More

    ಐಸಿಯುನಲ್ಲಿ ಐಸ್‌ಕ್ರೀಂ ತಿಂದ ಮಹಿಳೆಯ ಸಾವು! ವೈದ್ಯರ ವಿರುದ್ಧ ದೂರಿದ್ದ ಸಂಬಂಧಿಯ ಆತ್ಮಹತ್ಯೆ?

    ನವದೆಹಲಿ: ಕೈ ಕಾಲುಗಳಿಂದ ರಕ್ತಸ್ರಾವ ಉಂಟಾಗಿ ಆಸ್ಪತ್ರೆಗೆ ದಾಖಲಾಗಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಹಿಳೆಯೊಬ್ಬರು, ಅಲ್ಲಿ ಐಸ್‌ಕ್ರೀಂ ಸೇವಿಸುತ್ತಿದ್ದಂತೆಯೇ ಪ್ರಾಣಬಿಟ್ಟ ಘಟನೆ ದೆಹಲಿಯಲ್ಲಿ ನಡೆದಿದೆ. ಇದರಿಂದ ವೈದ್ಯರು ಕೂಡ ಶಾಕ್‌ ಆಗಿದ್ದಾರೆ.

    ರೋಸಿ ಎಂಬ 29 ವರ್ಷದ ಮಹಿಳೆ ಈ ದುರ್ದೈವಿ. ನಾಗಾಲ್ಯಾಂಡ್‍ನ ದಿಮಪುರದ ನಿವಾಸಿಯಾಗಿರುವ ಇವರು ದೆಹಲಿಯಲ್ಲಿ ವಾಸವಿದ್ದರು. ಜೂ. 23ರಂದು ಇವರಿಗೆ ರಕ್ತಸ್ರಾವ ಉಂಟಾಗಿತ್ತು. ಆದ್ದರಿಂದ ಅವರನ್ನು ಮೊದಲು ಸ್ಯಾಮ್ಯುಯೆಲ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಗುರುಗ್ರಾಮದ ಸೆಕ್ಟರ್ 10ರಲ್ಲಿನ ಆಲ್ಫಾ ಆಸ್ಪತ್ರೆಗೆ ಶಿಫ್ಟ್‌ ಮಾಡಲಾಗಿತ್ತು. ಆರೋಗ್ಯ ಸುಧಾರಿಸುವಂತೆ ಕಂಡಿತ್ತು. ಆಗ ಇವರಿಗೆ ಐಸ್‌ಕ್ರೀಂ ತಿನ್ನುವ ಇಚ್ಛೆಯುಂಟಾಗಿತ್ತು. ಆದ್ದರಿಂದ ಅವರ ಅಕ್ಕನ ಮಗ ಐಸ್‌ಕ್ರೀಂ ತಂದುಕೊಟ್ಟಿದ್ದ.

    ಅದನ್ನು ವೈದ್ಯರ ಎದುರೇ ರೋಸಿ ಸೇವಿಸಿದ್ದರು. ಕೂಡಲೇ ಮೃತಪಟ್ಟಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ವೈದ್ಯರು ಇದಕ್ಕೂ ನಮಗೂ ಸಂಬಂಧವಿಲ್ಲ. ಅವರು ಸ್ಪ ಇಚ್ಛೆಯಿಂದ ಐಸ್ ಕ್ರೀಂ ತಿಂದಿದ್ದು, ಆಸ್ಪತ್ರೆಯ ಮೇಲೆ ದೂರು ಹೇಳುವುದು ಸರಿಯಲ್ಲ ಎಂದಿದ್ದಾರೆ.

    ಐಸಿಯುನಲ್ಲಿ ಐಸ್‌ಕ್ರೀಂ ಅಷ್ಟೇ ಅಲ್ಲದೇ ಬೇರೆ ಏನನ್ನೂ ತಿನ್ನಲು ವೈದ್ಯರು ಅವಕಾಶ ನೀಡಬಾರದು. ಆದರೆ ವೈದ್ಯರು ನಿರ್ಲಕ್ಷ್ಯದಿಂದ ಅದಕ್ಕೆ ಅನುಮತಿ ನೀಡಿದ್ದು, ಅವರೇ ಇದಕ್ಕೆ ನೇರ ಹೊಣೆ ಎಂದು ಅವರ ಸಂಬಂಧಿ ಸ್ಯಾಮುಯೆಲ್‌ ವಿಡಿಯೋ ಮಾಡಿ ಆರೋಪಿಸಿದ್ದರು. ಅಚ್ಚರಿ ಎಂದರೆ ಇದಾದ 24 ಗಂಟೆಗಳ ಬಳಿಕ ಸ್ಯಾಮುಯೆಲ್ ಕೂಡ ಮೃತಪಟ್ಟಿದ್ದಾರೆ.

    ಹೋಟೆಲ್ ರೂಮ್‍ನಲ್ಲಿ ಸ್ಯಾಮುಯೆಲ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿದೆ. ಆದರೆ ಮುಖದ ಮೇಲೆ ಹಲ್ಲೆ ಮಾಡಿದ ಗುರುತುಗಳು ಕಂಡು ಬಂದಿದ್ದು, ಕೊಲೆ ಎಂದು ತಂದೆ ದೂರು ಸಲ್ಲಿಸಿದ್ದಾರೆ. ಮೇಲ್ನೋಟಕ್ಕೆ ಇದು ಆತ್ಮಹತ್ಯೆ ಎಂದು ಗುರುತಿಸಲಾಗಿದೆ, ಮರಣೋತ್ತರ ಪರೀಕ್ಷೆ ವರದಿಗೆ ಕಾಯುತ್ತಿದ್ದೇವೆ ಎಂದು ಪೊಲೀಸರು ಹೇಳಿದ್ದಾರೆ.

    ‘ಪ್ರಧಾನಿ ಮೋದಿ ವಿರುದ್ಧ ಬರೆಯಬಲ್ಲ, ಸರ್ಕಾರ ಉರುಳಿಸಬಲ್ಲ, ಭಾರತ ವಿರೋಧಿ ವರದಿಗಾರರು ಬೇಕಾಗಿದ್ದಾರೆ’

    ಆನ್‌ಲೈನ್‌ ಕ್ಲಾಸ್‌ನಲ್ಲೇ ವಿದ್ಯಾರ್ಥಿಗೆ ಬಂತು ‘ಮೂಡ್‌’! ಬಟ್ಟೆ ಹಾಕಿಕೊಳ್ಳುವಷ್ಟರಲ್ಲಿ ನಡೆದೇ ಹೋಯ್ತು ಎಡವಟ್ಟು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts