ಅಕ್ರಮ ಗಣಿಗಾರಿಕೆ, ಆರು ವಾಹನಗಳ ವಶ

Mining
Published on

ಕಾಸರಗೋಡು: ಮಂಜೇಶ್ವರ ತಾಲೂಕು ವ್ಯಾಪ್ತಿಯಲ್ಲಿ ಅಕ್ರಮ ಗಣಿಗಾರಿಕೆ ವಿರುದ್ಧ ಮಂಜೇಶ್ವರ ಭೂಮಾಪನ ತಹಸೀಲ್ದಾರ್ ಕೆ.ಜಿ.ಮೋಹನರಾಜ್ ನೇತೃತ್ವದ ತಾಲೂಕು ಸ್ಕ್ವಾಡ್ ವಿವಿಧ ಗ್ರಾಮಗಳ ಆರು ಅಕ್ರಮ ಗಣಿಗಾರಿಕಾ ಕೇಂದ್ರಗಳಿಗೆ ದಾಳಿ ನಡೆಸಿತು. ಜಿಲ್ಲಾಧಿಕಾರಿ ಕೆ.ಇನ್ಬಾಶೇಖರ್ ನಿರ್ದೇಶದನ್ವಯ ಕಾರ್ಯಾಚರಣೆ ನಡೆಸಲಾಗಿದೆ.

ವಿವಿಧ ಗ್ರಾಮಗಳಲ್ಲಿ ಕಾರ್ಯಾಚರಿಸುವ ಅಕ್ರಮ ಗಣಿಗಾರಿಕಾ ಕೇಂದ್ರಗಳಿಗೆ ಸೇರಿದ ಆರು ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ಕಳೆದ ವಾರ ಅಕ್ರಮ ಗಣಿಗಾರಿಕೆಯಲ್ಲಿ ತೊಡಗಿದ್ದ 10 ವಾಹನಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಅಕ್ರಮ ಗಣಿಗಾರಿಕೆ ವಿರುದ್ಧ ಮತ್ತಷ್ಟು ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net