More

    ಕೊಂಕಣ್ ರೈಲುಗಳ ಮಳೆಗಾಲದ ವೇಳಾಪಟ್ಟಿ ಪರಿಷ್ಕರಣೆ

    ಮಂಗಳೂರು: ಕೊಂಕಣ ರೈಲು ಮಾರ್ಗದ ಮೂಲಕ ಹಾದುಹೋಗುವ ರೈಲುಗಳ ಮಳೆಗಾಲದ ವೇಳಾಪಟ್ಟಿಯನ್ನು ಜೂನ್ 1 ರಿಂದ ಅನ್ವಯವಾಗುವಂತೆ ಪರಿಷ್ಕರಿಸಲಾಗಿದೆ ಎಂದು ದಕ್ಷಿಣ ರೈಲ್ವೆಯ ಫಾಲ್ಘಾಟ್ ವಿಭಾಗ ತಿಳಿಸಿದೆ.

    ಎರ್ನಾಕುಳಂ ಜಂಕ್ಷನ್‌ಪುಣೆ ಜಂಕ್ಷನ್ (ರೈಲು ಸಂಖ್ಯೆ 22149) ಮತ್ತು ಎರ್ನಾಕುಳಂ ಜಂಕ್ಷನ್‌ಹಜರತ್ ನಿಜಾಮುದ್ದೀನ್ ಜಂಕ್ಷನ್ (ರೈಲು ಸಂಖ್ಯೆ 22655) ರೈಲುಗಳು ಬೆಳಗ್ಗೆ 5.15ರ ಬದಲು (ಮಧ್ಯರಾತ್ರಿ ) 2.15ಕ್ಕೆ ಹೊರಡಲಿದೆ. ಮಡಗಾಂವ್ ಜಂಕ್ಷನ್ ಮಂಗಳೂರು ಸೆಂಟ್ರಲ್ (10107) ರೈಲು ಬೆಳಗ್ಗೆ 4 ಗಂಟೆಯ ಬದಲು ಬೆಳಗ್ಗೆ 4.40ಕ್ಕೆ ಹೊರಡಲಿದೆ. ಕೊಚ್ಚುವೇಲಿಯೋಗ್ ನಗರಿ ಋಷಿಕೇಶ್ (22659), ಕೊಚ್ಚುವೇಲಿಚಂಡೀಗಢ (12217), ಕೊಚ್ಚುವೇಲಿ ಅಮೃತಸರ (12483) ರೈಲುಗಳು ಬೆಳಗ್ಗೆ 9.10ರ ಬದಲು ಬೆಳಗ್ಗೆ 4.50ಕ್ಕೆ ಹೊರಡಲಿದೆ.

    ತಿರುನಲ್ವೇಲಿ ಜಂಕ್ಷನ್‌ಜಾಮ್‌ನಗರ್ (19577) ಮತ್ತು ತಿರುನಲ್ವೇಲಿ ಜಂಕ್ಷನ್‌ಗಾಂಧಿಧಾಮ್ (20923) ರೈಲುಗಳು ಬೆಳಗ್ಗೆ 8ರ ಬದಲು ಬೆಳಗ್ಗೆ 5.15ಕ್ಕೆ, ಕೊಚ್ಚುವೇಲಿಲೋಕಮಾನ್ಯ ತಿಲಕ್ ಟರ್ಮಿನಲ್ (12202) ರೈಲು ಬೆಳಗ್ಗೆ 9ರ ಬದಲು ಬೆಳಗ್ಗೆ 7.45ಕ್ಕೆ, ಮಡಗಾಂವ್ ಜಂಕ್ಷನ್‌ಮಂಗಳೂರು ಸೆಂಟ್ರಲ್ (06601) ರೈಲು ಮಧ್ಯಾಹ್ನ 2 ಗಂಟೆಯ ಬದಲಿಗೆ ಸಂಜೆ 3 ಗಂಟೆಗೆ, ಮಡಗಾಂವ್ ಜಂಕ್ಷನ್ ಮಂಗಳೂರು ಸೆಂಟ್ರಲ್ (20645) ರೈಲು ಸಂಜೆ 6.10ರ ಬದಲು ಸಂಜೆ 5.35ಕ್ಕೆ, ಕುಚ್ಚುವೇಲಿಇಂದೋರ್ ಜಂಕ್ಷನ್ (20931) ಮತ್ತು ಕುಚ್ಚುವೇಲಿಪೋರ್‌ಬಂದರ್ (20909) ರೈಲು ಬೆಳಗ್ಗೆ 11.15ರ ಬದಲು ಬೆಳಗ್ಗೆ 9.10ಕ್ಕೆ ಹೊರಡಲಿದೆ.

    ಎರ್ನಾಕುಳಂ ಜಂಕ್ಷನ್‌ಹಜರತ್ ನಿಜಾಮುದ್ದೀನ್ ಜಂಕ್ಷನ್ (12617) ರೈಲು ಮಧ್ಯಾಹ್ನ 1.25ರ ಬದಲು ಬೆಳಗ್ಗೆ 10.30ಕ್ಕೆ, ಕೊಯಮತ್ತೂರು ಜಂಕ್ಷನ್‌ಹಿಸಾರ್ (22476) ರೈಲು ಮಧ್ಯಾಹ್ನ 2.55ರ ಬದಲು ಮಧ್ಯಾಹ್ನ 1.30ಕ್ಕೆ, ಮಂಗಳೂರು ಸೆಂಟ್ರಲ್‌ಲೋಕಮಾನ್ಯ ತಿಲಕ್ ಟರ್ಮಿನಲ್ (12620) ರೈಲು ಮಧ್ಯಾಹ್ನ 2.20ರ ಬದಲು ಮಧ್ಯಾಹ್ನ 12.45ಕ್ಕೆ, ಎರ್ನಾಕುಳಂ ಜಂಕ್ಷನ್‌ಮಡಗಾಂವ್ ಜಂಕ್ಷನ್ (10216) ರೈಲು ಬೆಳಗ್ಗೆ 10.40ರ ಬದಲು ಮಧ್ಯಾಹ್ನ 1.25ಕ್ಕೆ, ತಿರುವನಂತಪುರ ಸೆಂಟ್ರಲ್‌ಹಜರತ್ ನಿಜಾಮುದ್ದೀನ್ ಜಂಕ್ಷನ್ (12431) ರಾತ್ರಿ 7.15ರ ಬದಲು ಮಧ್ಯಾಹ್ನ 2.40ಕ್ಕೆ, ಮಂಗಳೂರು ಜಂಕ್ಷನ್‌ಮುಂಬೈ ಸಿಎಸ್‌ಟಿ (12134) ಮಧ್ಯಾಹ್ನ 2ರ ಬದಲು ಸಂಜೆ 4.35ಕ್ಕೆ, ಎರ್ನಾಕುಳಂ ಜಂಕ್ಷನ್‌ಅಜ್ಮೀರ್ ಜಂಕ್ಷನ್ (12977) ರಾತ್ರಿ 8.25ರ ಬದಲು ಸಂಜೆ 6.50ಕ್ಕೆ, ಮಡಗಾಂವ್ ಜಂಕ್ಷನ್‌ಎರ್ನಾಕುಳಂ ಜಂಕ್ಷನ್ (10215) ರಾತ್ರಿ 7.30ರ ಬದಲು ರಾತ್ರಿ 9ಕ್ಕೆ, ತಿರುವನಂತಪುರ ಸೆಂಟ್ರಲ್‌ಹಜರತ್ ನಿಜಾಮುದ್ದೀನ್ ಜಂಕ್ಷನ್ ಶುಕರವಾರ ತಡರಾತ್ರಿ 12.50ರ ಬದಲು ಶುಕ್ರವಾರ ರಾತ್ರಿ 10 ಗಂಟೆಗೆ ಹೊರಡಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts