ರಾಜ್ಯಸಭೆಗೆ ಬಿಜೆಪಿ ಅಭ್ಯರ್ಥಿ ಫೈನಲ್​

narayan
Published on

ಬೆಂಗಳೂರು: ಅಶೋಕ್​ ಗಸ್ತಿ ನಿಧನದಿಂದ ತೆರವಾಗಿರುವ ರಾಜ್ಯಸಭೆ ಸ್ಥಾನಕ್ಕೆ ಬಿಜೆಪಿ ಅಭ್ಯರ್ಥಿಯಾಗಿ ಡಾ. ಕೆ. ನಾರಾಯಣ್ ಕಣಕ್ಕಿಳಿಯಲಿದ್ದಾರೆ.

ಬಿಜೆಪಿಯಿಂದ ರಾಜ್ಯಸಭೆ ಸದಸ್ಯರಾಗಿದ್ದ ಅಶೋಕ್ ಗಸ್ತಿ ಕರೊನಾ ಸೋಂಕಿನಿಂದ ಇತ್ತೀಚಿಗೆ ಮೃತಪಟ್ಟಿದ್ದರು. ಗಸ್ತಿ ನಿಧನದಿಂದ ತೆರವಾಗಿರುವ ಸ್ಥಾನಕ್ಕೆ ಡಿಸೆಂಬರ್ 1 ರಂದು ಮತದಾನ ನಡೆಯಲಿದ್ದು, ಬಿಜೆಪಿಯು ಮಂಗಳೂರು ಮೂಲದ ಉದ್ಯಮಿ ನಾರಾಯಣ್ ಅವರನ್ನು ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿದೆ.

ದೇವಾಂಗ ಸಮುದಾಯಕ್ಕೆ ಸೇರಿದ ನಾರಾಯಣ್ ಆರ್​ಎಸ್ಎಸ್ ಹಿನ್ನೆಲೆಯುಳ್ಳವರು. ಉಪಚುನಾವಣೆಯ ನಾಮಪತ್ರ ಸಲ್ಲಿಕೆಗೆ ಕೊನೇ ದಿನ ನವೆಂಬರ್ 18.

ರಾಯಚೂರು ಜಿಲ್ಲೆಯ ಅಶೋಕ್​ ಗಸ್ತಿ ಅವರು ಸವಿತಾ ಸಮುದಾಯಕ್ಕೆ ಸೇರಿದ್ದವರು. ಅಲ್ಲದೆ ಕಲ್ಯಾಣ ಕರ್ನಾಟಕ ಪ್ರಾಂತ್ಯದಲ್ಲಿ ಮೂರೂವರೆ ದಶಕ ಪಕ್ಷಕ್ಕಾಗಿ ದುಡಿದಿದ್ದರು. ಹೀಗಾಗಿ ಈ ಬಾರಿಯೂ ಕಲ್ಯಾಣ ಕರ್ನಾಟಕ ಪ್ರಾಂತದ ಹಿಂದುಳಿದ ವರ್ಗಕ್ಕೆ ವರಿಷ್ಠರು ಮಣೆ ಹಾಕಲಿದ್ದಾರೆ ಎಂದೇ ಆರಂಭದಲ್ಲಿ ಹೇಳಲಾಗುತ್ತಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net