ಮಾಧುರಿ, ರವೀನಾ ಒಂದೇ ವೇದಿಕೆಯಲ್ಲಿ! ಡ್ಯಾನ್ಸ್​​ ನಂಬರ್​ಗಳ ಎಕ್ಸ್​​ಚೇಂಜ್!

madrav
Published on

ನವದೆಹಲಿ : 1990 ರ ದಶಕದಲ್ಲಿ ಬಾಲಿವುಡ್​ನ ಡ್ಯಾನ್ಸ್​ ಸೆನ್ಸೇಷನ್​ಗಳಾಗಿದ್ದ ಮಾಧುರಿ ದೀಕ್ಷಿತ್​ ಮತ್ತು ರವೀನಾ ಟಂಡನ್ ಇತ್ತೀಚೆಗೆ ಕಲರ್ಸ್​ ವಾಹಿನಿಯ ಡ್ಯಾನ್ಸ್​ ದೀವಾನೆ 3 ವೇದಿಕೆಯಲ್ಲಿ ಭೇಟಿಯಾಗಿದ್ದಾರೆ. ತಮ್ಮ ಹಾಡುಗಳನ್ನು ಎಕ್ಸ್​ಚೇಂಜ್ ಮಾಡಿಕೊಂಡು ಪರಸ್ಪರರ ಹಿಟ್​ ನಂಬರ್​ಗಳಿಗೆ ಹೆಜ್ಜೆ ಹಾಕಿ, ನೋಡುಗರನ್ನು ರಂಜಿಸಿದ್ದಾರೆ.

ಮಾಧುರಿ ಅವರು ರವೀನಾರ 'ಟಿಪ್​ ಟಿಪ್​ ಬರ್ಸಾ ಪಾನಿ' ಹಾಡಿಗೆ ನೃತ್ಯ ಮಾಡಿದರೆ, ರವೀನಾ ಅವರು ಮಾಧುರಿಯ 'ಧಕ್​ ಧಕ್​ ಕರ್ನೇ ಲಗಾ' ಹಾಡಿಗೆ ಹೆಜ್ಜೆ ಹಾಕಿದರು. ಕೊನೆಯಲ್ಲಿ ಇಬ್ಬರೂ ಒಟ್ಟಿಗೆ ರವೀನಾರ ಹಿಟ್​ ನಂಬರ್ 'ಅಖಿಯೋಂಸೆ ಗೋಲಿ ಮಾರೆ' ಸ್ಟೆಪ್​ಗಳನ್ನು ರಂಜನೀಯವಾಗಿ ಪ್ರದರ್ಶಿಸಿದರು.

ಇನ್ಸ್​ಟಾಗ್ರಾಂನಲ್ಲಿ ಕಲರ್ಸ್​ ಟಿವಿ ಪೋಸ್ಟ್​ ಮಾಡಿರುವ ಈ ವಿಡಿಯೋ ನೋಡಿ -

ಮಾಧುರಿ ದೀಕ್ಷಿತ್ ಅವರು ನೃತ್ಯ ಸ್ಪರ್ಧೆಯ ಶೋ ಆಗಿರುವ ಡ್ಯಾನ್ಸ್​ ದಿವಾನೆ ಕಾರ್ಯಕ್ರಮದ ಓರ್ವ ತೀರ್ಪುಗಾರರಾಗಿದ್ದಾರೆ. ರವೀನಾ ಟಂಡನ್ ಪ್ರಸ್ತುತ ವಿಶೇಷ ಸಂಚಿಕೆಗೆ ವಿಶೇಷ ಅತಿಥಿಯಾಗಿ ಭಾಗವಹಿಸಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net