More

    ಹೃದಯಾಘಾತದಿಂದ ತಾಸೆ ಕಲಾವಿದ ಸಾವು

    ಕಾಸರಗೋಡು: ತಾಸೆ ಕಲಾವಿದ, ಯುವಕ ಹೃದಯಾಘಾತದಿಂದ ಸೋಮವಾರ ದೇರಳಕಟ್ಟೆಯಲ್ಲಿ ನಿಧನರಾಗಿದ್ದಾರೆ. ಬಾಯಾರು ಕಲ್ಲಗದ್ದೆ ನಿವಾಸಿ ದೇರಳಕಟ್ಟೆಯಲ್ಲಿ ಬಾಡಿಗೆ ಕೊಠಡಿಯಲ್ಲಿ ವಾಸಿಸುತ್ತಿದ್ದ ಮೌನೇಶ್ ಜೋಗಿ(23) ಸಾವಿಗೀಡಾದವರು.

    ಬಾಯಾರು ಕಲ್ಲಗದ್ದೆಯ ವರದರಾಜ್-ನಂದಿತಾ ದಂಪತಿಯ ಪುತ್ರ ಮೌನೇಶ್ ಜೋಗಿ ಮಂಗಳೂರಿನ ತಂಡವೊಂದರಲ್ಲಿ ಕಾರ್ಯನಿರ್ವಹಿಸುತ್ತಿದ್ದು ಭಾನುವಾರ ರಾತ್ರಿ ಕಾರ್ಯಕ್ರಮ ಮುಗಿಸಿ ಸೋಮವಾರ ಬೆಳಗ್ಗೆ ದೇರಳಕಟ್ಟೆಯ ಕೊಠಡಿಗೆ ಆಗಮಿಸಿದ ಅಲ್ಪಹೊತ್ತಿನಲ್ಲಿ ಕುಸಿದು ಬಿದ್ದಿದ್ದರು. ತಕ್ಷಣ ಜತೆಗಿದ್ದವರು ದೇರಳಕಟ್ಟೆಯ ಆಸ್ಪತ್ರೆಗೆ ದಾಖಲಿಸಿದರೂ ಪ್ರಯೋಜನವಾಗಿರಲಿಲ್ಲ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts