More

    ಇಳೆಗೆ ಮಳೆಯ ಸಿಂಚನ: ಎಲ್ಲೆಡೆಯೂ ತಂಪೆರದ ವರುಣ

    ಹುಳಿಯಾರು: ಚಿಕ್ಕನಾಯಕನಹಳ್ಳಿ ತಾಲೂಕಿನ ಬಹುತೇಕ ಕಡೆ ಮಂಗಳವಾರ ಸಂಜೆ ಮಳೆಯ ದರ್ಶನವಾಗಿದ್ದು ಭೂಮಿ ತಂಪಾಯಿತು, ಸಂಜೆಯವರೆಗೂ ಬಿರುಗಾಳಿ, ಗುಡುಗು, ಸಿಡಿಲಿನ ಸಹಿತ ಆಲಿಕಲ್ಲಿನ ಮೊದಲ ಮಳೆ ಸುರಿದಿದ್ದು ನೂರಾರು ಮರಗಳು ಧರೆಗುರುಳಿವೆ.

    .ವಿದ್ಯುತ್ ಪೂರೈಕೆಯ ಟ್ರಾನ್ಸ್ ಫಾರ್ಮರ್ ಗಳೂ, ಲೈನುಗಂಬಗಳು ಉರುಳಿ ಬಿದ್ದಿವೆ. ಹುಳಿಯಾರು ಸಮೀಪದ ಲಕ್ಷ್ಮೀಪುರದ ನಿವಾಸಿ ಶಿವಣ್ಣ ಎಂಬುವವರ ಮನೆ ಮೇಲೆ ಮರದ ಕೊಂಬೆಯ ಉರುಳಿಬಿದ್ದು ಮನೆಯ ಕಟ್ಟಡಕ್ಕೆ ಅಪಾರ ನಷ್ಟವುಂಟಾಗಿದೆ.

    ಇಳೆಗೆ ಮಳೆಯ ಸಿಂಚನ: ಎಲ್ಲೆಡೆಯೂ ತಂಪೆರದ ವರುಣ

    ಹಂದನಕೆರೆ ಹೋಬಳಿ, ಕಂದಿಕೆರೆ ಭಾಗದಲ್ಲೂ ಮರಗಳು ಉರುಳಿಬಿದ್ದಿರುವ ಮಾಹಿತಿ ಕೇಳಿಬಂದಿದೆ, ತಿಮ್ಮನಹಳ್ಳಿ ಸರ್ಕಾರಿ ಶಾಲೆಯ ಮೇಲ್ಛಾವಣಿ ಮಳೆಗಾಳಿಗೆ ಹಾರಿ ಬಿದ್ದಿದ್ದರೆ, ಕೆ ಸಿ ಪಾಳ್ಯದ ಚಂದ್ರಶೇಖರ್ ಎಂಬುವವರಿಗೆ ಸೇರಿದ ತೋಟದಲ್ಲಿ ತೆಂಗಿನ ಮರಗಳು ಉರುಳಿಬಿದ್ದಿವೆ.

    ಬಳ್ಳೆಕಟ್ಟೆ ನರ್ಸರಿಯಲ್ಲಿ ರಾಶಿಗಟ್ಟಳೆ ಆಲಿಕಲ್ಲು ಸಂಗ್ರಹವಾಗಿ ಕರಗಿವೆ, ಬೆಳಗುಲಿಯ ಪಾಪನಕೋಣ‌ ರಸ್ತೆಯಲ್ಲಿನ ಟ್ರಾನ್ಸ್ ಫಾರ್ಮರ್ ಮೇಲೆ ವಿದ್ಯುತ್ ಕಂಬ ಮುರಿದುಬಿದ್ದು ಅದು ಹಾನಿಗೊಳಗಾಗಿದೆ. ತಮ್ಮಡಿಹಳ್ಳಿಯ ಗೋಕುಲನಗರದಲ್ಲಿ ಟಿಸಿ ಮೇಲೆ ಮರ ಮುರಿದುಬಿದ್ದು ಟಿಸಿ ಮುರಿದುಕೊಂಡಿದೆ.

    ಇಳೆಗೆ ಮಳೆಯ ಸಿಂಚನ: ಎಲ್ಲೆಡೆಯೂ ತಂಪೆರದ ವರುಣ

    ಮಳೆ ಬಂದದ್ದೇ ತಡ ಚಿಕ್ಕನಾಯಕನಹಳ್ಳಿ ಸೇರಿದಂತೆ ಹುಳಿಯಾರು ಪಟ್ಟಣ ಮತ್ತು ತಾಲ್ಲೂಕಿನ ಎಲ್ಲೆಡೆಯಲ್ಲೂ ವಿದ್ಯುತ್ ಕಡಿತಗೊಂಡಿದೆ, ಚಿಕ್ಕನಾಯಕನಹಳ್ಳಿ ಪಟ್ಟಣದಲ್ಲೂ ಒಂದು ಗಂಟೆಗೂ ಮೀರಿ ಮಳೆ ಸುರಿದಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts