ನಿನ್ನೆ ದೀಪಿಕಾ ಪಡುಕೋಣೆ ಹಾಗೇಕೆ ಮಾಡಿದ್ರು?!; ಎಲ್ಲ ತೆಗೆದ ಅವರಿಂದು ಫೀಲಿಂಗ್ ಹೇಳಿಕೊಂಡಿದ್ದಾರೆ...

Untitled-1
Published on

ಬೆಂಗಳೂರು: ಬಾಲಿವುಡ್ ಬೆಡಗಿ ದೀಪಿಕಾ ಪಡುಕೋಣೆ ನಿನ್ನೆ ಮಾಡಿದ್ದ ಒಂದು ಕೆಲಸ ಅವರ ಅಭಿಮಾನಿಗಳನ್ನೆಲ್ಲ ಯೋಚಿಸುವಂತೆ ಮಾಡಿತ್ತು. ಒಮ್ಮೆ ಎಲ್ಲವನ್ನೂ ತೆಗೆದುಬಿಟ್ಟ ಅವರು ಅಭಿಮಾನಿಗಳು ಚಿಂತೆಗೀಡಾಗುವಂತೆ ಮಾಡಿದ್ದರು. ಮಾತ್ರವಲ್ಲ ಸಿನಿರಂಗದ ಕೆಲವರೂ ಕುತೂಹಲಕ್ಕೀಡಾಗಿದ್ದರು. ಅಷ್ಟಕ್ಕೂ ದೀಪಿಕಾ ಹಾಗೇಕೆ ಮಾಡಿದರು ಎಂಬುದು ನಿನ್ನೆ ಎಲ್ಲರಿಗೂ ಒಗಟಾಗಿಯೇ ಇತ್ತು.

ಈ ಹಿಂದೊಮ್ಮೆ ಖಿನ್ನತೆಗೆ ಒಳಗಾಗಿ ತಮ್ಮ ಡಿಪ್ರೆಷನ್​ ಕುರಿತು ಮುಕ್ತವಾಗಿ ದೀಪಿಕಾ ಹೇಳಿಕೊಂಡಿದ್ದರು. ಹೀಗಾಗಿ ಕೆಲವರು ದೀಪಿಕಾ ಮತ್ತೇನಾದರೂ ಖಿನ್ನತೆಗೆ ಒಳಗಾದರಾ ಎಂದುಕೊಂಡಿದ್ದರೂ ಅಚ್ಚರಿ ಏನಿಲ್ಲ. ಆದರೆ ಒಂದು ಇಸವಿ ಬದಲಾಗುವಷ್ಟರಲ್ಲಿ ದೀಪಿಕಾ ಪಡುಕೋಣೆ ಇದ್ದಕ್ಕಿದ್ದಂತೆ ಹೀಗೆ ನಡೆದುಕೊಂಡಿದ್ದು ಬಹುತೇಕರಲ್ಲಿ ಅಚ್ಚರಿ ಉಂಟು ಮಾಡಿದ್ದಂತೂ ನಿಜ.

ನಿನ್ನೆ ಹೀಗೆ ಹಲವರನ್ನು ಆತಂಕಕ್ಕೆ ಈಡುಮಾಡಿದ್ದ ದೀಪಿಕಾ ಪಡುಕೋಣೆ ಇಂದು ತಮ್ಮ ಫೀಲಿಂಗ್ ಹಂಚಿಕೊಂಡಿದ್ದರಿಂದ ಎಲ್ಲರೂ ನಿರಾಳರಾಗುವಂತಾಗಿದೆ. ಅಷ್ಟಕ್ಕೂ ದೀಪಿಕಾ ನಿನ್ನೆ ಮಾಡಿದ್ದೇನು?! ಅದು ನಿನ್ನೆ ತಮ್ಮ ಟ್ವಿಟರ್ ಹಾಗೂ ಇನ್​ಸ್ಟಾಗ್ರಾಮ್​ ಖಾತೆಯಲ್ಲಿನ ಎಲ್ಲ ಪೋಸ್ಟ್​ಗಳನ್ನು ದೀಪಿಕಾ ಡಿಲೀಟ್​ ಮಾಡಿದ್ದರು. ಅದನ್ನು ನೋಡಿ ಕೆಲವರು, ದೀಪಿಕಾ ಖಾತೆ ಹ್ಯಾಕ್​​ ಏನಾದರೂ ಆಯಿತಾ ಎಂದುಕೊಂಡಿದ್ದೂ ಇದೆ. ಆದರೆ ಎಲ್ಲದಕ್ಕೂ ಉತ್ತರವೆಂಬಂತೆ ಅವರು ಇಂದು ಆಡಿಯೋ ಕ್ಲಿಪ್​ ಒಂದನ್ನು ಟ್ವಿಟರ್​-ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿದ್ದಾರೆ.

ನನ್ನ ಆಡಿಯೋ ಡೈರಿಗೆ ಎಲ್ಲರಿಗೂ ಸುಸ್ವಾಗತ. ಇದು ನನ್ನ ಥಾಟ್ಸ್​ ಮತ್ತು ಫೀಲಿಂಗ್ಸ್​ನ ರೆಕಾರ್ಡ್​. 2020 ಎಲ್ಲರಿಗೂ ಒಂದು ಅನಿಶ್ಚಿತತೆಯ ವರ್ಷವಾಗಿತ್ತು ಎಂಬುದನ್ನು ನೀವೆಲ್ಲರೂ ಒಪ್ಪಿಕೊಳ್ಳುತ್ತೀರಿ. ಆದರೆ ನನಗೆ ಅದು ಗ್ರ್ಯಾಟಿಟ್ಯೂಡ್ ಹಾಗೂ ವಾಸ್ತವದಲ್ಲಿ ಬದುಕಲು ಸಿಕ್ಕ ಅವಕಾಶವೂ ಹೌದು. 2021ರಲ್ಲಿ ನನ್ನನ್ನೂ ಸೇರಿ ಎಲ್ಲರಿಗೂ ಒಳ್ಳೆಯ ಆರೋಗ್ಯ ಒದಗಲಿ ಎಂದು ದೀಪಿಕಾ ಆ ಆಡಿಯೋ ಕ್ಲಿಪ್​ ಮೂಲಕ ಹೊಸ ವರ್ಷದ ಶುಭಾಶಯ ಕೋರಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net