More

    ಅಪ್ಪನ ಆಸ್ತಿಯಲ್ಲಿ ತನ್ನಿಚ್ಛೆಯಂತೆ ಭಾಗ ಮಾಡುವ ಅಧಿಕಾರ ಅಮ್ಮನಿಗೆ ಇದೆಯೆ?

    ಪ್ರಶ್ನೆ: ನಾವು ಹಿಂದೂಗಳು. ನಮ್ಮ ತಂದೆ ತೀರಿಕೊಂಡಿದ್ದಾರೆ. ಅವರಿಗೆ ನಾಲ್ಕು ಗಂಡು ಮಕ್ಕಳು ಮತ್ತು ಒಂದು ಹೆಣ್ಣು ಮಗಳು ಇದ್ದಾಳೆ. ಎಲ್ಲಾ ಮಕ್ಕಳಿಗೆ ಮದುವೆ ಅಗಿದೆ . ನಮ್ಮ ತಾಯಿ ಇದ್ದಾರೆ. ಒಬ್ಬ ಮಗ ಒಬ್ಬ ಮಗಳು ತೀರಿಕೊಂಡಿದ್ದಾರೆ. ಮಗಳಿಗೆ 1982ರಲ್ಲೇ ಮದುವೆ ಆಗಿದೆ. ಅವಳಿಗೂ ಭಾಗ ಇದೆಯೇ? ಈಗ ನಮ್ಮ ತಾಯಿ ಅವರ ಇಚ್ಛೆಯಂತೆ ಆಸ್ತಿ ವಿಭಾಗ ಮಾಡಬಹುದೇ?

    ಉತ್ತರ: ಮೃತ ಹಿಂದೂ ಪುರುಷನ ಆಸ್ತಿ ಆತನ ಹೆಂಡತಿ ಮತ್ತು ಎಲ್ಲ ಮಕ್ಕಳಿಗೂ ಸಮಭಾಗ ಆಗುತ್ತದೆ. ನಿಮ್ಮ ತಾಯಿ ತನ್ನ ಆರನೇ ಒಂದು ಭಾಗದ ಆಸ್ತಿಯನ್ನು ಮಾತ್ರ ತನ್ನ ಇಷ್ಟ ಬಮದವರಿಗೆ ಕೊಡಬಹುದು. ಉಳಿದ ಎಲ್ಲ ಮಕ್ಕಳಿಗೂ ತಲಾ ಆರನೇ ಒಂದು ಭಾಗ ಇರುತ್ತದೆ. ತೀರಿಕೊಂಡಿರುವ ಮಗಳ ಪಾಲು ಆಕೆಯ ಗಂಡ ಮತ್ತು ಮಕ್ಕಳಿಗೆ ಹೋಗುತ್ತದೆ. ತೀರಿಕೊಂಡಿರುವ ಮಗನ ಪಾಲಿನಲ್ಲಿ ಮತ್ತೆ ಆತನ ಹೆಂಡತಿ ಮತ್ತು ಮಕ್ಕಳಿಗೆ ಮತ್ತು ತಾಯಿಗೂ ಸಹ ಪಾಲು ಬರುತ್ತದೆ. ಯಾವಾಗ ಮದುವೆ ಆದರೂ ಆಸ್ತಿಯ ಹಕ್ಕಿಗೆ ಚ್ಯತಿ ಬರುವುದಿಲ್ಲ.

    ಸೂಚನೆ: ಕಾನೂನಿಗೆ ಸಂಬಂಧಿಸಿದ ನಿಮ್ಮ ಪ್ರಶ್ನೆಗಳನ್ನು [email protected] ಗೆ ಕಳುಹಿಸಬಹುದು. (ಕೋರ್ಟ್‌ಗಳಲ್ಲಿ ಇತ್ಯರ್ಥಕ್ಕೆ ಬಾಕಿ ಇರುವ ಪ್ರಕರಣಗಳಿಗೆ ಸಂಬಂಧಿಸಿದ ಪ್ರಶ್ನೆಗಳನ್ನು ದಯವಿಟ್ಟು ಕೇಳಬೇಡಿ)

    ಕಾನೂನಿಗೆ ಸಂಬಂಧಿಸಿದ ಇತರ ಪ್ರಶ್ನೋತ್ತರಗಳಿಗಾಗಿ https://www.vijayavani.net/ ಗೆ ಭೇಟಿ ಕೊಟ್ಟು ಅಂಕಣ ವಿಭಾಗದಲ್ಲಿ ನ್ಯಾಯದೇವತೆ ಸೆಕ್ಷನ್​ ಮೇಲೆ ಕ್ಲಿಕ್​ ಮಾಡಿ. ಅಥವಾ ಈ ಲಿಂಕ್​ ಕ್ಲಿಕ್ಕಿಸಿhttps://www.vijayavani.net/category/%e0%b2%a8%e0%b3%8d%e0%b2%af%e0%b2%be%e0%b2%af%e0%b2%a6%e0%b3%87%e0%b2%b5%e0%b2%a4%e0%b3%86/

    ಮಾವಂದಿರು ಕೊಡುವ ಜಮೀನಿಗೆ ಅವರ ಮಕ್ಕಳಿಂದ ತಕರಾರು ಬರದಿರಲು ಏನು ಮಾಡಬೇಕು?

    ನೀನು ಬೇಡ, ಗರ್ಭದಲ್ಲಿರುವ ಮಗು ಬೇಕು ಅಂತಿದ್ದಾರೆ- ಡಿವೋರ್ಸ್​ ಆದ್ರೆ ಮುಂದೇನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts