ವರ್ಷಾಂತ್ಯಕ್ಕೆ ವಿಘ್ನೇಶ್​ ಶಿವನ್​, ನಯನತಾರಾ ಮದುವೆ?

Nayantara - Vignesh Sivan - Final
Published on

ಚೆನ್ನೈ: 'ಲೇಡಿ ಸೂಪರ್​ಸ್ಟಾರ್' ಬಿರುದಾಂಕಿತ ನಯನತಾರಾ ಮತ್ತು ಜನಪ್ರಿಯ ನಿರ್ದೇಶಕ ವಿಘ್ನೇಶ್​ ಶಿವನ್​ ಕಳೆದ ನಾಲ್ಕು ವರ್ಷಗಳಿಂದ ಡೇಟಿಂಗ್​ ಮಾಡುತ್ತಿರುವ ವಿಷಯ ಗೊತ್ತೇ ಇದೆ. ಸದ್ಯದಲ್ಲೇ ಇಬ್ಬರೂ ಹಸೆಮಣೆ ಏರಲಿದ್ದಾರೆ ಎಂಬ ಸುದ್ದಿ ಕಳೆದ ಎರಡು ವರ್ಷಗಳಿಂದ ಬರುತ್ತಲೇ ಇದೆ. ಆದರೆ, ಅದೇಕೋ ಅವರಿಬ್ಬರೂ ಮದುವೆಯಾಗುವ ಘಳಿಗೆ ಇನ್ನೂ ಬಂದಿಲ್ಲ.

ಇದೀಗ, ವಿಘ್ನೇಶ್ ಶಿವನ್​ ಈ ವರ್ಷಾಂತ್ಯಕ್ಕೆ ಮದುವೆಯಾಗುವ ಹಿಂಟ್​ ಕೊಟ್ಟಿದ್ದಾರೆ. ಇತ್ತೀಚೆಗೆ, ಸೋಷಿಯಲ್​ ಮೀಡಿಯಾದಲ್ಲಿ ತಮ್ಮ ಅಭಿಮಾನಿಗಳ ಪ್ರಶ್ನೆಗಳಿಗೆ ಉತ್ತರಿಸಿರುವ ಅವರು, ಕರೊನಾ ಹಾವಳಿ ಮುಗಿದ ಮೇಲೆ, ಬಹುಶಃ ಈ ವರ್ಷದ ಕೊನೆಯಲ್ಲಿ ಮದುವೆಯಾಗುವುದಾಗಿ ಅವರು ಹೇಳಿದ್ದಾರೆ.

ಅಭಿಮಾನಿಯೊಬ್ಬರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, 'ಸದ್ಯಕ್ಕೆ ಮದುವೆಗೆ ಒಂದಿಷ್ಟು ಹಣ ಉಳಿಸುತ್ತಿದ್ದೇನೆ. ಕರೊನಾ ಹಾವಳಿ ಕಡಿಮೆಯಾಗುವುದಕ್ಕೆ ಕಾಯುತ್ತಿದ್ದೇವೆ. ಬಹುಶಃ ಈ ವರ್ಷದ ಕೊನೆಯ ಹೊತ್ತಿಗೆ, ಮದುವೆಯಾಗುವ ಸಾಧ್ಯತೆ ಇದೆ' ಎಂದು ಅವರು ಹೇಳಿಕೊಂಡಿದ್ದಾರೆ. ಮೂಲಗಳ ಪ್ರಕಾರ, ಶಿವನ್​ ತಂದೆ-ತಾಯಿ, ತಮ್ಮ ಮಗ ಗ್ರಾಂಡ್​ ಆಗಿ ಮದುವೆ ಆಗಬೇಕು ಎಂದು ಆಸೆ ವ್ಯಕ್ತಪಡಿಸಿದ್ದು, ಅದೇ ಕಾರಣಕ್ಕೆ ಮದುವೆ ಸ್ವಲ್ಪ ವಿಳಂಬವಾಗುತ್ತಿದೆ ಎಂದು ಹೇಳಲಾಗುತ್ತಿದೆ.

'ನಾನುಮ್​ ರೌಡಿ ದಾನ್​' ಚಿತ್ರದ ಚಿತ್ರೀಕರಣದ ಸಂದರ್ಭದಲ್ಲಿ ವಿಘ್ನೇಶ್​ ಹಾಗೂ ನಯನತಾರಾ ನಡುವೆ ಪ್ರೀತಿ ಟಿಸಿಲೊಡೆದಿದ್ದು, ಅಂದಿನಿಂದ ಇಬ್ಬರೂ ಜತೆಯಾಗಿದ್ದಾರೆ. ಸದ್ಯ ಇಬ್ಬರೂ ತಮ್ಮದೇ ಚಿತ್ರಗಳಲ್ಲಿ ತೊಡಗಿಸಿಕೊಂಡಿದ್ದು, ಈಗ ಒಪ್ಪಿರುವ ಚಿತ್ರಗಳನ್ನು ಮುಗಿಸಿ, ಆ ನಂತರ ಇಬ್ಬರೂ ಮದುವೆಯಾಗುವ ಸಾಧ್ಯತೆ ಇದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net