದೆ ಸೇರಿ ಹತ್ತಾರು ವಿಷಯಗಳನ್ನು ಮುಂದಿಟ್ಟು ಸರ್ಕಾರವನ್ನು ಹಣಿಯಲು ಪ್ರತಿಪಕ್ಷ ಒಂದು ವಾರದಿಂದ ಪೂರ್ವತಯಾರಿ ನಡೆಸಿದೆ. ಕರೊನಾ ವಿಚಾರದಲ್ಲಿನ ಗೊಂದಲಕಾರಿ ನಿರ್ಣಯಗಳನ್ನೇ ಮುಂದಿಟ್ಟುಕೊಂಡು ತನಿಖೆಗೆ ವಹಿಸಲು ಸರ್ಕಾರದ ಮೇಲೆ ಒತ್ತಡ ಹೇರಲು ಕಾಂಗ್ರೆಸ್ ತೀರ್ವನಿಸಿದೆ. ಹೀಗಾಗಿ ಸಂಪುಟ ಸದಸ್ಯರು ಪ್ರತಿಪಕ್ಷವನ್ನು ಎದುರಿಸಲು ಪೂರ್ವತಯಾರಿ ಮಾಡಿಕೊಂಡು ಬರುವುದು, ಸಂಘಟಿತವಾಗಿ ಪ್ರತಿಪಕ್ಷಗಳ ಆರೋಪ-ಟೀಕೆಗೆ ಆಸ್ಪದ ನೀಡದೆ ಸತ್ಯಾಂಶ ತಿಳಿಸುವ ಪ್ರಯತ್ನದ ಸಂಬಂಧ ಬಿಎಸ್​ವೈ ಮಾರ್ಗದರ್ಶನ ಮಾಡಲಿದ್ದಾರೆ ಎನ್ನಲಾಗಿದೆ.

    ಸಂಪುಟ ವಿಸ್ತರಣೆಗೆ ಮುನ್ನುಡಿ:  ಸಂಪುಟ ವಿಸ್ತರಣೆ ವಿಚಾರದಲ್ಲಿ ಉಂಟಾಗಬಹುದಾದ ಏರುಪೇರುಗಳನ್ನು ನಿಭಾಯಿಸಲು ವಿವಿಧ ಸಚಿವರಿಗೆ ಮುಂಜಾಗ್ರತೆಯಾಗಿ ಜವಾಬ್ದಾರಿ ನೀಡುವ ಸಾಧ್ಯತೆ ಇದೆ. ಲಭ್ಯ ಸಚಿವ ಸ್ಥಾನಗಳಿಗೆ ದುಪ್ಪಟ್ಟು ಆಕಾಂಕ್ಷಿಗಳಿದ್ದಾರೆ, ಅವರೆಲ್ಲರಿಗೂ ಅವಕಾಶ ಅಸಾಧ್ಯ. ಹೀಗಾಗಿ ಸರ್ಕಾರದ ಇಮೇಜ್​ಗೆ ಡ್ಯಾಮೇಜ್ ಆಗದಂತೆ ಆಕಾಂಕ್ಷಿಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ಸಿಎಂ ಸಚಿವರಿಗೆ ಸೂಚಿಸಲಿದ್ದಾರೆ.

    ಶೇ.7.5 ಮೀಸಲಿಗಾಗಿ ರಾಜೀನಾಮೆಗೆ ನಿರ್ಧರಿಸಿದ ವಾಲ್ಮೀಕಿ ಸಮುದಾಯದ ಶಾಸಕರು; 21ಕ್ಕೆ ಸಿಎಂ ಭೇಟಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts