ಬಾಯ್​​ಫ್ರೆಂಡ್ ಹುಟ್ಟುಹಬ್ಬಕ್ಕೆ 25 ಲಕ್ಷ ರೂ. ಖರ್ಚು ಮಾಡಿದ ನಯನತಾರಾ

Nayanatara Sept 28
Published on

ಚೆನ್ನೈ: ಲಾಕ್​ಡೌನ್​ನಿಂದ ಊರು ಬಿಟ್ಟು ಹೋಗದೆ ಬಹಳ ದಿನಗಳೇ ಆದವು ಎಂಬ ಕಾರಣಕ್ಕೆ ಗೋವಾಗೆ ತಮ್ಮ ಬಾಯ್ಫ್ರೆಂಡ್ ಜತೆಗೆ ಹೋಗಿದ್ದಾಗಿ ಹೇಳಿಕೊಂಡಿದ್ದರು ನಯನತಾರಾ. ಆದರೆ, ಇದೀಗ ಅವರು ಮತ್ತು ಬಾಯ್ಫ್ರೆಂಡ್ ವಿಘ್ನೇಶ್ ಶಿವನ್ ಗೋವಾಗೆ ಹೋದ ಅಸಲಿ ವಿಷಯ ಬಹಿರಂಗವಾಗಿದೆ. ಅದೇನೆಂದರೆ, ನಯನತಾರಾ ಗೋವಾಗೆ ಹೋಗಿದ್ದು ಶಿವನ್ ಅವರ ಹುಟ್ಟುಹಬ್ಬವನ್ನು ಆಚರಿಸುವುದಕ್ಕಂತೆ.

ಅಷ್ಟೇ ಅಲ್ಲ, ಮೂರು ದಿನಗಳ ಈ ಟ್ರಿಪ್​ಗೆ ಅವರು ಖರ್ಚು ಮಾಡಿದ ಮೊತ್ತ 25 ಲಕ್ಷವಂತೆ. ಹಾಗಂತ ಸುದ್ದಿಯೊಂದು ಸಿಕ್ಕಾಪಟ್ಟೆ ವೈರಲ್ ಆಗಿದೆ. ಗೋವಾಗೆ ಹೋಗುವುದಕ್ಕೆಂದೇ ಅವರು ವಿಶೇಷ ಚಾರ್ಟರ್ಡ್ ಫ್ಲೈಟ್ ಮಾಡಿಕೊಂಡು ಹೋಗಿದ್ದು, ಅದಕ್ಕೇ ಸಾಕಷ್ಟು ಹಣ ಖರ್ಚಾಗಿದೆ. ಇನ್ನು ತಮ್ಮ ವುಡ್​ಬಿಗೆ ದುಬಾರಿ ಗಿಫ್ಟ್​ವೊಂದನ್ನು ಕೊಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net