More

    2021ರಲ್ಲಿ ನಡೆಯಲಿರುವ ಪ್ರಮುಖ ಘಟನೆಗಳು ಹಾಗೂ ವಿದ್ಯಮಾನ

    ನೂತನ ಸಂವತ್ಸರಕ್ಕೆ ಜಗತ್ತು ಕಾಲಿಟ್ಟಿದೆ. ಹೊಸ ವರ್ಷದಲ್ಲಿನ ಪ್ರಮುಖ ವಿದ್ಯಮಾನ, ಕಾರ್ಯಕ್ರಮಗಳಿಗೆ ಸಾಕ್ಷಿಯಾಗಲು ಇಡೀ ವಿಶ್ವ ಸಜ್ಜಾಗಿದೆ. ಅಂತಾರಾಷ್ಟ್ರೀಯ, ರಾಷ್ಟ್ರ-ರಾಜ್ಯ ರಾಜಕಾರಣ, ರಾಜ್ಯದ ಪ್ರಸಿದ್ಧ ಜಾತ್ರಾ ಮಹೋತ್ಸವ, ಸಾಹಿತ್ಯ, ಕ್ರೀಡೆ, ಸಿನಿಮಾ ಹೀಗೆ ಕ್ಷೇತ್ರವಾರು ಆಯ್ದ ವಿದ್ಯಮಾನಗಳ ಸಂಕ್ಷಿಪ್ತ ಮುನ್ನೋಟ ಇಲ್ಲಿದೆ…

    ದೇಶ

    ಕುಂಭಮೇಳ

    2021ರಲ್ಲಿ ಹರಿದ್ವಾರದಲ್ಲಿ 48 ದಿನ ಕುಂಭಮೇಳ ಆಯೋಜಿಸ ಲಾಗುತ್ತಿದೆ. ಮೂರೂವರೆ ತಿಂಗಳ ಕಾಲ ಕುಂಭಮೇಳ ನಡೆಯುತ್ತಿತ್ತಾದರೂ ಈ ಬಾರಿ ಕರೊನಾ ಬಿಕ್ಕಟ್ಟಿನಿಂದಾಗಿ ಅವಧಿ ಕಡಿತಗೊಳಿಸಲಾಗಿದೆ. ಜನವರಿ 1ರ ಬದಲಾಗಿ ಫೆಬ್ರವರಿಯಲ್ಲಿ ಕುಂಭಮೇಳಕ್ಕೆ ಅಧಿಸೂಚನೆ ಹೊರಡಿಸಲಾಗುತ್ತದೆ ಎಂದು ಉತ್ತರಾಖಂಡ ಸರ್ಕಾರ ತಿಳಿಸಿದೆ.

    ಚಂದ್ರಯಾನ -3

    ಭಾರತದ ಮಹತ್ವಾಕಾಂಕ್ಷೆಯ ಚಂದ್ರಯಾನ-2 ಭಾಗಶಃ ಯಶಸ್ವಿಯಾದ ಬೆನ್ನಲ್ಲೇ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ‘ಚಂದ್ರಯಾನ-3’ ತಯಾರಿ ನಡೆಸಿದೆ. ಕರೊನಾ ಬಿಕ್ಕಟ್ಟಿನಿಂದಾಗಿ ಈ ಯೋಜನೆ ವಿಳಂಬವಾಗಿದೆಯಾದರೂ ವರ್ಷಾಂತ್ಯಕ್ಕೆ ಅಥವಾ 2022ರ ಆರಂಭದಲ್ಲಿ ಉಡಾವಣೆ ನಡೆಯುವ ಸಾಧ್ಯತೆ ಇದೆ.

    ಗಗನಯಾನ

    ಭಾರತದ ಮತ್ತೊಂದು ಮಹತ್ವಾಕಾಂಕ್ಷಿ ಯೋಜನೆ ಗಗನಯಾತ್ರಿಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸುವ ‘ಗಗನಯಾನ’ ಕರೊನಾ ದಿಂದಾಗಿ ವಿಳಂಬ ವಾಗಿದೆ. ಮುಖ್ಯ ಯೋಜನೆಗೂ ಮೊದಲು ಪರೀಕ್ಷಾರ್ಥ ವಾಗಿ ನಡೆಸಲಾಗುವ ಮಾನವರಹಿತ ಉಡಾವಣೆ 2021ರಲ್ಲಿ ನಡೆಯಲಿದೆ. ಗಗನಯಾನಿಗಳ ಸಹಿತ ಉಡಾವಣೆ 2022ರಲ್ಲಿ ನಡೆಯುವ ಸಾಧ್ಯತೆ ಇದೆ.

    ಜನಗಣತಿ

    2021ರಲ್ಲಿ ಭಾರತವು 16ನೇ ಸಾರ್ವತ್ರಿಕ ಜನಗಣತಿ ನಡೆಸಲಿದೆ. ಇದಕ್ಕಾಗಿ ಈಗಾಗಲೇ ಸಿದ್ಧತೆಗಳನ್ನು ನಡೆಸಲಾಗಿದ್ದು, ಇದೇ ಮೊದಲ ಬಾರಿಗೆ ಡಿಜಿಟಲ್ ತಂತ್ರಜ್ಞಾನದ ಮೂಲಕ ಗಣತಿ ಪ್ರಕ್ರಿಯೆ ನಡೆಯಲಿದೆ. ಗಣತಿದಾರರು ಸರ್ಕಾರ ನಿಗದಿಪಡಿಸಿದ ಆಪ್ ಮೂಲಕ ತಮ್ಮ ಮೊಬೈಲ್​ನಲ್ಲಿ ಗಣತಿ ದಾಖಲೆ ಕಲೆಹಾಕುತ್ತಾರೆ. ಇದರ ಜತೆಗೆ ರಾಷ್ಟ್ರೀಯ ಜನಸಂಖ್ಯಾ ನೋಂದಣಿ (ಎನ್​ಪಿಆರ್)ಯನ್ನೂ ನಡೆಸಲಾಗುತ್ತದೆ.

    ವಿದೇಶ

    ಚಂದ್ರಗ್ರಹಣ

    2021ರ ಮೇ 26ರಂದು ಪೂರ್ಣ ಚಂದ್ರಗ್ರಹಣ ಜರುಗಲಿದೆ. 2019ರ ಜನವರಿ ಬಳಿಕ ನಡೆಯುತ್ತಿರುವ ಮೊದಲ ಪೂರ್ಣ ಚಂದ್ರಗ್ರಹಣ ಇದಾಗಿದ್ದು, ಆಗ್ನೇಯ ಏಷ್ಯಾ, ಆಸ್ಟ್ರೇಲಿಯಾ, ಅಲಾಸ್ಕಾ, ಕೆನಡಾ, ಹವಾಯಿ ಮತ್ತು ದಕ್ಷಿಣ ಅಮೆರಿಕ ಸೇರಿ ಬಹುತೇಕ ಭಾಗಗಳಲ್ಲಿ ಗೋಚರಿಸಲಿದೆ.

    ಸೂರ್ಯಗ್ರಹಣ

    2021ರ ಜೂನ್ 10ರಂದು ವಾರ್ಷಿಕ ಸೂರ್ಯಗ್ರಹಣ ಸಂಭವಿಸಲಿದೆ. 21ನೇ ಶತಮಾನದಲ್ಲಿ ಉತ್ತರ ಧ್ರುವದ ಮೇಲೆ ಹಾದು ಹೋಗುವ ಏಕೈಕ ಸೂರ್ಯಗ್ರಹಣ ಇದಾಗಿರುವುದರಿಂದ ಮಹತ್ವ ಪಡೆದಿದೆ. ಡಿಸೆಂಬರ್ 4ರಂದು ಪೂರ್ಣ ಸೂರ್ಯಗ್ರಹಣ ಸಂಭವಿಸಲಿದೆ.

    ಬೈಡೆನ್ ಅಧಿಕಾರ ಸ್ವೀಕಾರ

    ಅಮೆರಿಕದ ನಿಯೋಜಿತ ಅಧ್ಯಕ್ಷ ಜೋ ಬೈಡೆನ್ ಮತ್ತು ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಜನವರಿ 20ರಂದು ಅಧ್ಯಕ್ಷ ಹಾಗೂ ಉಪಾಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಲಿದ್ದಾರೆ. ಬೈಡೆನ್ ಅಮೆರಿಕದ 46ನೇ ಅಧ್ಯಕ್ಷರು.

    ಚುನಾವಣೆಗಳು

    ಪಶ್ಚಿಮ ಬಂಗಾಳ, ತಮಿಳುನಾಡು, ಅಸ್ಸಾಂ, ಕೇರಳ ಹಾಗೂ ಪುದುಚೆರಿಯಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಲೋಕಸಭೆಯಲ್ಲಿ ತೆರವಾಗಿರುವ ಮೂರು ಸ್ಥಾನಗಳು ಸೇರಿದಂತೆ ಹಲವು ರಾಜ್ಯಗಳಲ್ಲಿ ಖಾಲಿಯಾಗಿರುವ ವಿಧಾನಸಭೆ ಸ್ಥಾನಗಳಿಗೆ ಉಪಚುನಾವಣೆ ನಡೆಯಲಿದೆ.

    ರಾಜ್ಯದಲ್ಲಿ ಚುನಾವಣೆಗಳು

    • ಜಿಲ್ಲಾ – ತಾಲೂಕು ಪಂಚಾಯ್ತಿ ಚುನಾವಣೆ (ಮೇ ಒಳಗೆ ಮುಗಿಯಬೇಕು)
    • ಬಿಬಿಎಂಪಿ ಚುನಾವಣೆ
    • ಬಸವಕಲ್ಯಾಣ, ಮಸ್ಕಿ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ
    • ಬೆಳಗಾವಿ ಲೋಕಸಭಾ ಕ್ಷೇತ್ರ ಉಪಚುನಾವಣೆ
    • ಧಮೇಗೌಡ ಆತ್ಮಹತ್ಯೆಯಿಂದ ತೆರವಾಗಿರುವ ಮೇಲ್ಮನೆ ಸ್ಥಾನಕ್ಕೆ ಉಪಚುನಾವಣೆ (2024ವರೆಗೂ ಅವಧಿ ಇದೆ)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts