ಕೆಪಿಎಸ್​ಸಿ ಪರೀಕ್ಷೆ ಮುಂದೂಡಲು ಸಿಎಂ ಸೂಚನೆ

Kpsc vvani
Published on

ಬೆಂಗಳೂರು: ಕೆಪಿಎಸ್​ಸಿ ಪರೀಕ್ಷೆಗಳನ್ನು ಒಂದು ತಿಂಗಳ ಕಾಲ ಮುಂದೂಡುವಂತೆ ಮುಖ್ಯಮಂತ್ರಿ ಬಿ.ಎಸ್​. ಯಡಿಯೂರಪ್ಪ ಸೂಚಿಸಿದ್ದಾರೆ.

ಕೇಂದ್ರ ಲೋಕಸೇವಾ ಆಯೋಗ(ಯುಪಿಎಸ್‌ಸಿ) ನಾಗರಿಕ ಸೇವೆಗಳ ಮುಖ್ಯಪರೀಕ್ಷೆ ಮತ್ತು ಕರ್ನಾಟಕ ಲೋಕಸೇವಾ ಆಯೋಗ(ಕೆಪಿಎಸ್‌ಸಿ) ಮುಖ್ಯ ಪರೀಕ್ಷೆಯನ್ನು ಈ ಬಾರಿ ಒಟ್ಟೊಟ್ಟಿಗೆ ಎದುರಿಸಬೇಕಾದ ಸನ್ನಿವೇಶ ಅಭ್ಯರ್ಥಿಗಳಿಗೆ ಎದುರಾಗಿತ್ತು. ಈ ಎರಡೂ ಪರೀಕ್ಷೆ ನಡುವೆ ಹೆಚ್ಚಿನ ಅಂತರ ಇಲ್ಲದಿದ್ದ ಕಾರಣ ಎರಡೂ ಪರೀಕ್ಷೆಗಳಿಗೆ ಸಿದ್ಧರಾಗಿದ್ದ ಅಭ್ಯರ್ಥಿಗಳಲ್ಲಿ ಆತಂಕ ಶುರುವಾಗಿತ್ತು.

ಯುಪಿಎಸ್‌ಸಿ ಪರೀಕ್ಷೆಗಳು ಜ.8ರಿಂದ 10 ಹಾಗೂ 16, 17ರಂದು ನಡೆಯಲಿವೆ. ಇನ್ನು ಕೆಪಿಎಸ್‌ಸಿ ‘ಎ’ ವೃಂದದ ಮುಖ್ಯ ಪರೀಕ್ಷೆಗಳು ಡಿ.21ರಿಂದ 24 ಹಾಗೂ ‘ಎ’ ಮತ್ತು ‘ಬಿ’ ವೃಂದದ ಮುಖ್ಯ ಪರೀಕ್ಷೆ ಜ.2ರಿಂದ 5ರವರೆಗೆ ನಡೆಯವುದಾಗಿ ಟೈಂ ಟೇಬಲ್​ ಪ್ರಕಟವಾಗಿತ್ತು. ಎರಡೂ ಪರೀಕ್ಷೆಗಳ ಅಂತರ ಕಡಿಮೆ ಇರುವುದರಿಂದ ಪೂರ್ವ ಸಿದ್ಧತೆ ನಡೆಸಲು ಕಷ್ಟವಾಗಲಿದೆ ಎಂದು ಆತಂಕಗೊಂಡಿದ್ದ ಅಭ್ಯರ್ಥಿಗಳು, ಕೆಪಿಎಸ್​ಸಿ ಪರೀಕ್ಷೆಯನ್ನು ಮುಂದೂಡುವಂತೆ ಆಗ್ರಹಿಸಿದ್ದರು.

ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಕೆಪಿಎಸ್​ಸಿ ಪರೀಕ್ಷೆಗಳನ್ನು ಒಂದು ತಿಂಗಳ ಅವಧಿಗೆ ಮಂದೂಡಬೇಕೆಂದು ಆಯೋಗಕ್ಕೆ ಸಿಎಂ ಸೂಚಿಸಿದ್ದಾರೆ. ಶ್ರೀಘ್ರದಲ್ಲೇ ಆಯೋಗ ಅಧಿಕೃತ ಆದೇಶ ಹೊರಡಿಸಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net