ವಿನೂತನ ದಾಖಲೆ ಬರೆದ ವಿಕ್ಟರಿ ವೆಂಕಟೇಶ್​ ಮಗಳು: ಏಷ್ಯಾದಲ್ಲೇ 27ನೇ ಸ್ಥಾನ

Victory Venkatesh
Published on

ಹೈದರಾಬಾದ್​: ಟಾಲಿವುಡ್​ ಚಿತ್ರರಂಗದ ಖ್ಯಾತ ಹಿರಿಯ ನಟ ವಿಕ್ಟರಿ ವೆಂಕಟೇಶ್​ ಎಲ್ಲರಿಗೂ ಪರಿಚಿತರೆ. ಆದರೆ, ಅವರ ಮಗಳ ಬಗ್ಗೆ ಯಾರಿಗೂ ಅಷ್ಟಾಗಿ ತಿಳಿದಿಲ್ಲ. ಸಿನಿಮಾದಿಂದ ದೂರ ಉಳಿದಿರುವ ವೆಂಕಟೇಶ್​ ಮಗಳು ಆಶ್ರೀತಾ ದಗ್ಗುಬಾಟಿ ಬೇರೆ ಕ್ಷೇತ್ರದಲ್ಲಿ ವಿನೂತನ ದಾಖಲೆಯೊಂದನ್ನು ಬರೆದಿದ್ದಾರೆ.

ಹೌದು. ಇತ್ತಿಚೆಗೆ ಬಿಟುಗಡೆಯಾದ ಇನ್​ಸ್ಟಾಗ್ರಾಂ ಶ್ರೀಮಂತರ ಪಟ್ಟಿಯಲ್ಲಿ ಆಶ್ರೀತಾ ಕೂಡ ಸ್ಥಾನ ಪಟೆದಿದ್ದಾರೆ. ಅಡುಗೆ ಮಾಡುವ ಹವ್ಯಾಸ ಹೊಂದಿರುವ ಅವರು ಇನ್ಫಿನಿಟಿ ಪ್ಲ್ಯಾಟರ್​ ಹೆಸರಿನಲ್ಲಿ ಇನ್​ಸ್ಟಾಗ್ರಾಮ್​ನಲ್ಲಿ ಖಾತೆ ತೆರೆದು ವಿವಿಧ ಅಡುಗೆ ರೆಸಿಪಿಗಳನ್ನು ಹಂಚಿಕೊಳ್ಳುತ್ತಾರೆ.

ಇನ್​ಸ್ಟಾಗ್ರಾಂನಲ್ಲಿ ಅವರು 13 ಲಕ್ಷ ಫಾಲೋವರ್ಸ್​ ಹೊಂದಿದ್ದಾರೆ. ಇತ್ತೀಚೆಗೆ Hopper.com ಇನ್​ಸ್ಟಾಗ್ರಾಂನಲ್ಲಿ ಹೆಚ್ಚು ಸಂಪಾದಿಸುವ ಸೆಲೆಬ್ರಿಟಿಗಳ ಪಟ್ಟಿಯನ್ನು ಬಿಡುಗಡೆ ಮಾಡಿತು. ಅದರಲ್ಲಿ ಫುಟ್​ಬಾಲ್​ ಆಟಗಾರ ಕ್ರಿಶ್ಟಿಯಾನೋ ರೊನಾಲ್ಡೊ ಮೊದಲ ಸ್ಥಾನ ಪಡೆದುಕೊಂಡಿದ್ದಾರೆ.

ಭಾರತದಿಂದ ವಿರಾಟ್​ ಕೊಹ್ಲಿ ಮತ್ತು ಪ್ರಿಯಾಂಕಾ ಚೋಪ್ರಾ ಪಟ್ಟಿಯಲ್ಲಿದ್ದಾರೆ. ಅದೇ ಪಟ್ಟಿಯಲ್ಲಿ ವೆಂಕಟೇಶ್​ ಪುತ್ರಿ ಆಶ್ರೀತಾ ಕೂಡ ಸ್ಥಾನ ಪಡೆದಿದ್ದಾರೆ. ಪಟ್ಟಿಯಲ್ಲಿ ವಿಶ್ವದ 377ನೇ ಸ್ಥಾನ ಪಡೆದಿರುವ ಆಶ್ರೀತಾ ಏಷ್ಯಾದಲ್ಲಿ 27ನೇ ಸ್ಥಾನದಲ್ಲಿದ್ದಾರೆ. ಈ ಬಗ್ಗೆ ಅವರು ಸಂತಸವನ್ನು ಹಂಚಿಕೊಂಡಿದ್ದಾರೆ.

ಅಂದಹಾಗೆ ಆಶ್ರೀತಾ 2019ರಲ್ಲಿ ವಿನಾಯಕ ರೆಡ್ಡಿ ಎಂಬುವವರನ್ನು ಮದುವೆ ಆಗಿದ್ದು, ಪ್ರಸ್ತುತ ಸ್ಪೇನ್​ನ ಬಾರ್ಸಿಲೋನಾದಲ್ಲಿ ನೆಲೆಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net