More

    ಸಂಪುಟ ವಿಸ್ತರಣೆಗೆ ತೀವ್ರ ಲಾಬಿ; 18ಕ್ಕೆ ಸಿಎಂ ಭೇಟಿ ಸಾಧ್ಯತೆ

    ಬೆಂಗಳೂರು: ವಿಧಾನಮಂಡಲದ ಮಳೆಗಾಲ ಅಧಿವೇಶನಕ್ಕೆ ಮುನ್ನವೇ ಸಚಿವ ಸಂಪುಟ ವಿಸ್ತರಣೆಗೆ ಆಕಾಂಕ್ಷಿಗಳು ಪಟ್ಟು ಹಿಡಿದಿದ್ದು, ಸಿಎಂ ಬಿ.ಎಸ್.ಯಡಿಯೂರಪ್ಪ ಹಾಗೂ ಪಕ್ಷದ ರಾಜ್ಯ ನಾಯಕರ ಮೇಲೆ ಒತ್ತಡ ಹೆಚ್ಚಿಸಿದ್ದಾರೆ.

    ಕೊಟ್ಟ ಮಾತು ಉಳಿಸಿಕೊಳ್ಳಲು ಸಿಎಂ ತುದಿಗಾಲ ಮೇಲೆ ನಿಂತಿದ್ದಾರೆ. ವರಿಷ್ಠರಿಂದ ಒಪ್ಪಿಗೆ ಸಿಕ್ಕಿಲ್ಲ. ಕನಿಷ್ಟ ಭೇಟಿಗೆ ಕಾಲಾವಕಾಶ ನೀಡುತ್ತಿಲ್ಲವೆಂದು ಅತೃಪ್ತರು ಚಡಪಡಿಸುತ್ತಿದ್ದಾರೆ. ಇದೇ ಕಾರಣಕ್ಕೆ ಸೆ.21ರಿಂದ ಶುರುವಾಗಲಿರುವ ಅಧಿವೇಶನವನ್ನು ದಾಳವಾಗಿ ಬಳಸಿಕೊಳ್ಳಲು ಸಜ್ಜಾಗಿದ್ದಾರೆ. ಹೈದರಾಬಾದ್ ಸಂಸ್ಥಾನ ವಿಮೋಚನಾ ದಿನಾಚರಣೆಯಲ್ಲಿ ಪಾಲ್ಗೊಳ್ಳಲು ಸೆ.17ರಂದು ಸಿಎಂ ಕಲಬುರಗಿಗೆ ತೆರಳಲಿದ್ದಾರೆ. ಸಾಧ್ಯವಾದರೆ ಅದೇ ದಿನ ಇಲ್ಲವೆ ಸೆ.18ಕ್ಕೆ ದೆಹಲಿಗೆ ಪ್ರಯಾಣ ಬೆಳೆಸಲಿದ್ದು, ಜೆಪಿ ನಡ್ಡಾ ಅವರನ್ನು ಭೇಟಿ ಮಾಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

    ಕಳೆದ ಬಾರಿ ವಿಸ್ತರಣೆ ಕಾಲಕ್ಕೆ ವರಿಷ್ಠರ ಸೂಚನೆಯಂತೆ ಕೊನೇ ಕ್ಷಣದಲ್ಲಿ ಪಕ್ಷ ಮೂಲದವರನ್ನು ಕೈ ಬಿಡಲಾಗಿತ್ತು. ಪ್ರದೇಶ, ಜಿಲ್ಲೆ ಮುಂತಾದ ವಿಷಯದಲ್ಲಿ ಪ್ರಾತಿನಿಧ್ಯದ ಸಮತೋಲನ ಕಾಪಾಡಲು ಈ ಕ್ರಮವೆಂದು ಸಮರ್ಥಿಸಿಕೊಂಡಾಗಿದೆ. ಇದಾಗಿ 8 ತಿಂಗಳು ಕಳೆದರೂ ಚಾತಕ ಪಕ್ಷಿಯಂತೆ ಕಾಯುವುದು ತಪ್ಪಿಲ್ಲ. ಪಕ್ಷ ನಿಷ್ಠೆ, ಸೇವಾ ಹಿರಿತನಕ್ಕೆ ಬೆಲೆಯಿಲ್ಲದಂತಾಗಿದೆ ಎಂದು ಪಕ್ಷ ಮೂಲದ ಕೆಲವು ಹಿರಿಯ ಶಾಸಕರು ಆಪ್ತರ ಬಳಿ ಅಸಮಾಧಾನ ತೋಡಿಕೊಂಡಿದ್ದಾರೆ. ಇದನ್ನೂ ಓದಿ: 560 ಬಡ ಮಕ್ಕಳಿಗೆ ನೆರವಾದ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್

    ತೆರೆಮರೆ ಲಾಬಿ: ಪಕ್ಷದ ಶಿಸ್ತಿಗೆ ಕಟಿಬದ್ಧವಾಗಿ ಅತೃಪ್ತಿ ಬಹಿರಂಗಪಡಿಸಿಲ್ಲ. ಇನ್ನು ಕಾಯಲು ತಯಾರಿಲ್ಲವೆಂಬ ಎಚ್ಚರಿಕೆ ನೀಡುವುದಕ್ಕೆ ಅಧಿವೇಶನದ ದಿನಗಳೇ ಪ್ರಶಸ್ತವೆಂದು ಪರಿಗಣಿಸಿದ್ದಾರೆ. ಆಂತರಿಕ ಒತ್ತಡ ತಂತ್ರಗಳು ರೂಪುಗೊಂಡ ಸುಳಿವು ಅರಿತ ಆಕಾಂಕ್ಷಿಗಳು ಸಚಿವಗಿರಿಗಾಗಿ ತೆರೆಮರೆ ಲಾಬಿ ಮತ್ತೆ ಚುರುಕುಗೊಳಿಸಿದ್ದಾರೆ. ನಿಗಮ-ಮಂಡಳಿಗಳಿಗೆ ಹಲವು ಶಾಸಕರನ್ನು ನೇಮಿಸಿದ ನಂತರವೂ ಆಕಾಂಕ್ಷಿಗಳ ಸಂಖ್ಯೆಯೇನೂ ತಗ್ಗಿಲ್ಲ. ಖಾಲಿಯಿರುವ 6 ಸ್ಥಾನಗಳಲ್ಲಿ ತಲಾ 2ರಂತೆ ಮೂಲ ಹಾಗೂ ವಲಸಿಗರು ಕೊಟ್ಟು, ಉಳಿದ 2 ಹಾಗೆಯೇ ಉಳಿಸಿಕೊಳ್ಳುವುದು ಸಿಎಂ, ವರಿಷ್ಠರ ಚಿಂತನೆಯಾಗಿದೆ. ವಲಸಿಗರ ಪೈಕಿ ಎಂ.ಟಿ.ಬಿ.ನಾಗರಾಜ್, ಆರ್.ಶಂಕರ್​ಗೆ ಖಚಿತ ಭರವಸೆ ದೊರೆತಿದೆ. ಮತ್ತೊಬ್ಬ ವಲಸಿಗ ಎಚ್.ವಿಶ್ವನಾಥ್ ಸಚಿವರಾಗುವ ವಿಶ್ವಾಸದಲ್ಲಿದ್ದಾರೆ. ದೆಹಲಿಮಟ್ಟದಲ್ಲಿ ಸಿ.ಪಿ.ಯೋಗೇಶ್ವರ್ ಲಾಬಿ ನಡೆಸಿರುವುದು ಪಕ್ಷ ಮೂಲದ ಹಿರಿಯರ ಕೆಂಗಣ್ಣಿಗೆ ಗುರಿಯಾಗಿದೆ.

    ಪಕ್ಷ ಮೂಲದವರ ಪೈಕಿ ಅರವಿಂದ ಲಿಂಬಾವಳಿ, ಉಮೇಶ್ ಕತ್ತಿ, ಹಾಲಪ್ಪ ಆಚಾರ್ ಹೆಸರು ಮುಂಚೂಣಿ ಯಲ್ಲಿವೆ. ಇವರೊಂದಿಗೆ ಮುರುಗೇಶ ನಿರಾಣಿ, ರಾಜೂಗೌಡ, ಜಿ.ಎಚ್.ತಿಪ್ಪಾರೆಡ್ಡಿ, ಕೆ. ಪೂರ್ಣಿಮಾ, ಹಾಲಾಡಿ ಶ್ರೀನಿವಾಸಶೆಟ್ಟಿ, ವಿ.ಸುನಿಲ್ ಕುಮಾರ್ ಹೀಗೆ ಪ್ರಬಲ ಆಕಾಂಕ್ಷಿಗಳ ದೊಡ್ಡ ಪಟ್ಟಿಯೇ ಇದೆ. ಇದನ್ನೂ ಓದಿ: ಸಂಸತ್​ ಅಧಿವೇಶನಕ್ಕೆ ಬರುವ ಮಾಧ್ಯಮದವರು ಮೊಬೈಲ್​​ನಲ್ಲಿ ಬೈಟ್​ ಪಡೆಯುವ ಹಾಗಿಲ್ಲ…!

    ಪರೋಕ್ಷ ಸಂದೇಶ

    ರಾಜಕೀಯ, ಕರೊನಾದಿಂದಾಗಿ ಸಂಪುಟ ವಿಸ್ತರಣೆ ಮುಂದಕ್ಕೆ ಹೋಗುತ್ತಲೇ ಇದೆ. ಯಾರನ್ನಾದರೂ ಸಚಿವರನ್ನಾಗಿ ಮಾಡಿ, ಆದರೆ ವರಿಷ್ಠರನ್ನು ಒಪ್ಪಿಸಿ ಬಾಕಿಯಿರುವ ಸ್ಥಾನಗಳನ್ನು ತುಂಬಿರಿ. ಇನ್ನಷ್ಟು ಕಾಯಿಸುವುದು ಸರ್ಕಾರ ಮತ್ತು ಪಕ್ಷದ ಹಿತಕ್ಕೆ ಮಾರಕವೆಂಬ ಪರೋಕ್ಷ ಸಂದೇಶವನ್ನು ಹೈಕಮಾಂಡ್​ಗೆ ರವಾನಿಸಿದ್ದಾರೆ.

    ಡ್ರಗ್ಸ್ ಜಾಲದ ತನಿಖೆ ಬಗ್ಗೆ ಅಚ್ಚರಿಯ ಹೇಳಿಕೆ ನೀಡಿದ ಗೃಹ ಸಚಿವ; ಮಹತ್ವದ ತಿರುವು…!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts