More

    ಸಂಸತ್​ ಅಧಿವೇಶನಕ್ಕೆ ಬರುವ ಮಾಧ್ಯಮದವರು ಮೊಬೈಲ್​​ನಲ್ಲಿ ಬೈಟ್​ ಪಡೆಯುವ ಹಾಗಿಲ್ಲ…!

    ನವದೆಹಲಿ: ಕರೊನಾ ವೈರಸ್​ ಭಯದ ನಡುವೆಯೂ ನಾಳೆಯಿಂದ ಸಂಸತ್​ ಅಧಿವೇಶನ ಪ್ರಾರಂಭವಾಗಲಿದೆ. ಕರೊನಾ ಮುನ್ನೆಚ್ಚರಿಕೆಯಾಗಿ ಹಲವು ಕಟ್ಟುನಿಟ್ಟಿನ ಕ್ರಮಗಳನ್ನೂ ಕೈಗೊಳ್ಳಲಾಗಿದೆ. ಅದರ ಒಂದು ಭಾಗವಾಗಿ ಮಾಧ್ಯಮದವರು ಸಂಸದರು, ಸಚಿವರ ಬೈಟ್​​ (ಹೇಳಿಕೆ)ಗಳನ್ನು ಮೊಬೈಲ್​ಗಳ ಮೂಲಕ ತೆಗೆದುಕೊಳ್ಳುವುದನ್ನು ನಿಷೇಧಿಸಲಾಗಿದೆ.

    ಸಂಸತ್​ ಭವನದ ಸಂಕೀರ್ಣದ ಒಳಗೆ ಯಾವುದೇ ಮಾಧ್ಯಮದವರು ನೇರ ಪ್ರಸಾರಕ್ಕಾಗಿ ಸಚಿವರು, ಸಂಸದರ ಹೇಳಿಕೆಗಳನ್ನು ಮೊಬೈಲ್​ಗಳ ಮೂಲಕ ತೆಗೆದುಕೊಳ್ಳಬಾರದು ಎಂದು ಲೋಕಸಭಾ ಸಚಿವಾಲಯ ತಿಳಿಸಿದೆ. ಮಾಧ್ಯಮಗಳಿಗೂ ಈ ಬಗ್ಗೆ ಹೇಳಲಾಗಿದೆ. ಸಂಕೀರ್ಣದ ಒಳಗೆ ಮೊಬೈಲ್​ ಮೂಲಕ ಬೈಟ್​ ತೆಗೆದುಕೊಳ್ಳುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ. ಹಾಗೇ ಮೊಬೈಲ್​ ಕ್ಯಾಮರಾ ಮೂಲಕವೇ ಕೆಲವರು ಲೈವ್​ ಕೊಡುತ್ತಾರೆ. ಈ ಬಾರಿ ಅದಕ್ಕೂ ಅವಕಾಶ ಇಲ್ಲ ಎಂದು ಇಂದು ಹೊರಡಿಸಿದ ಆದೇಶದಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ಹಾಗೇ ಮಾಧ್ಯಮ ಸಿಬ್ಬಂದಿ ಸಾಮಾಜಿಕ ಅಂತರ ನಿಯಮ ಪಾಲನೆ ಮಾಡಬೇಕು ಎಂದೂ ಹೇಳಲಾಗಿದೆ.

    ಸೋಮವಾರ (ನಾಳೆ) ಬೆಳಗ್ಗೆ 9 ಗಂಟೆಯಿಂದ ಸಂಸತ್​ ಅಧಿವೇಶನ ಪ್ರಾರಂಭವಾಗಲಿದೆ. (ಏಜೆನ್ಸೀಸ್​)

    ಗಾಲ್ವಾನ್​ ಸಂಘರ್ಷದಲ್ಲಿ ಹತ್ಯೆಯಾದ ಚೀನಾ ಯೋಧರ ಸಂಖ್ಯೆ 60ಕ್ಕೂ ಹೆಚ್ಚು; ಅಮೆರಿಕ ಮೂಲದಿಂದ ಸತ್ಯ ಬಯಲು…!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts