

ಈಗ ಅವರಿಬ್ಬರೂ ತೀರಿಕೊಂಡಿದ್ದಾರೆ. ನನಗೆ ಇಪ್ಪತ್ತೆಂಟು ವರ್ಷ. ತಾಯಿ, ತಂಗಿ ಇದ್ದಾರೆ. ಮಾವಂದಿರು ಈಗ ನನಗೆ ಜಮೀನು ಕೊಡಬೇಕೆಂದಿದ್ದಾರೆ. ಮುಂದೆ ಅವರ ಮಕ್ಕಳಿಂದಾಗಲೀ, ನನ್ನ ತಂಗಿಯಿಂದಾಗಲೇ ಅವರು ಕೊಡುವ ಜಮೀನಿನ ಬಗ್ಗೆ ತಕರಾರು ಬರದೇ ಇರಲು ಏನು ಮಾಡಬೇಕು?
ಉತ್ತರ: ನೀವು ನಿಮ್ಮ ಸೋದರ ಮಾವಂದಿರ ಕಡೆಯಿಂದ ನೋಂದಾಯಿತ ದಾನಪತ್ರ ಮಾಡಿಸಿಕೊಳ್ಳಿ. ಅವರು ನಿಮಗೆ ಏಕೆ ದಾನ ಮಾಡುತ್ತಿದ್ದಾರೆ ಎನ್ನುವ ಕಾರಣವನ್ನು ಅದರಲ್ಲಿ ಬರೆಯಿಸಿ. ಮ್ಮ ಮಾವಂದಿರ ಮಕ್ಕಳ ಒಪ್ಪಿಗೆ ಸಾಕ್ಷಿ ಬೇಕಿದ್ದರೆ ಹಾಕಿಸಿ.
ದಾನ ಪತ್ರ ಆದ ಮೇಲೆ ಖಾತೆ ಬದಲಾಯಿಸಿಕೊಳ್ಳಿ. ನಿಮ್ಮ ತಂಗಿಗೆ ಆ ಆಸ್ತಿಯಲ್ಲಿ ಯಾವ ಹಕ್ಕೂ ಬರುವುದಿಲ್ಲ.
(ನ್ಯಾಯದೇವತೆ ಅಂಕಣದ ಹಿಂದಿನ ಪ್ರಶ್ನೋತ್ತರಗಳನ್ನು ನೋಡಲು http://vijayavani.net ಕ್ಲಿಕ್ಕಿಸಿ. ಅಲ್ಲಿ ಅಂಕಣ ಕಾಲಮ್‌ನಲ್ಲಿ ನ್ಯಾಯದೇವತೆ ಎಂದು ಇದ್ದು ಅದರ ಮೇಲೆ ಕ್ಲಿಕ್ ಮಾಡಿದರೆ ಎಲ್ಲವೂ ಲಭ್ಯ.)