

ಚೆನ್ನೈ: ದಿಗ್ಗಜ ಗಾಯಕ ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರ ಅಂತ್ಯಸಂಸ್ಕಾರ, ಶನಿವಾರ ಚೆನ್ನೈನ ರೆಡ್ ಹಿಲ್ಸ್ನ ಅವರ ಫಾರ್ಮ್ ಹೌಸ್ನಲ್ಲಿ ನಡೆದಿದೆ. ಈ ಅಂತ್ಯಕ್ರಿಯೆಯಲ್ಲಿ ಹಲವು ಸೆಲೆಬ್ರಿಟಿಗಳು ಹಾಜರಿದ್ದು, ಅಗಲಿದ ಹಿರಿಯ ಗಾಯಕನಿಗೆ ಅಂತಿಮ ನಮನ ಸಲ್ಲಿಸಿದರು.
ಈ ಪೈಕಿ, ತಮಿಳು ಚಿತ್ರರಂಗದ ಪೈಕಿ ನಟ ವಿಜಯ್ ಅವರು ಸಹ ಈ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದಾರೆ. ಈ ಸಂದರ್ಭದಲ್ಲಿ ಅವರು ಮಾಡಿದ ಕೆಲಸವೊಂದು ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸುದ್ದಿಯಾಗುವುದರ ಜತೆಗೆ ಸಾಕಷ್ಟು ಚರ್ಚೆಯಾಗುತ್ತಿದೆ.
ಯಾವಾಗ ವಿಜಯ್ ಅವುರ ಎಸ್ಪಿಬಿ ಅವರ ಅಂತಿಮದರ್ಶನ ಪಡೆಯುವುದಕ್ಕೆ ಫಾರ್ಮ್ಹೌಸ್ಗೆ ಬರುತ್ತಿದ್ದಾರೆ ಎಂಬ ವಿಷಯ ಗೊತ್ತಾಯಿತೋ, ಆಗ ವಿಜಯ್ ಅವರ ಹಲವು ಅಭಿಮಾನಿಗಳು ಅವರನ್ನು ನೋಡುವುದಕ್ಕೆ ಫಾರ್ಮ್ಹೌಸ್ಗೆ ನುಗ್ಗಿದ್ದಾರೆ. ಈ ಸಂದರ್ಭದಲ್ಲಿ, ಅಭಿಮಾನಿಗಳನ್ನು ಸಂಭಾಳಿಸುವುದಕ್ಕೆ ಪೊಲೀಸರು ಸಾಕಷ್ಟು ಶ್ರಮಪಡಬೇಕಾಗಿದೆ.
ಈ ಮಧ್ಯೆ, ವಿಜಯ್ ಅವರು ಎಸ್ಪಿಬಿ ಅವರ ಅಂತಿಮ ದರ್ಶನ ಮುಗಿಸಿ ತಮ್ಮ ಕಾರಿನತ್ತ ವಾಪಸ್ಸು ಬರುವಾಗ, ಗದ್ದಲದಲ್ಲಿ ತಮ್ಮ ಕಾಲು ತಗುಲಿದ್ದರಿಂದ ಅಭಿಮಾನಿಯೊಬ್ಬರ ಚಪ್ಪಲಿ ಮಿಸ್ ಆಗಿದೆ. ವಿಜಯ್ ತಕ್ಷಣ ಬಗ್ಗಿ ಅಭಿಮಾನಿಯ ಚಪ್ಪಲಿಯನ್ನು ಅವರಿಗೆ ಎತ್ತಿಕೊಟ್ಟಿದ್ದಾರೆ.
ಈ ವಿಷಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ದೊಡ್ಡ ನಟನೊಬ್ಬನ ಈ ಸರಳತೆ ಬಗ್ಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.