More

    ‘ಪ್ರಧಾನಿ ಮೋದಿ ವಿರುದ್ಧ ಬರೆಯಬಲ್ಲ, ಭಾರತ ವಿರೋಧಿ ವರದಿಗಾರರು ಬೇಕಾಗಿದ್ದಾರೆ’

    ನ್ಯೂಯಾರ್ಕ್‌: ‘ನಮ್ಮ ಪತ್ರಿಕೆಗೆ ಅನುಭವಿ ವರದಿಗಾರರು ಬೇಕಾಗಿದ್ದಾರೆ. ಆದರೆ ಒಂದು ಷರತ್ತು, ಅವರು ಭಾರತದ ವಿರುದ್ಧ ಬರೆಯಬೇಕು, ಜತೆಗೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ತೇಜೋವಧೆ ಮಾಡುವಂಥ ಬರಹಗಳನ್ನು ಬರೆಯಬೇಕು’ ಎಂಬ ಜಾಹೀರಾತನ್ನು ಪ್ರಕಟಿಸಿದೆ ನ್ಯೂಯಾರ್ಕ್‌ ಟೈಮ್ಸ್‌!

    ಅಮೆರಿಕದಿಂದ ಪ್ರಕಟಣೆಯಾಗುವ ಈ ದಿನ ಪತ್ರಿಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಸರಣವನ್ನು ಹೊಂದಿದ್ದು, ತಮ್ಮ ಪತ್ರಿಕೆಗೆ ವರದಿಗಾರರು ಬೇಕಾಗಿದ್ದಾರೆ ಎಂದು ಪ್ರಕಟಿಸಿದೆ. ಭಾರತ ವಿರೋಧಿ, ಪ್ರಧಾನಿ ವಿರೋಧಿ ಹೇಳಿಕೆ ಕುರಿತಂತೆ ಪತ್ರಿಕೆ ನೇರವಾಗಿ ವಿಷಯ ಉಲ್ಲೇಖ ಮಾಡದಿದ್ದರೂ. ಪರೋಕ್ಷವಾಗಿ ಇದೇ ಅರ್ಥ ಬರುವ ಜಾಹೀರಾತನ್ನು ನೀಡಿರುವ ಕಾರಣ, ಇದೀಗ ಇದೀಗ ಅಂತಾರಾಷ್ಟ್ರೀಯ ಮಟ್ಟದಲ್ಲಿಯೂ ಚರ್ಚೆಗೆ ಗ್ರಾಸವಾಗಿದೆ.

    ತಮ್ಮ ವೆಬ್‌ಸೈಟ್‌ನಲ್ಲಿ ಹಾಗೂ ಲಡ್‌ಕೇನ್‌ ಸೈಟ್‌ನಲ್ಲಿ ಈ ಜಾಹೀರಾತನ್ನು ಪತ್ರಿಕೆ ನೀಡಿದೆ. ಅದರಲ್ಲಿಯೂ ಇಂಥ ‘ಅರ್ಹತೆ‘ ಇರುವ ವರದಿಗಾರರನ್ನು ಪತ್ರಿಕೆ ನೇಮಕ ಮಾಡಿಕೊಳ್ಳುತ್ತಿರುವುದು ದೆಹಲಿಯಲ್ಲಿರುವ ತನ್ನ ಕಚೇರಿಯಲ್ಲಿ!

    ’ಜನಸಂಖ್ಯೆಯ ದೃಷ್ಟಿಯಿಂದ ಭಾರತವು ಚೀನಾಗೆ ಸವಾಲೊಡ್ಡುತ್ತಿದೆ ಹಾಗೂ ವಿಶ್ವ ಮಟ್ಟದಲ್ಲಿ ಅದು ಶ್ರೇಷ್ಠನಾಗಬೇಕೆಂಬ ಮಹತ್ವಾಕಾಂಕ್ಷೆಯನ್ನು ಹೊಂದಿದೆ. ಭಾರತದಲ್ಲಿನ ಹಾಲಿ ಸರ್ಕರ ಬದಲಾಯಿಸಬೇಕಿದೆ. ಆದ್ದರಿಂದ ಭಾರತ ಸರ್ಕಾರದ ವಿರುದ್ಧ ಬರೆಯಬಲ್ಲವರು ಹಾಗೂ ಭಾರತದಲ್ಲಿನ ಹಾಲಿ ಸರ್ಕಾರ ಬದಲಾಯಿಸಲು ಸಹಾಯ ಮಾಡುವ ವರದಿಗಾರರು ಬೇಕಾಗಿದ್ದಾರೆ’ ಎಂದು ಜಾಹೀರಾತಿನಲ್ಲಿ ಇದೆ.
    ‘ವಿಶ್ವ ವೇದಿಕೆಯಲ್ಲಿ ಭಾರತವು ಉನ್ನತ ಸ್ಥಾನ ಹೊಂದುವ ಮಹತ್ವಾಕಾಂಕ್ಷೆಯನ್ನು ಹೊಂದಿದೆ. ಪ್ರಧಾನಿ ಮೋದಿ ಅವರ ವರ್ಚಸ್ಸಿನಿಂದ ಚೀನಾದ ಆರ್ಥಿಕ ಮತ್ತು ರಾಜಕೀಯ ಹಿಡಿತಕ್ಕೆ ಭಾರತವು ಪ್ರತಿಸ್ಪರ್ಧಿಯಾಗಲು ಹೊರಟಿದೆ. ಆದ್ದರಿಂದ ಸರ್ಕಾರ ಬದಲಾಯಿಸುವಂಥ ಬರಹಗಳನ್ನು ಬರೆಯುವವರು ಬೇಕಾಗಿದ್ದಾರೆ’ ಎಂದೂ ನಮೂದು ಮಾಡಲಾಗಿದೆ!

    https://twitter.com/WIONews/status/1411017236043603976

    ಈ ಹಿಂದೆ ಕೂಡ ಅಂದರೆ 2018ರಲ್ಲಿ ನ್ಯೂಯಾರ್ಕ್‌ ಟೈಮ್ಸ್‌ ಮತ್ತು ವಾಷಿಂಗ್ಟನ್‌ ಪೋಸ್ಟ್‌ ಪತ್ರಿಕೆಗಳು ಭಾರತದ ವಿರೋಧಿ ಹೇಳಿಕೆ ನೀಡುವ ಪ್ರಚೋದಾನ್ಮಕ ಬರಹಗಳನ್ನು ಪ್ರಕಟಿಸಿದ್ದವು.
    ಅಂದಹಾಗೆ, ಕಳೆದ ನಾಲ್ಕು ವರ್ಷಗಳಲ್ಲಿ ಚೀನಾದಿಂದ ಅಮೆರಿಕದ ಪತ್ರಿಕೆಗಳಿಗೆ ಸುಮಾರು 142 ಕೋಟಿ ರೂಪಾಯಿಗಳ ಜಾಹೀರಾತುಗಳನ್ನು ನೀಡಲಾಗಿದೆ. ಅದರಲ್ಲಿ ‘ವಾಲ್ ಸ್ಟ್ರೀಟ್ ಜರ್ನಲ್’ಗೆ 44.73 ಕೋಟಿ, ‘ವಾಷಿಗ್ಟನ್ ಪೋಸ್ಟ್’ಗೆ 34.29 ಕೋಟಿ, ನ್ಯೂಯಾರ್ಕ್ ಟೈಮ್ಸ್‌ಗೆ 3.72 ಕೋಟಿ ರೂಪಾಯಿಗಳ ಜಾಹೀರಾತು ನೀಡಲಾಗಿದೆ.

    ಮಗನ ವಯಸ್ಸಿನವನ ಜತೆ ಪತ್ನಿಯ ಕಾಮದಾಟಕ್ಕೆ ಬಲಿಯಾದ ಮಂಡ್ಯದ ಉಪ ಪ್ರಾಂಶುಪಾಲ! ಕೊಲೆ ರಹಸ್ಯ ಬಯಲು..

    ಮದುವೆಯೆಂಬ ದುಃಸ್ವಪ್ನ: ಒಟ್ಟಿಗೇ ಸಾವಿನ ಹಾದಿ ತುಳಿದ ಮಂಡ್ಯದ ಅವಳಿ ಸಹೋದರಿಯರು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts